Idgah Ground: ಈದ್ಗಾ ಮೈದಾನದಲ್ಲಿ ಶುಕ್ರವಾರದ ಪ್ರಾರ್ಥನೆಗಿಲ್ಲ ಅವಕಾಶ, ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಮಧ್ಯಂತರ ಆದೇಶ

ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆಟದ ಮೈದಾನವಾಗಿ ಬಳಸಬೇಕು ಅಂತಾ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆಗೆ ಬಳಸಲು ಅನುಮತಿ ಇದೆ. ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಇಲ್ಲ ಅಂತಾ ಹೈಕೋರ್ಟ್ ಹೇಳಿದೆ.

ಈದ್ಗಾ ಮೈದಾನ

ಈದ್ಗಾ ಮೈದಾನ

  • Share this:
ಚಾಮರಾಜಪೇಟೆ ಈದ್ಗಾ ಮೈದಾನ (Idgah Ground) ಮಾಲೀಕತ್ವ ವಿವಾದ ಸಂಬಂಧ ಹೈಕೋರ್ಟ್ (Karnataka High Court) ಮಹತ್ವದ ಆದೇಶ ನೀಡಿದೆ. ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆಟದ ಮೈದಾನವಾಗಿ (Play Ground) ಬಳಸಬೇಕು ಅಂತಾ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆಗೆ (Prayer) ಬಳಸಲು ಅನುಮತಿ ಇದೆ. ಆದರೆ ಶುಕ್ರವಾರದ (Friday) ಪ್ರಾರ್ಥನೆಗೆ ಅವಕಾಶ ಇಲ್ಲ ಅಂತಾ ಹೈಕೋರ್ಟ್ ಹೇಳಿದೆ. ಮುಂದಿನ ಆದೇಶದವರೆಗೂ ಯಥಾಸ್ಥಿತಿ ಕಾಪಾಡಲು ಹೈಕೋರ್ಟ್ ಸೂಚಿಸಿದೆ. ಯಾವುದೇ ವಿವಾದಕ್ಕೆ (Controversy) ಆಸ್ಪದ ಮಾಡಿಕೊಡಬೇಡಿ. ಮೈದಾನವಾಗಿರುವುದರಿಂದ ಯಥಾಸ್ಥಿತಿ ಕಾಪಾಡಿ ಎಂದು ಸರ್ಕಾರಕ್ಕೆ ಪೀಠ ಸೂಚನೆ ನೀಡಿದೆ. ನ್ಯಾ. ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ಆದೇಶ ನೀಡಿದೆ.

ಈದ್ಗಾ ವಿವಾದ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮೈದಾನವನ್ನು ಆಟಕ್ಕೆ ಬಳಸಬಹುದು. ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಇಲ್ಲ. ರಂಜಾನ್ ಮತ್ತು ಬಕ್ರೀದ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಇದೆ. ಇದನ್ನು ಹುಬ್ಬಳ್ಳಿ ಈದ್ಗಾ ಮೈದಾನದ ರೀತಿಯಲ್ಲಿ ಮಾಡಬೇಡಿ ಅಂತಾ ಹೇಳಿದೆ. ಅಲ್ಲದೇ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದಕ್ಕೆ ಯಾವುದೇ ಅನುಮತಿ ಬೇಕಿಲ್ಲ ಅಂತಾನೂ ಅಭಿಪ್ರಾಯಪಟ್ಟಿದೆ. ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.

No Friday prayers allowed at Idgah Ground Chamarajpete Karnataka High court
ಹೈಕೋರ್ಟ್​ನಿಂದ ಮಹತ್ವದ ಆದೇಶ


ಹೈಕೋರ್ಟ್ ಮಧ್ಯಂತರ ಆದೇಶ

ಚಾಮರಾಜಪೇಟೆ ಈದ್ಗಾ ಮೈದಾನವನ್ನು ಆಟದ ಮೈದಾನವಾಗಿ ಬಳಸಬೇಕು. ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆಗೆ ಬಳಸಲು ಅನುಮತಿ ಇದೆ. ಆದರೆ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಇಲ್ಲ. ಯಾವುದೇ ವಿವಾದಕ್ಕೆ ಆಸ್ಪದ ಮಾಡಿಕೊಡಬೇಡಿ. ಮೈದಾನವಾಗಿರುವುದರಿಂದ ಯಥಾಸ್ಥಿತಿ ಕಾಪಾಡಿ ಅಂತಾ ಹೈಕೋರ್ಟ್ ಹೇಳಿ ಮಧ್ಯಂತರ ಆದೇಶ ಪ್ರಕಟಿಸಿದೆ. ಅಲ್ಲದೇ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುವುದಕ್ಕೆ ಯಾವುದೇ ಅನುಮತಿ ಬೇಕಿಲ್ಲ ಎಂದಿದೆ.

ಇದನ್ನೂ ಓದಿ: ಗಣೇಶೋತ್ಸವದಲ್ಲಿ ವೀರ್ ಸಾವರ್ಕರ್ ಫೋಟೋ ಇಟ್ರೆ ಹುಷಾರ್; ವಾಟಾಳ್ ಎಚ್ಚರಿಕೆ

ಕಾನೂನು ಹೋರಾಟ ಮಾಡ್ತೀವಿ- ನಾಗರಿಕ ಒಕ್ಕೂಟ ವೇದಿಕೆ

ನ್ಯಾಯಾಲಯ ಯಥಾಸ್ಥಿತಿ ಕಾಪಾಡಲು ಹೇಳಿದೆ. ವಕ್ಫ್ ಬೋರ್ಡ್ನವರು ಹೈಕೋರ್ಟ್ ಮೆಟ್ಟಿಲೇರಿದ್ರು. ಅವರ ಆದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ಈ ಬಗ್ಗೆ ಸಭೆ ಮಾಡ್ತೀವಿ. ಆಮೇಲೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ಮೈದಾನದಲ್ಲಿ ಗಣೇಶೋತ್ಸವ ಮಾಡಲು ನಾವು ರೆಡಿ ಇದ್ವಿ. ಸುಪ್ರೀಂಕೋರ್ಟ್ ಗೆ ಹೋಗುವ ಬಗ್ಗೆ ಚರ್ಚೆ ಮಾಡಿಲ್ಲ. ಮುಂದಿನ ವಿಚಾರಣೆ ವೇಳೆಗೆ ಕಾನೂನು ಹೋರಾಟ ಮಾಡ್ತೀವಿ ಅಂತಾ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ರಾಮೇಗೌಡ ಹೇಳಿದ್ದಾರೆ.

ಎಲ್ಲಾ ಹಬ್ಬ ಆಚರಣೆ ಮಾಡಲಿ- ಪ್ರಮೀಳಾ ನೇಸರ್ಗಿ

ಹೈಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಲು ಹೇಳಿದೆ. ನನ್ನ ಪ್ರಕಾರ ಎಲ್ಲಾ ಹಬ್ಬಗಳು ಆಚರಣೆ ಮಾಡಬೇಕು. ಈ ಜಾಗ ಸರ್ಕಾರದ್ದು. ಸಾರ್ವಜನಿಕರಿಗೆ ಸೇರಿದ್ದು ಅಂತಾ ಹಿರಿಯ ವಕೀಲೆ ಪ್ರಮೀಳ ನೇಸರ್ಗಿ ಹೇಳಿದ್ದಾರೆ.

ಹೈಕೋರ್ಟ್ ಆದೇಶ ಪಾಲಿಸುತ್ತೇವೆ

ಚಾಮರಾಜಪೇಟೆ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಸೂಚಿಸಿದೆ. ಈ ನಿಟ್ಟಿನಲ್ಲಿ ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ ಅಂತಾ ಬೆಂಗಳೂರು ಡಿಸಿ ಶ್ರೀನಿವಾಸ್ ಹೇಳಿದ್ದಾರೆ. ಮೈದಾನದಲ್ಲಿ ಗಣೇಶ ಕೂರಿಸಲು ಅನುಮತಿ ಕೋರಿ 2 ಸಂಘಟನೆಗಳು ಮನವಿ ಮಾಡಿದೆ. ಆ ಎರಡೂ ಮನವಿಗಳನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಭದ್ರತೆ ಕುರಿತು ಪೊಲೀಸ್ ಇಲಾಖೆಯ ವರದಿ ಇಂದು ಸಂಜೆಯೊಳಗೆ ಕೈ ತಲುಪಲಿದೆ ಎಂದಿದ್ದಾರೆ.

ಇದನ್ನೂ ಓದಿ: ಹಬ್ಬಕ್ಕೆಂದು ಊರಿಗೆ ಬಂದಿದ್ದ ಮಗಳು-ಅಳಿಯ, ಮೊಮ್ಮಗನೂ ಮಸಣಕ್ಕೆ!

ಸಂಘರ್ಷವಾಗದಂತೆ ಕೋರ್ಟ್ ತೀರ್ಪು ಕೊಟ್ಟಿದೆ- ಕುಮಾರಸ್ವಾಮಿ

ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದ್ದು, ಆದೇಶವನ್ನು ಮಾಜಿ ಸಿಎಂ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ಮತ್ತೊಂದು ಸಂಘರ್ಷ ಆಗದ ರೀತಿ ಹೈಕೋರ್ಟ್ ತೀರ್ಪು ಕೊಟ್ಟಿದೆ ಅಂತಾ ಹೇಳಿದ್ದಾರೆ.
Published by:Thara Kemmara
First published: