Farm Laws Repeal: ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ ಜನಶಕ್ತಿಯ ಎದುರು ಆತ ಮಣಿಯಲೇ ಬೇಕು: ಸಿದ್ದರಾಮಯ್ಯ

ಕೃಷಿ‌ಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ (Farmer’s Family) ಕೇಂದ್ರ ಸರ್ಕಾರ ತಲಾ 25 ಲಕ್ಷ ರೂಪಾಯಿ‌ ಪರಿಹಾರ ಕೊಡಬೇಕೆಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬೆಂಗಳೂರು: ಇಂದು ಕೇಂದ್ರ ಸರ್ಕಾರ ತನ್ನ ಮೂರು ವಿವಾದಿತ ಮೂರು ಕೃಷಿ ಕಾನೂನು(Farms Law) ಗಳನ್ನು ಹಿಂಪಡೆದುಕೊಂಡಿದೆ. ದೇಶವನ್ನು ಉದ್ದೇಶಿಸಿದ ಮಾತನಾಡಿದ ಪ್ರಧಾಮ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ದೇಶವನ್ನು ಉದ್ದೇಶಿಸಿ ಮಾತನಾಡಿ, ಕೃಷಿ ಕಾನೂನು ಹಿಂಪಡೆಯುತ್ತಿರುವ ಮಹತ್ವದ ನಿರ್ಧಾರ ಘೋಷಿಸಿದರು. ಕೇಂದ್ರದ ಈ ನಿರ್ಧಾರದ ಕುರಿತು ಮಾಡಜಿ ಸಿಎಂ ಸಿದ್ದರಾಮಯ್ಯ (Former Minister Siddaramaiah), ಕರಾಳ ಕೃಷಿ ಕಾಯ್ದೆಗಳನ್ನು (Farm Laws Repeal) ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ದೇಶದ ಮಣ್ಣಿನ ಮಕ್ಕಳ‌ ಅಭೂತಪೂರ್ವ ಹೋರಾಟಕ್ಕೆ‌ ಸಿಕ್ಕ ಗೆಲುವಾಗಿದೆ. ರೈತ (Farmers) ಹೋರಾಟಗಾರರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಕೃಷಿ‌ಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ (Farmer’s Family) ಕೇಂದ್ರ ಸರ್ಕಾರ ತಲಾ 25 ಲಕ್ಷ ರೂಪಾಯಿ‌ ಪರಿಹಾರ ಕೊಡಬೇಕೆಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಇದುವೇ ರೈತರ ಸ್ವಾತಂತ್ರ್ಯೋತ್ಸವ

ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇ ಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ. ಕೃಷಿ ಕಾಯ್ದೆ‌ಯಷ್ಟೇ ಅಲ್ಲ, ಕೇಂದ್ರ ಬಿಜೆಪಿ‌ ಸರ್ಕಾರದ ಪ್ರತಿಯೊಂದು ನೀತಿ ಮತ್ತು ಕಾರ್ಯಕ್ರಮಗಳು ರೈತ ವಿರೋಧಿಯಾದುದು. ಇದು ವಿರಮಿಸುವ ಕಾಲ ಅಲ್ಲ,‌ ರೈತ ವಿರೋಧಿ ಬಿಜೆಪಿ ವಿರುದ್ಧದ ಹೋರಾಟ ಮುಂದುವರಿಯಲಿದೆ.

ಇದನ್ನೂ ಓದಿ:  Farm Laws: ಪ್ರಧಾನಿ ಮೋದಿ ಮಹತ್ವದ ಘೋಷಣೆ: ಮೂರು ಕೃಷಿ ಕಾಯ್ದೆಗಳು ರದ್ದು

ರೈತರ ಹೋರಾಟಕ್ಕೆ ಸಿಕ್ಕ ಗೆಲುವಿನ‌‌ ಸ್ಪೂರ್ತಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ದ ಜನ ಹೋರಾಟಕ್ಕೆ ನಾಂದಿಯಾಗಲಿದೆ. ಪೆಟ್ರೋಲ್-ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ದೇಶದ ಜನ ಅಣಿಯಾಗಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ

ಇದು ರೈತರ ಗೆಲುವು, ರೈತರನ್ನು ಎದುರಾಕಿಕೊಂಡರೆ ಉಳಿಗಾಲವಿಲ್ಲ ಎನ್ನುವುದರ ಅರಿವು. ತಡವಾಗಿಯಾದರೂ ಈ ನಿರ್ಧಾರಕ್ಕೆ ಬಂದ ಪ್ರಧಾನಿ ಮೋದಿಗೆ ಧನ್ಯವಾದಗಳು. ರೈತರ ಈ ಹೋರಾಟ ದೇಶದ ಇತಿಹಾಸದಲ್ಲಿ ಮಾತ್ರವಲ್ಲ ಜಗತ್ತಿನ ಇತಿಹಾಸದಲ್ಲಿ ಉಳಿಯಲಿದೆ ಎಂದು ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ನ್ಯೂಸ್ 18 ಕನ್ನಡಕ್ಕೆ ಹೇಳಿದ್ದಾರೆ.

ಇದನ್ನೂ ಓದಿ:  ನೂತನ ಕೃಷಿ ಕಾನೂನಿನ ದೋಷ ಹುಡುಕುವಲ್ಲಿ ವಿಪಕ್ಷಗಳು, ರೈತ ಸಂಘಟನೆಗಳು ವಿಫಲ; ಕೇಂದ್ರ ಕೃಷಿ ಸಚಿವ

ನಮ್ಮ ಹೋರಾಟ ಕೆನೆಡಾ ಪಾರ್ಲಿಮೆಂಟ್, ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ಪ್ರಸ್ತಾಪವಾಗಿತ್ತು. ಇಡೀ ಜಗತ್ತು ನಮ್ಮ ಹೋರಾಟದ ಬಗ್ಗೆ ಮಾತನಾಡಿತ್ತು. ಇದರಿಂದ ಎಲ್ಲಾ ರಾಜಕೀಯ ಪಕ್ಷಗಳು ಒಂದನ್ನು ಅರಿಯಬೇಕು. ರೈತ ಶಕ್ತಿಯನ್ನು ಎದುರಾಕಿಕೊಂಡು ಸರ್ಕಾರ ನಡೆಸಲು ಆಗುವುದಿಲ್ಲ ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟರು.

ಈ ನಿರ್ಧಾರ ಸ್ವಾಗತಾರ್ಹ

ರೈತರಿಗೆ ದೇಶದ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿದೆ ಎಂಬುವುದಕ್ಕೆ ಇದು ಸೂಕ್ತ ನಿರ್ದಶನ. ಮುಂದಿನ ದಿನಗಳಲ್ಲಿ ಚಯನಾವಣೆಗಳು ಬರಲಿದೆ, ಅದಾದ ಬಳಿಕ ಮತ್ತೆ ಇದು ಮುನ್ನೆಲೆಗೆ ಬಂದರೆ ಹೋರಾಟದ ಸ್ವರೂಪ ಈ ರೀತಿ ಇರುವುದಿಲ್ಲ. ಏನೇ ಇದ್ದರೂ ಸದ್ಯ ಪ್ರಧಾನಿ ಮೋದಿ ತೆಗೆದುಕೊಂಡಿರುವ ಈ ನಿರ್ಧಾರ ಸ್ವಾಗತಾರ್ಹ ಎಂದರು.

ನಿಜವಾದ ಮತ್ತು ಶುದ್ಧ ಹೃದಯದಿಂದ ನಾನು ಭಾರತಕ್ಕೆ ಕ್ಷಮೆಯಾಚಿಸುತ್ತೇನೆ

ರೈತರು(Farmers) ತಮ್ಮ ಪ್ರತಿಭಟನೆ(Protest)ಯನ್ನು ವಾಪಾಸು ಪಡೆದು ತಮ್ಮ ಹೊಲಗಳಿಗೆ ಹಿಂತಿರುಗಿ ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಈ ವೇಳೆ ಮನವಿ ಮಾಡಿದ್ದಾರೆ. ಕೃಷಿ ಕಾನೂನುಗಳ ಬಗ್ಗೆ ರೈತರ ಒಂದು ವರ್ಗವನ್ನು ಮನವರಿಕೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ‘ನಿಜವಾದ ಮತ್ತು ಶುದ್ಧ ಹೃದಯದಿಂದ ನಾನು ಭಾರತಕ್ಕೆ ಕ್ಷಮೆಯಾಚಿಸುತ್ತೇನೆ’ ರೈತರಿಗೆ ಕೃಷಿ ಕಾನೂನುಗಳ ಬಗ್ಗೆ ಮನವರಿಕೆ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳು ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ನಾವು ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Published by:Mahmadrafik K
First published: