HOME » NEWS » State » NO FACILITIES AVAILABLE AT KOPPAL TOLL GATE AND STAFFS COLLECTING TOLL LG

ಕೊಪ್ಪಳ: ಸೌಕರ್ಯಗಳಿಲ್ಲದ ಟೋಲ್​ಗೇಟ್​​ನಲ್ಲಿ ಶುಲ್ಕ ಸಂಗ್ರಹಿಸಲು ಪರವಾನಗಿ ನೀಡಿದ ಸರ್ಕಾರ

ಟೋಲ್ ಸಂಗ್ರಹ ಕೇಂದ್ರ ಆರಂಭಕ್ಕೂ ಮುನ್ನ ಶೌಚಾಲಯ ನಿರ್ಮಾಣ ಮಾಡಿರಬೇಕು. ಟೋಲ್ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಜೀವ ಉಳಿಸಲು ಆ್ಯಂಬ್ಯುಲೆನ್ಸ್ ಇರಬೇಕು. ರಸ್ತೆಯ ಅಲ್ಲಲ್ಲಿ ಸಹಾಯವಾಣಿ ಸಂಖ್ಯೆ ಇರಬೇಕು ಎಂಬ ಇತ್ಯಾದಿ ಹಲವು ನಿಬಂಧನೆಗಳಿವೆ.

news18-kannada
Updated:December 9, 2020, 3:48 PM IST
ಕೊಪ್ಪಳ: ಸೌಕರ್ಯಗಳಿಲ್ಲದ ಟೋಲ್​ಗೇಟ್​​ನಲ್ಲಿ ಶುಲ್ಕ ಸಂಗ್ರಹಿಸಲು ಪರವಾನಗಿ ನೀಡಿದ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ಕೊಪ್ಪಳ(ಡಿ.09):ಭಾರತದಲ್ಲಿ ರಸ್ತೆ ಸುಧಾರಣೆಗೆ ಕೇಂದ್ರ ಸರಕಾರ ಕಳೆದ ಒಂದು ದಶಕದಿಂದ ತರಹೇವಾರಿ ಯೋಜನೆ, ಸುಲಿಗೆ ತಂತ್ರಗಳನ್ನು ಹೆಣೆಯುತ್ತಲೇ ಬಂದಿದೆ. ಆದರೂ ವಸೂಲಿ ದಂಧೆ ಅವ್ಯಾಹತವಾಗಿ ನಡೆದಿದೆ. ಇದಕ್ಕೆ ತಾಜಾ ಉದಾಹರಣೆ ಕೊಪ್ಪಳ ಜಿಲ್ಲೆಯ ತಿಪ್ಪನಾಳ ಬಳಿ ಇರುವ ಸೌಕರ್ಯಗಳೇ ಇಲ್ಲದ ಟೋಲ್‌ಗೇಟ್! ಕೊಪ್ಪಳ ಜಿಲ್ಲೆಯ ರಾಜ್ಯ ಹೆದ್ದಾರಿ-29ರ ಮುದಗಲ್-ತಾವರಗೆರೆ-ಕನಕನಕಗಿರಿ-ಗಂಗಾವತಿಯ ಒಟ್ಟು ಸುಮಾರು 74 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸರಕಾರಕ್ಕೆ ಸಲ್ಲಿಕೆಯಾದ ವರದಿ ಹಿನ್ನೆಲೆಯಲ್ಲಿ ಸರಕಾರ ರಸ್ತೆ ಬಳಸುವವರಿಂದ ಶುಲ್ಕ ಸಂಗ್ರಹಿಸಲು ಪರವಾನಗಿ ನೀಡಿದೆ. ಆದರೆ ರಾಜ್ಯ ಹೆದ್ದಾರಿ-29 ಜಿಲ್ಲಾ ರಸ್ತೆಗಳಿಗಿಂತ ಅದ್ವಾನವಾಗಿದೆ. ಆದರೂ ಮೈಸೂರಿನ ವಿಜಯ ರಾಮೇಗೌಡ ಎಂಬುವವರು  ಇಲ್ಲಿ ಟೋಲ್ ಸಂಗ್ರಹಿಸಲು ಗುತ್ತಿಗೆ ಪಡೆದಿದ್ದಾರೆ. ಅದನ್ನು ಕನಕಗಿರಿ ಸಮೀಪದ ಹುಲಿಹೈದರ್‌ನ ಗುರುನಗೌಡ ಎಂಬುವವರಿಗೆ ಮಿನಿ ಗುತ್ತಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಗತ್ಯ ಸೌಕರ್ಯಗಳೇ ಇಲ್ಲ

ರಸ್ತೆ ಬಳಸುವ ವಾಹನ ಸವಾರರಿಂದ ಶುಲ್ಕ ಸಂಗ್ರಹಿಸಲು ನಿರ್ಮಾಣ ಮಾಡುವ ಟೋಲ್‌ಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕೇಂದ್ರ ಸರಕಾರ ಕೆಲ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಆದರೆ ತಿಪ್ಪನಾಳ ಬಳಿ ನಿರ್ಮಿಸಿರುವ ಟೋಲ್ ಸಂಗ್ರಹ ಕೇಂದ್ರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಶುಲ್ಕ ಸಂಗ್ರಹ‌ ಮಾಡಲಾಗುತ್ತಿದೆ.
2020ರ ಆಗಸ್ಟ್ 26ಕ್ಕೆ ಟೋಲ್ ಸಂಗ್ರಹ ಗುತ್ತಿಗೆ ನೀಡಲಾಗಿದ್ದು, 2021ರ ಮಾರ್ಚ್ 31ಕ್ಕೆ ಗುತ್ತಿಗೆ ಅವಧಿ ಮುಗಿಯುತ್ತದೆ. ಹಾಗಾಗಿ ಗುತ್ತಿಗೆ ಪಡೆದವರು ಸ್ಥಳೀಯ ಗುರುನಗೌಡ ಎಂಬುವವರಿಗೆ ಮಿನಿ ಗುತ್ತಿಗೆ ನೀಡಿ ಸುಲಿಗೆಗೆ ಇಳಿದಿದ್ದಾರೆ. ಮಿನಿ ಗುತ್ತಿಗೆ ಪಡೆದಿರುವ ಗುರುನಗೌಡ ಹುಲಿಹೈದರ್ ನಿಗದಿತ ದರಕ್ಕಿಂತ ಎರಡು ಪಟ್ಟು ಶುಲ್ಕ ನಿಗದಿಗೊಳಿಸಿ ವಸೂಲಿಗೆ ಇಳಿದಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಗುರುವಾರ ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ನೌಕರರ ಕಾಲ್ನಡಿಗೆ ಜಾಥಾ; ರಾಜ್ಯಾದ್ಯಂತ ರಸ್ತೆಗಿಳಿಯಲ್ಲ ಬಸ್

ಟೋಲ್ ಸಂಗ್ರಹ ಕೇಂದ್ರ ಆರಂಭಕ್ಕೂ ಮುನ್ನ ಶೌಚಾಲಯ ನಿರ್ಮಾಣ ಮಾಡಿರಬೇಕು. ಟೋಲ್ ರಸ್ತೆಯಲ್ಲಿ ಅಪಘಾತ ಸಂಭವಿಸಿದರೆ ಜೀವ ಉಳಿಸಲು ಆ್ಯಂಬ್ಯುಲೆನ್ಸ್ ಇರಬೇಕು. ರಸ್ತೆಯ ಅಲ್ಲಲ್ಲಿ ಸಹಾಯವಾಣಿ ಸಂಖ್ಯೆ ಇರಬೇಕು ಎಂಬ ಇತ್ಯಾದಿ ಹಲವು ನಿಬಂಧನೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಟೋಲ್ ಗೇಟ್ ಇರಬೇಕು. ನೋಡಲು ಏಕಪಥದಂತೆ ಕಾಣುವ ದ್ವಿಪಥ ರಸ್ತೆಯ ಇಲ್ಲಿನ ಟೋಲ್‌ನಲ್ಲಿ ಕಟ್ಟಿಗೆಯ ಕಂಬ(ಗೇಟ್) ಗಳನ್ನು ವಾಹನಗಳಿಗೆ ಅಡ್ಡ ಹಾಕಿ ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಜನಸಾಮಾನ್ಯರು ಹೊಸ ವಾಹನ ಖರೀದಿಸುವಾಗಲೇ  ಸಾವಿರಾರು, ಲಕ್ಷಾಂತರ ರೂಪಾಯಿ ರಸ್ತೆ ತೆರಿಗೆಯನ್ನು ಪಾವತಿಸಿದರೂ ಸರಕಾರ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಶುಲ್ಕ ಸಂಗ್ರಹಿಸುವ ಸುಲಿಗೆ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಶೀಘ್ರವೇ ಇದಕ್ಕೆ ಇತಿಶ್ರೀ ಹಾಕಬೇಕಾದ ಕಾಲ ಕೂಡಿಬರಬೇಕಿದೆ. ಅಂದಾಗ ಮಾತ್ರ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಸಾಧ್ಯ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಹುಲಿಹೈದರ್‌ ಗ್ರಾಮದ ಗುರುನಗೌಡ ಎಂಬುವವರಿಗೆ ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ತಾವರಗೆರೆ ಬಳಿ ಟೋಲ್ ಕೇಂದ್ರಕ್ಕೆ ಪರವಾನಗಿ‌ ನೀಡಲಾಗಿದೆ. ತಿಪ್ಪನಾಳ ಗ್ರಾಮದ ಬಳಿ ಟೋಲ್ ಸಂಗ್ರಹ ಕೇಂದ್ರ ಇರುವ ಕುರಿತು ಪರಿಶೀಲಿಸುತ್ತೇನೆ. ಪರವಾನಗಿ ಕೊಟ್ಟಿರುವ ಕೇಂದ್ರವಾಗಿದ್ದರೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು.
Published by: Latha CG
First published: December 9, 2020, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories