HOME » NEWS » State » NO LOCK DOWN ON SUNDAY AND LIFTED NIGHT CURFEW IN KARNATAKA FROM TOMORROW LG

ಇನ್ಮುಂದೆ ಭಾನುವಾರ ಲಾಕ್​ಡೌನ್​ ಇಲ್ಲ, ರಾತ್ರಿ ನಿಷೇಧಾಜ್ಞೆಯೂ ತೆರವು; ರಾಜ್ಯ ಸಂಪೂರ್ಣ ಫ್ರೀ

ನಾಳೆ ಅಂದರೆ ಆಗಸ್ಟ್​ 1ರಿಂದ ನಿಷೇಧಾಜ್ಞೆ ತೆರವುಗೊಳ್ಳುವ ಹಿನ್ನೆಲೆ, ರಾತ್ರಿ ಪ್ರಯಾಣಕ್ಕಾಗಿ ಸಾರಿಗೆ ಸೌಲಭ್ಯಕ್ಕೆ ಅನುವು ಮಾಡಿಕೊಡಲಾಗಿದೆ. ರಾತ್ರಿ ಸಾರಿಗೆಗಳು ಯಥಾಸ್ಥಿತಿ ಕಾರ್ಯಾಚರಣೆಗೆ ಇಳಿಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. 

news18-kannada
Updated:July 31, 2020, 11:06 PM IST
ಇನ್ಮುಂದೆ ಭಾನುವಾರ ಲಾಕ್​ಡೌನ್​ ಇಲ್ಲ, ರಾತ್ರಿ ನಿಷೇಧಾಜ್ಞೆಯೂ ತೆರವು; ರಾಜ್ಯ ಸಂಪೂರ್ಣ ಫ್ರೀ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜು.31): ರಾಜ್ಯದಲ್ಲಿ ಹಂತ-ಹಂತವಾಗಿ ಲಾಕ್​ಡೌನ್​ ಸಡಿಲಿಕೆ ಮಾಡಲಾಗುತ್ತಿದೆ.  ಸರ್ಕಾರವು ಈವರೆಗೆ ಪ್ರತೀ ಭಾನುವಾರ ಲಾಕ್​ಡೌನ್​ ಹೇರಿತ್ತು. ಆದರೆ ಈಗ ರಾಜ್ಯ ಸರ್ಕಾರವು ಭಾನುವಾರದ ಲಾಕ್​​ಡೌನ್​ನ್ನು ತೆರವುಗೊಳಿಸಿದೆ.

ಹೌದು, ಇನ್ಮುಂದೆ ಭಾನುವಾರ ಯಾವುದೇ ಲಾಕ್​ಡೌನ್​ ಇರಲ್ಲ. ಈ ಭಾನುವಾರದಿಂದ ಯಾವುದೇ ಲಾಕ್​ಡೌನ್​ ಇರುವುದಿಲ್ಲ. ಸಂಪೂರ್ಣವಾಗಿ ಲಾಕ್​ಡೌನ್​ ತೆರವುಗೊಳಿಸಲಾಗಿದೆ. ಜೊತೆಗೆ ರಾತ್ರಿ ವಿಧಿಸಿದ್ದ ಕರ್ಫ್ಯೂ(ನಿಷೇಧಾಜ್ಞೆ) ಕೂಡ ತೆರವುಗೊಳಿಸಲಾಗಿದೆ. ಹೀಗಾಗಿ ರಾತ್ರಿ ವೇಳೆ ಮುಕ್ತವಾಗಿ ಸಂಚರಿಸಬಹುದಾಗಿದೆ.

ನಾಳೆ ಅಂದರೆ ಆಗಸ್ಟ್​ 1ರಿಂದ ನಿಷೇಧಾಜ್ಞೆ ತೆರವುಗೊಳ್ಳುವ ಹಿನ್ನೆಲೆ, ರಾತ್ರಿ ಪ್ರಯಾಣಕ್ಕಾಗಿ ಸಾರಿಗೆ ಸೌಲಭ್ಯಕ್ಕೆ ಅನುವು ಮಾಡಿಕೊಡಲಾಗಿದೆ. ರಾತ್ರಿ ಸಾರಿಗೆಗಳು ಯಥಾಸ್ಥಿತಿ ಕಾರ್ಯಾಚರಣೆಗೆ ಇಳಿಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ವರಮಹಾಲಕ್ಷ್ಮಿ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್; ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಅಂಗಡಿಗಳ ತೆರವುರಾಜ್ಯದಲ್ಲಿ ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ಹೀಗಾಗಿ ಇನ್ಮುಂದೆ ರಾತ್ರಿಯೂ ಯಥಾವತ್ತಾಗಿ ಸಾರಿಗೆ ಸಂಚಾರ ಇರಲಿದೆ. ನಿಗಮದ ಸಾರಿಗೆಗಳು ಯಥಾವತ್ತಾಗಿ ಕಾರ್ಯಚರಣೆ ಮಾಡಲಿವೆ ಎಂದು ತಿಳಿದು ಬಂದಿದೆ.

ನಾಳೆಯಿಂದ ಲಾಕ್​ಡೌನ್​ ತೆರವುಗೊಳ್ಳುವ ಕಾರಣ, ರಾಜ್ಯ ಕೆಎಸ್​ಆರ್​ಟಿಸಿ ಟ್ವೀಟ್​ ಮಾಡಿದೆ. ರಾಜ್ಯದಲ್ಲಿ ಬಸ್​ ಸಂಚಾರ ಎಂದಿನಂತೆ ಇರಲಿದೆ. ರಾತ್ರಿ ಸಮಯದಲ್ಲೂ ಬಸ್​ ಸಂಚಾರ ಇರಲಿದೆ ಎಂದು ಕೆಎಸ್​ಆರ್​​ಟಿಸಿ ವಿಭಾಗ ತಿಳಿಸಿದೆ.ಈವರೆಗೆ ಭಾನುವಾರದ ಜೊತೆಗೆ ರಾತ್ರಿ ನಿಷೇಧಾಜ್ಞೆಯೂ ಸಹ ಇತ್ತು. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಹೇರಲಾಗಿತ್ತು.

ಲಾಕ್​ಡೌನ್​ ಹಿನ್ನೆಲೆ, ಸಾರಿಗೆ ವ್ಯವಸ್ಥೆ ಬಂದ್ ಆಗಿದ್ದರಿಂದ ಈವರೆಗೆ ರಾಜ್ಯ ಸಾರಿಗೆ ವಿಭಾಗಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಆರ್ಥಿಕವಾಗಿ ಕುಸಿದಿರುವ ವೇಳೆ, ಈಗ ಸಂಪೂರ್ಣವಾಗಿ ಲಾಕ್​ಡೌನ್​ ತೆರವುಗೊಳಿಸಿರುವುದರಿಂದ ಹಂತ-ಹಂತವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
Published by: Latha CG
First published: July 31, 2020, 10:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading