HOME » NEWS » State » NO IN CHARGE MINISTER TO CHIKKAMAGALURU DISTRICT AMID CORONA PANDEMIC AND GOVERNMENT NEGLIGENCE VCTV LG

ಕಾಫಿನಾಡನ್ನು ಸಂಪೂರ್ಣ ನಿರ್ಲಕ್ಷಿಸಿದ ಸರ್ಕಾರ; ಚಿಕ್ಕಮಗಳೂರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ 5 ತಿಂಗಳಾಯ್ತು..!

ಸಿ.ಟಿ ರವಿ ರಾಜೀನಾಮೆ ನೀಡಿದ್ಮೇಲೆ ಜಿಲ್ಲೆಗೆ ಉಸ್ತುವಾರಿ ಸಚಿವರೇ ನೇಮಕವಾಗಿಲ್ಲ. ಜನವರಿ 26ರಂದು ಪ್ರಭಾರಿಯಾಗಿ ಅರವಿಂದ ಲಿಂಬಾವಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅಂದು ಹೋದೋರು ಇಂದೂ ಇತ್ತ ತಲೆ ಹಾಕಿಲ್ಲ.

news18-kannada
Updated:May 1, 2021, 7:59 AM IST
ಕಾಫಿನಾಡನ್ನು ಸಂಪೂರ್ಣ ನಿರ್ಲಕ್ಷಿಸಿದ ಸರ್ಕಾರ; ಚಿಕ್ಕಮಗಳೂರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ 5 ತಿಂಗಳಾಯ್ತು..!
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
  • Share this:
ಚಿಕ್ಕಮಗಳೂರು(ಮೇ 01): ಕೊರೋನಾದ ಕರಿನೆರಳಲ್ಲಿ ಸಿಲುಕಿ ಕಾಫಿನಾಡು ವಿಲವಿಲ ಒದ್ದಾಡ್ತಿದೆ. ದಿನೇ-ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನಸಾಮಾನ್ಯರು ಭವಿಷ್ಯದ ಬಗ್ಗೆ ಭಯಭೀತರಾಗಿದ್ದಾರೆ. ಕೊರೋನಾ ಎರಡನೇ ಅಲೆಗೆ 20 ರಿಂದ 30 ವರ್ಷದ ಯುವಕರು ಸೇರಿದಂತೆ ಹಿರಿಯ ಜೀವಗಳು ಬಲಿಯಾಗ್ತಿವೆ. ಇನ್ನೇನು ಇಂದು-ನಾಳೆ ಅನ್ನುವಷ್ಟರಲ್ಲಿ ಬೆಡ್‍ಗಳ ಕೊರತೆ ಎದುರಾಗೋದ್ರಲ್ಲಿ ಅನುಮಾನವೇ ಇಲ್ಲ. ಇಷ್ಟಾದರೂ ಜಿಲ್ಲೆಯ ಆಗು-ಹೋಗುಗಳು, ಕಷ್ಟ-ಸುಖ ನೋಡಿಕೊಳ್ಳಳು ಓರ್ವ ಜಿಲ್ಲಾ ಉಸ್ತುವಾರಿ ಸಚಿವರಿಲ್ಲ. ಸರ್ಕಾರ ನೇಮಿಸಿಲ್ಲ. ಕಾಫಿನಾಡನ್ನ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿರೋ ಸರ್ಕಾರದ ವಿರುದ್ಧ ಜನ ಕಿಡಿಕಾರುತ್ತಿದ್ದಾರೆ.

ಕೊರೋನಾದ ಸಂಕಷ್ಟವನ್ನ ಸಮರ್ಥವಾಗಿ ಎದುರಿಸಲು ಕಾಫಿನಾಡಿಗೆ ಓರ್ವ ಲೀಡರ್ ಇಲ್ಲದಂತಾಗಿ ಅನಾಥಪ್ರಜ್ಞೆ ಕಾಡ್ತಿದೆ. ಕಾಫಿನಾಡಿಗೆ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ ಕೊರೋನಾ ಪರಿಸ್ಥಿತಿಯನ್ನ ನಿಭಾಯಿಸಲು ಅಧಿಕಾರಿ ವರ್ಗ ಪರದಾಡುವಂತಾಗಿದೆ. ಸಿ.ಟಿ ರವಿ ರಾಜೀನಾಮೆ ನೀಡಿದ್ಮೇಲೆ ಜಿಲ್ಲೆಗೆ ಉಸ್ತುವಾರಿ ಸಚಿವರೇ ನೇಮಕವಾಗಿಲ್ಲ. ಜನವರಿ 26ರಂದು ಪ್ರಭಾರಿಯಾಗಿ ಅರವಿಂದ ಲಿಂಬಾವಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅಂದು ಹೋದೋರು ಇಂದೂ ಇತ್ತ ತಲೆ ಹಾಕಿಲ್ಲ. ಉಸ್ತುವಾರಿ ಸಚಿವರಿಲ್ಲ ಅಂತ ಜನರ್ಯಾರು ತಲೆಕೆಡಿಸಿಕೊಳ್ಳಲಿಲ್ಲ. ಆದ್ರೆ, ಕೊರೋನಾ ಅಲೆ ಅಪ್ಪಳಿಸಿದ ಮೇಲಾದ್ರು ಸರ್ಕಾರ ಎಚ್ಚೆತ್ತುಕೊಂಡು ಸಚಿವರನ್ನ ನೇಮಿಸಬಹುದಿತ್ತು. ಜನ ಅದನ್ನ ಊಹಿಸಿದ್ರು. ಆದ್ರೆ, ಪ್ರತಿದಿನ ಪ್ರಕರಣಗಳು-ಸಾವಿನ ಸಂಖ್ಯೆ ಹೆಚ್ಚಾದ್ರು ಸರ್ಕಾರ ಮಾತ್ರ ಡೋಂಟ್ ಕೇರ್. ಹಾಗಾಗಿ, ಜನ ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ.

ಕೋವ್ಯಾಕ್ಸಿನ್ ಬಗ್ಗೆ ವಿರೋಧ ಮಾಡಿದವರಿಗೆಲ್ಲ ಈಗ ಸತ್ಯ ಅರಿವಾಗಿದೆ: ವಿಪಕ್ಷ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ

ಸದ್ಯ ಸುಮಾರು 3000 ಸೋಂಕಿತರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೊರೋನಾ ಒಂದು ಹಾಗೂ ಎರಡನೇ ಅಲೆಗೆ 157 ಜನ ಸಾವನ್ನಪ್ಪಿದ್ದಾರೆ. ಎರಡನೇ ಅಲೆಯಲ್ಲಿ ದಿನೇ-ದಿನೇ ಏರಿಕೆ ಆಗ್ತಿರೋ ಪ್ರಕರಣಗಳನ್ನ ಕಂಡರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ತಲೆದೂರೋದು ಗ್ಯಾರಂಟಿ ಅನ್ಸತ್ತೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ವೈದ್ಯರು, ಸಿಬ್ಬಂದಿಗಳು, ಅಧಿಕಾರಿಗಳು ಹೆಚ್ಚಿನ ಶ್ರಮವೇನೋ ಹಾಕ್ತಿದ್ದಾರೆ. ಆದ್ರೆ, ಜನಸಾಮಾನ್ಯರ ಓಡಾಟಕ್ಕೆ ಬ್ರೇಕ್ ಹಾಕಿರೋದ್ರಿಂದ ಬೇರೆ-ಬೇರೆ ಇಲಾಖೆಯ ಬಹುತೇಕ ಅಧಿಕಾರಿಗಳು, ಸಿಬ್ಬಂದಿಗಳು ಫುಲ್ ಆರಾಮಾಗಿದ್ದಾರೆ ಅನ್ನೋ ಆರೋಪವೂ ಬಲವಾಗಿದೆ. ಇವರನ್ನ ನಿಯಂತ್ರಿಸೋರು ಯಾರು ಇಲ್ಲದಂತಾಗಿದೆ. ಅಷ್ಟೆ ಅಲ್ಲದೆ, ಜಿಲ್ಲೆ ತನ್ನದೇ ಆದ ಹಲವು ಸಮಸ್ಯೆಗಳನ್ನ ಹೊಂದಿದೆ. ಅವುಗಳನ್ನ ಬಗೆಹರಿಸೋದಕ್ಕೂ ಯಾರೂ ಇಲ್ಲದಂತಾಗಿದೆ.
Youtube Video

ಒಟ್ಟಾರೆ, ರಾಜ್ಯ ರಾಜಧಾನಿ ಸ್ಥಿತಿ ನೋಡೇ ಕಾಫಿನಾಡು ಕಂಗಾಲಾಗಿದೆ. ಕಾಫಿನಾಡ ಸ್ಥಿತಿ ಅದಕ್ಕಿಂತ ಭಿನ್ನವಾಗಿ ಏನೂ ಇಲ್ಲ. ಪಕ್ಕದ ಹಾಸನ ಜಿಲ್ಲೆಯಲ್ಲೂ ಕೊರೋನಾ ರಣಕೇಕೆ ಹಾಕ್ತಾ ಮರಣ ಮೃದಂಗ ಬಾರಿಸ್ತಿದೆ. ಜಿಲ್ಲೆಯಲ್ಲೂ ಹೆಮ್ಮಾರಿ ಓಟ ಓಡ್ತಾನೆ ಇದೆ. ಕೊರೋನಾ ತನ್ನ ಆರ್ಭಟವನ್ನ ಹೀಗೇ ಮುಂದುವರಿಸಿದರೆ ಮತ್ತಷ್ಟು ಸಮಸ್ಯೆಯಾಗಲಿದೆ. ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿಲ್ಲ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಗಿಲ್ಲ. 300-400 ಕೇಸ್‍ಗೆ ಅಧಿಕಾರಿಗಳು ಸುಸ್ತಾಗಿದ್ದಾರೆ. 1000ರ ಗಡಿ ದಾಟಿದ್ರೆ ಅಷ್ಟೆ ಕತೆ. ಇನ್ನಾದ್ರು ಸರ್ಕಾರ ಕಾಫಿನಾಡಲ್ಲಿ ಕೊರೋನಾವನ್ನ ಕಟ್ಟಿಹಾಕಲು ಓರ್ವ ಸಾರಥಿಯನ್ನ ನೇಮಿಸಬೇಕಿದೆ.
Published by: Latha CG
First published: May 1, 2021, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories