Stickers On Vehicle: ವಾಹನಗಳ ಮೇಲೆ ಬೇಕಾಬಿಟ್ಟಿ ಸ್ಟಿಕ್ಕರ್ಸ್ ಬಳಕೆಗೆ ಬ್ರೇಕ್?

ಖಾಸಗಿ ವಾಹನಗಳ ಮೇಲೆ ನಿಯಮ ಬಾಹಿರವಾಗಿ ವಾಹನಗಳ ನೋಂದಣಿ ಫಲಕಗಳ (Number Plate) ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ ಸಂಸ್ಥೆಯ ಹೆಸರು, ಚಿಹ್ನೆ, ಲಾಂಛನ ಇತ್ಯಾದಿ ಹೆಸರುಗಳನ್ನು ತೆರವುಗೊಳಿಸಬೇಕು ಎಂದು ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು  ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ(ಜೂ.07): ಸರ್ಕಾರಿ ಕಚೇರಿಯ (Govt Office) ಟೆಂಡರ್ ಆಧಾರಿತ ವಾಹನಗಳು (Vehicle) ಸೇರಿದಂತೆ ಖಾಸಗಿ ವಾಹನಗಳ ಮೇಲೆ ನಿಯಮ ಬಾಹಿರವಾಗಿ ವಾಹನಗಳ ನೋಂದಣಿ ಫಲಕಗಳ (Number Plate) ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ ಸಂಸ್ಥೆಯ ಹೆಸರು, ಚಿಹ್ನೆ, ಲಾಂಛನ ಇತ್ಯಾದಿ ಹೆಸರುಗಳನ್ನು ತೆರವುಗೊಳಿಸಬೇಕು ಎಂದು ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು  ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಕಾರುಗಳ (Car) ಮೇಲೆ ಖಾಸಗಿ ವ್ಯಕ್ತಿಗಳು ಅವರವರ ಹುದ್ದೆ, ಸಂಸ್ಥೆಯ ಹೆಸರು, ಸರ್ಕಾರದ ಚಿಹ್ನೆ ಬಳಸಿ ಬೋರ್ಡುಗಳನ್ನ ಹಾಕಿಕೊಂಡು ಓಡಾಟ ನಡೆಸುತ್ತಿರುವ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಲೇ ಇವೆ.

ಗ್ರಾಮ ಪಂಚಾಯ್ತಿ ಸದಸ್ಯರಿಂದ ಹಿಡಿದು ಜಿಲ್ಲಾ ಪಂಚಾಯ್ತ್ ಸದಸ್ಯರು ಓಡಾಟ ನಡೆಸೋ ಕಾರುಗಳ ಮೇಲೆ ಸರ್ಕಾರದ ಲಾಂಚನ ಬಳಸಾಗುತ್ತಿದೆ. ಅಲ್ಲದೇ ಸಂಘ ಸಂಸ್ಥೆಗಳ ಸದಸ್ಯರೂ ಕೂಡಾ ನಾಮ ಫಲಕ ಹೊಂದಿರುವ ಬೋರ್ಡ್ ಬಳಸಿ ಕಾರುಗಳನ್ನ ಚಲಾಯಿಸುತ್ತಿದ್ದಾರೆ.

ಬೇಕಾಬಿಟ್ಟಿಯಾಗಿ ಸ್ಟಿಕ್ಕರ್ಸ್ ಹಾಕುತ್ತಿರುವ ಜನ

ಇದರಿಂದ ಸರ್ಕಾರದ ಕಾನೂನು ನಿರ್ದೇಶನಕ್ಕೆ ಕಿಮ್ಮತ್ತಿಲ್ಲ ಎನ್ನುವಂತಾಗಿದೆ. ಇದರಿಂದ ಎಚ್ಚೆತ್ತ ಸಾರಿಗೆ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾಗಿದ್ದಾರೆ. ನಿಯಮಾನುಸಾರ ವಾಹನ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989 ನಿಯಮ 50ರಲ್ಲಿ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕಾಗಿರುತ್ತದೆ.

ಸರ್ಕಾರಿ ಲಾಂಛನಗಳ ಬಳಕೆ ಹೆಚ್ಚಳ

ಕರ್ನಾಟಕ ಮೋಟಾರು ವಾಹನ ನಿಯಮಗಳು 1989ರ ನಿಯಮ 145/ಎ ರಲ್ಲಿ ಖಾಸಗಿ ವಾಹನಗಳು ಸರ್ಕಾರದ ಲಾಂಛನ  ಮತ್ತು ಹೆಸರುಗಳನ್ನು ಅಳವಡಿಸಬೇಕಾದಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಳ್ಳುವುದು ಅವಶ್ಯಕ.

ಅನುಮತಿ ಕಡ್ಡಾಯ

ನಿಗಮ ಮಂಡಳಿಗಳ ಅಧ್ಯಕ್ಷ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಸಂಘ ಸಂಸ್ಥೆಗಳ ನೊಂದಣಿ ಫಲಕಗಳನ್ನು ಅಳವಡಿಸಿಕೊಂಡು ವಾಹನ ಸಂಚಾರ ಮಾಡಲಾಗುತ್ತಿದೆ. ಆದರೆ ಖಾಸಗಿ ವಾಹನಗಳು ಸರ್ಕಾರದ ಲಾಂಛನ ಮತ್ತು ಹೆಸರುಗಳನ್ನು ಅಳವಡಿಸಿಕೊಂಡು ಸಂಚರಿಸಬೇಕಾದರೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಮಾನದಂಡವನ್ನು ಮೀರಿ ವಾಹನ ಚಲಾಹಿಸಿದರೆ ಮೋಟಾರು ವಾಹನ ಕಾಯ್ದೆಯ ನಿಯಮಗಳ ಉಲ್ಲಂಘನೆಯಾಗಿರುತ್ತದೆ.

ಇದನ್ನೂ ಓದಿ: Love Failure: ತಾಳಿ ಕಟ್ಟುವ ವೇಳೆ ಬಿಟ್ ಹೋದ ಗೆಳತಿ: ಬಾರದ ಲೋಕಕ್ಕೆ ತೆರಳಿದ ಪ್ರಿಯತಮ

ಸರ್ಕಾರದ ಸುತ್ತೋಲೆಯಲ್ಲಿನ ಅಂಶಗಳಿಗೆ ಅನುಗುಣವಾಗಿ ಕಟ್ಟುನಿಟ್ಟಿನ ಕ್ರಮಕೈಗೊಂಡು ಲಾಂಛನ ಮತ್ತು ಚಿಹ್ನೆಗಳನ್ನು ಅಳವಡಿಸಿಕೊಂಡು ನ್ಯೂನತೆಯುಳ್ಳ ನೋಂದಣಿ ಫಲಕಗಳನ್ನು ಹೊಂದಿ ಸಂಚರಿಸುತ್ತಿರುವ ವಾಹನಗಳ ವಿರುದ್ಧ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು  ನಿರ್ದೇಶನದನ್ವಯ ಈಗಾಗಲೇ ಪೊಲೀಸ್ ಇಲಾಖೆ (Police Department), ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಸಮನ್ವಯ ಹೊಂದಿಕೊಂಡು ನ್ಯೂನತೆಯ ನೋಂದಣಿ ಫಲಕ ತೆರವುಗೊಳಿಸುವ ಕಾರ್ಯ ಹಮ್ಮಿಕೊಳ್ಳಲಾಗಿರುತ್ತದೆ.

ಎಲ್ಲಾ ಟ್ಯಾಕ್ಸಿ ಚಾಲಕರು, ವಾಹನ ಮಾಲೀಕರಿಗೆ ಸೂಚನೆ

ಇನ್ನೂ ಜಿಲ್ಲೆಯ ವಿವಿಧ ಸರ್ಕಾರಿ ಕಛೇರಿಗಳಲ್ಲಿ ಖಾಸಗಿ ವಾಹನಗಳನ್ನು ಒಪ್ಪಂದದ ಆಧಾರದಲ್ಲಿ ಇಲಾಖೆಯ ನಾಮಫಲಕಗಳನ್ನು ನೋಂದಣಿ ಫಲಕಗಳನ್ನು ವಾಹನಗಳ ಮೇಲೆ ಪ್ರದರ್ಶಿಸಿಕೊಂಡು ವಾಹನ ಕಾರ್ಯಚರಣೆ ಮಾಡದಂತೆ ಜಿಲ್ಲೆಯ ಎಲ್ಲಾ ಟ್ಯಾಕ್ಸಿ ಚಾಲಕರು, ವಾಹನ ಮಾಲೀಕರುಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: Suicide: ವರದಕ್ಷಿಣೆ ಕಿರುಕುಳಕ್ಕೆ ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ; ಗಂಡನ ಮನೆಯವರು ಎಸ್ಕೇಪ್

ತೆರವುಗೊಳಿಸುವಿಕೆಯ ಕಾರ್ಯವನ್ನು ಚಾಲಕರು, ವಾಹನ ಮಾಲೀಕರು ಕೈಗೊಳ್ಳದಿದ್ದಲ್ಲಿ ನ್ಯಾಯಾಲಯ ನಿಂದನೆ ಪ್ರಕರಣವಾಗುವುದರಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು  ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
Published by:Divya D
First published: