Kodagu: ಸರ್ಕಾರದ್ದು ಮಾತಿನಲ್ಲಷ್ಟೇ ಗೋ ರಕ್ಷಣೆಯೇ? ಆಹಾರವಿಲ್ಲದೇ ಬಳಲುತ್ತಿವೆ ಪುಣ್ಯಕೋಟಿಗಳು

ಕಳೆದ ಐದು ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ನಿಬಾಯಿಸಿದ್ದ ಹರೀಶ್ ಆಚಾರ್ಯ ಅವರು ಈಗ ಅದು ಸಾಧ್ಯವಾಗದೆ ಗೋಶಾಲೆಯನ್ನು ಮುಚ್ಚಿಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ಗೋಶಾಲೆ

ಗೋಶಾಲೆ

  • Share this:
ಕೊಡಗು: ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government) ಅಧಿಕಾರಕ್ಕೆ ಬರುತ್ತಿದ್ದಂತೆ ಗೋವುಗಳ ರಕ್ಷಣೆ ಮಾಡುವುದಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು (Cow Slaughter Prohibition Act) ಜಾರಿಗೆ ತಂದಿತ್ತು. ಅದರ ಹಿಂದೆಯೇ ಜಿಲ್ಲೆಗೊಂದು ಗೋಶಾಲೆ ಆರಂಭಿಸುವುದಾಗಿ ಹೇಳಿ ಕೆಲಸವನ್ನು ಆರಂಭಿಸಿತು. ಆದರೆ ಅದೆಲ್ಲವೂ ಕೇವಲ ರಾಜಕಾರಣಕ್ಕಾಗಿ (Politics) ಮಾತ್ರವೇ ಹೇಳಿದ್ದ ಮಾತುಗಳು ಎನ್ನುವ ಅನುಮಾನ ಈ ಗೋ ಶಾಲೆಯನ್ನು ನೋಡಿದ್ರೆ ಕಾಡದೆ ಇರದು. ಹೌದು ಕೊಡಗು ಜಿಲ್ಲೆಯಲ್ಲಿ 2018 (Kodgau 2018 Flood) ರಲ್ಲಿ ಭೀಕರ ಭೂಕುಸಿತ (Landslide), ಪ್ರವಾಹ (Flood) ಎದುರಾಗಿ ಸಾವಿರಾರು ಕುಟುಂಬಗಳು ತಮ್ಮ ಮನೆ ಮಠಗಳನ್ನು ಕಳೆದುಕೊಂಡರು. ಬಹುತೇಕ ಗ್ರಾಮೀಣ ಭಾಗದಲ್ಲಿಯೇ (Rural Area) ಹೆಚ್ಚು ಈ ದುರಂತ ನಡೆದಿದ್ದರಿಂದ ಹೊಲ, ಮನೆ, ಆಸ್ತಿಗಳನ್ನು ಕಳೆದುಕೊಂಡ ರೈತರು ಜಾನುವಾರುಗಳನ್ನು ಕಟ್ಟುವುದಕ್ಕೆ ಕೊಟ್ಟಿಗೆಯೂ ಇಲ್ಲದೆ ತಮ್ಮ ಅವುಗಳನ್ನು ಹೇಗೋ, ಎಲ್ಲಿಯೋ ಬದುಕಿಕೊಳ್ಳಲಿ ಎಂದು ಬಿಟ್ಟುಬಿಟ್ಟರು.

ಆದರೆ ಅದನ್ನೇ ದುರ್ಬಳಕೆ ಮಾಡಿಕೊಂಡ ಖದೀಮರು ಗೋವುಗಳನ್ನು ಕದ್ದು ಸಾಗಿಸುತ್ತಿದ್ದರು. ಹೀಗಾಗಿ ಕೊಡಗಿನ ಹರೀಶ್ ಆಚಾರ್ಯ ಎಂಬವರು ಶ್ರೀಕೃಷ್ಣ ಗೋಶಾಲೆಯನ್ನು ಸ್ಥಾಪಿಸಿ ಗೋವುಗಳ ರಕ್ಷಣೆಗೆ ಮುಂದಾದರು. ಹೀಗೆ ಗೋಶಾಲೆಯನ್ನು ಆರಂಭಿಸುತ್ತಿದ್ದಂತೆ ಸಾಕಷ್ಟು ಜನರು ಗೋವುಗಳನ್ನು ತಂದು ಅಲ್ಲಿಗೆ ಬಿಟ್ಟು ಹೋದರು.

ಗೋಶಾಲೆ ಆರಂಭಿಸಿದ್ದ ಹರೀಶ್ ಆಚಾರ್ಯ್

ಆರಂಭದಲ್ಲಿ ಒಂದಷ್ಟು ಹೇಗೋ ನಿಭಾಯಿಸುತ್ತಿದ್ದ ಹರೀಶ್ ಆಚಾರ್ಯ ಅವರಿಗೆ ಬರು ಬರುತ್ತಾ ಗೋಶಾಲೆ ನಡೆಸುವುದೇ ದುಸ್ತರವಾಗಿ ಹೋಗಿದೆ. ಅವುಗಳಿಗೆ ನಿತ್ಯ ಮೇವು ಪೂರೈಸುವುದು ದೊಡ್ಡ ಸವಾಲಾಗಿದೆ. ಸರ್ಕಾರವೇನೋ ಗೋವುಗಳ ರಕ್ಷಣೆಯ ಉದ್ದೇಶದ ಹಿನ್ನೆಲೆಯಲ್ಲಿ ಪಶುಸಂಗೋಪನೆ ಇಲಾಖೆಯಿಂದ ಪುಣ್ಯಕೋಟಿ ದತ್ತು ಯೋಜನೆ ಜಾರಿಗೊಳಿಸಿದೆ.

No fodder for Cows Go Shala in kodagu rsk mrq
ಗೋಶಾಲೆ


ಏನಿದು ಪುಣ್ಯಕೋಟಿ ದತ್ತು ಯೋಜನೆ?

ಗೋಶಾಲೆಗಳಲ್ಲಿ ಇರುವ ಗೋವಿನ ರಕ್ಷಣೆ ಮಾಡಲು ಪುಣ್ಯಕೋಟಿ ದತ್ತು ಯೋಜನೆ ಜಾರಿಯಾಗಿದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ದತ್ತು ಪಡೆಯಬಹುದು. ಇದಕ್ಕೆ ವಾರ್ಷಿಕ 11 ಸಾವಿರ ರೂಪಾಯಿಗಳನ್ನು ನೀಡಬೇಕು. ಗೋವುಗಳನ್ನು ಎಲ್ಲರ ಸಹಕಾರದಿಂದ ರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಪಶುಸಂಗೋಪನೆ ಇಲಾಖೆ ಸಚಿವರು ಹೇಳುತ್ತಾರೆ.

ಇದನ್ನೂಓದಿ:  Haveri: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕರಿಗೆ ಚಾಕು ಇರಿತ; ಸ್ಥಳದಲ್ಲಿ ಬಿಗುವಿನ ವಾತಾವರಣ

ಆದ್ರೆ ಕೊಡಗಿನ ಚಿಕ್ಕತ್ತೂರು ಗ್ರಾಮದಲ್ಲಿರುವ ಗೋಶಾಲೆಯ ಸಂಕಷ್ಟದ ಪರಿಸ್ಥಿತಿಯನ್ನು ಹೇಳತೀರದು. ಹಸಿವಿನಿಂದ ಗೋವುಗಳ ಬಳಲುತ್ತಿವೆ. ಸರಿಯಾದ ಆರೈಕೆ ಇಲ್ಲದೇ ಅನಾರೋಗ್ಯದಿಂದ ಬಳಲುತ್ತಿವೆ. ಗೋಶಾಲೆ ಆರಂಭಿಸಿರುವ ಹರೀಶ್ ಆಚಾರ್ಯ ಅವರಿವರ ಬಳಿ ಮನವಿ ಮಾಡಿ ಜೋಳದ ಹೊಲಗಳಿಂದ ಒಂದಷ್ಟು ಜೋಳದ ಹುಲ್ಲು ತಂದು ಹಾಕುತ್ತಿದ್ದಾರೆ. ಹೀಗೆ ಮೇವು ತಂದು ಹಾಕೋದು, ಗೋವುಗಳ ಲಾಲನೆ ಪಾಲನೆ ಮಾಡೋದಕ್ಕೆ ಮೂರ್ನಾಲ್ಕು ಆಳುಗಳನ್ನು ಇರಿಸಲಾಗಿದೆ.

No fodder for Cows Go Shala in kodagu rsk mrq
ಗೋಶಾಲೆ


ಮಾಸಿಕ ಎರಡು ಲಕ್ಷ ರೂ ಖರ್ಚು

ಇದಕ್ಕೆಲ್ಲಾ ಒಂದು ತಿಂಗಳಿಗೆ ಕನಿಷ್ಠ 2 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಇದ್ಯಾವುದಕ್ಕೂ ಸರ್ಕಾರ ಒಂದು ರೂಪಾಯಿ ಅನುದಾನ ನೀಡುತ್ತಿಲ್ಲ. ಹೀಗಾಗಿ ಕಳೆದ ಐದು ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ನಿಬಾಯಿಸಿದ್ದ ಹರೀಶ್ ಆಚಾರ್ಯ ಅವರು ಈಗ ಅದು ಸಾಧ್ಯವಾಗದೆ ಗೋಶಾಲೆಯನ್ನು ಮುಚ್ಚಿಬಿಡುವ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ:  Bengaluru Airport: ಕುಡಿದ ಮತ್ತಲ್ಲಿ ಸೇನಾಧಿಕಾರಿಗಳ ಗಲಾಟೆ; ಸೆಕ್ಯೂರಿಟಿಗೆ ಕಾಲಿನಿಂದ ಒದ್ದು ಹಲ್ಲೆ!

ಗೋವುಗಳ ರಕ್ಷಣೆಗೆ ಸಾಕಷ್ಟು ಲಕ್ಷ ಖರ್ಚು ಮಾಡಿ ಶೆಡ್ ನಿರ್ಮಾಣ ಮಾಡಲಾಗಿದ್ದು, ಅದು ಕೂಡ ಪರಿಪೂರ್ಣವಾಗಿಲ್ಲ. ಇದರಿಂದ ಸಾಕಷ್ಟು ಗೋವುಗಳು ತೀರಾ ಬಡಕಲಾಗಿದ್ದು, ಜೀವ ಬಿಡುವ ಸ್ಥಿತಿ ತಲುಪಿವೆ. ಇವೆಲ್ಲವನ್ನೂ ನೋಡಿದರೆ ಸರ್ಕಾರ ಕೇವಲ ಬಾಯಿ ಮಾತಿನಲ್ಲಿ ಗೋರಕ್ಷಣೆ ಜಪ ಮಾಡುತ್ತಿದೆಯಾ ಎನ್ನುವ ಪ್ರಶ್ನೆ ಉದ್ಭವಿಸದೆ ಇರದು.
Published by:Mahmadrafik K
First published: