ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ನಡೆಯುವುದಿಲ್ಲ; ಪರೋಕ್ಷವಾಗಿ ಸಿದ್ದರಾಮಯ್ಯಗೆ ದೆಹಲಿಯಲ್ಲಿ ಡಿಕೆಶಿ ತಿರುಗೇಟು

ಕೆಪಿಸಿಸಿಯಲ್ಲಿ ಈಗ ಇರುವವರೇ ಸಮರ್ಥರಿದ್ದಾರೆ ಎಂದು ಹೇಳುವ ಮೂಲಕ  ಪರೋಕ್ಷವಾಗಿ ದಿನೇಶ್ ಗುಂಡೂರಾವ್ ಅವರ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು. ಬಳಿಕ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ತಡ ಆಗುತ್ತಿದೆ ಅಂತಾ ನನಗನಿಸುತ್ತಿಲ್ಲ ಎಂದು ಹೇಳಿದರು.

HR Ramesh | news18-kannada
Updated:January 24, 2020, 4:47 PM IST
ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ನಡೆಯುವುದಿಲ್ಲ; ಪರೋಕ್ಷವಾಗಿ ಸಿದ್ದರಾಮಯ್ಯಗೆ ದೆಹಲಿಯಲ್ಲಿ ಡಿಕೆಶಿ ತಿರುಗೇಟು
ಡಿ.ಕೆ. ಶಿವಕುಮಾರ್
  • Share this:
ನವದೆಹಲಿ: ನಾನು‌ ದೆಹಲಿಗೆ ಬಂದ ವಿಷಯವೇ ಬೇರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ಮಾಡಲು ಬಂದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಜಾರ್ಖಂಡ್ ನಾಯಕರು ಬಂದು ಭೇಟಿ ಮಾಡಿದ್ರು. ಲೋಕಸಭೆಗೆ ಕೇಳದೇ ಇದ್ದಾಗಲೂ ಟಿಕೆಟ್ ಕೊಟ್ಟಿದೆ. ನನ್ನ ತಮ್ಮನಿಗೂ ಕೇಳದೆ ಇದ್ದರೂ ಟಿಕೆಟ್ ಕೊಟ್ಟಿದೆ. ನಾನು ಯಾವತ್ತಿದ್ದರೂ ಪಕ್ಷದ ಕಾರ್ಯಕರ್ತ. ಮಂತ್ರಿ ಆಗಿದ್ದಾಗಲೂ, ಇಲ್ಲದಿದ್ದಾಗಲೂ ನಾನೊಬ್ಬ ಕಾರ್ಯಕರ್ತ.  ಮುಂದೆಯೂ ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದು ಅವರು, ನಾನು ಜೈಲಲ್ಲಿದ್ದಾಗ ಎಲ್ಲೆಡೆ ಪ್ರೀತಿ ವ್ಯಕ್ತವಾಗಿತ್ತು. ಸೋನಿಯಾ ಗಾಂಧಿ ಯಾವ ರೀತಿ ಪ್ರೀತಿ ತೋರಿದರೂ ಅಂತಾ ಎಲ್ಲರಿಗೂ ಗೊತ್ತಿದೆ ಎಂದರು.

ಕೆಪಿಸಿಸಿಯಲ್ಲಿ ಈಗ ಇರುವವರೇ ಸಮರ್ಥರಿದ್ದಾರೆ ಎಂದು ಹೇಳುವ ಮೂಲಕ  ಪರೋಕ್ಷವಾಗಿ ದಿನೇಶ್ ಗುಂಡೂರಾವ್ ಅವರ ಬಗ್ಗೆ ಡಿಕೆಶಿ ವ್ಯಂಗ್ಯವಾಡಿದರು. ಬಳಿಕ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ತಡ ಆಗುತ್ತಿದೆ ಅಂತಾ ನನಗನಿಸುತ್ತಿಲ್ಲ ಎಂದು ಹೇಳಿದರು.

ನನಗೆ ನನ್ನ ಮೇಲೆ, ಕಾರ್ಯಕರ್ತರ ಮೇಲೆ ನಂಬಿಕೆ ಇದೆ. ನನಗೆ ಹತಾಶೆ, ನಿರಾಸೆಗಳ್ಯಾವವು ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ನಡೆಯುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಡಿಕೆಶಿ ಟಾಂಗ್ ನೀಡಿದರು.

ಇದನ್ನು ಓದಿ: ನಳಿನಿ ಕೇಸ್​​: ಮೈಸೂರು ವಕೀಲರ ಸಂಘದಿಂದ ಕೆಪಿಸಿಸಿ ವಕ್ತಾರೆ ಮಂಜುಳ ಮಾನಸ ಅಮಾನತು
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ