ಉಡುಪಿಯ ಮಲ್ಪೆ ಬೀಚ್​​ಗೆ ಪ್ರವೇಶ ನಿರ್ಬಂಧ; ಅಪ್ಪಿ-ತಪ್ಪಿ ಸಮುದ್ರಕ್ಕೆ ಇಳಿದರೆ ಬೀಳುತ್ತೆ ದಂಡ..!

ಒಂದು ಸಾವು ಸಂಭವಿಸಿದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ,  ಸಮುದ್ರ ದಡದಲ್ಲಿ ಬಲೆಗಳಿಂದ ಬೇಲಿ ಹಾಕಿ ಮುಂದಕ್ಕೆ ಹೋಗದಂತೆ ಎಚ್ಚರಿಕೆ ಬೋರ್ಡ್ ಹಾಕಿದೆ.

ಮಲ್ಪೆ ಬೀಚ್

ಮಲ್ಪೆ ಬೀಚ್

  • Share this:
ಉಡುಪಿ(ಆ.8): ನೀವೇನಾದ್ರೂ ಉಡುಪಿ ಟೂರ್ ಪ್ಲ್ಯಾನ್ ಹಾಕಿದ್ರೆ, ನಿಮ್ಮ ಪ್ಲ್ಯಾನ್ ಸ್ವಲ್ಪ ಮುಂದೂಡಿ. ಯಾಕಂದ್ರೆ ಕಡಲ ಅಲೆಗಳ ಜೊತೆಗೆ  ಆಟವಾಡುವ ನಿಮ್ಮ ಆಸೆಗೆ ಜಿಲ್ಲಾಡಳಿತ ತಣ್ಣೀರು ಎರಚಿದೆ. ಸಮುದ್ರಕ್ಕೆ ಇಳಿಯಬಾರದು ಅಂತ, ಸಮುದ್ರಕ್ಕೆ ಬೇಲಿ ಹಾಕಿ ಬಂದ್ ಮಾಡಿದೆ. ಎಚ್ಚರಿಕೆ ಬೋರ್ಡ್, ಎಚ್ಚರಿಸುವ ಹೋಮ್ ಗಾರ್ಡ್, ಅಪ್ಪಿ ತಪ್ಪಿ ಸಮುದ್ರ ಇಳಿದ್ರೆ ಬೀಳುತ್ತೆ ದೊಡ್ಡ ಮೊತ್ತದ ದಂಡ... ಇದು ಉಡುಪಿ ಮಲ್ಪೆ ಸಮುದ್ರ ತೀರದ ಸದ್ಯದ ಸ್ಥಿತಿ.....

ಹೌದು.. ಉಡುಪಿಗೆ ಬರಬೇಕು, ಮಲ್ಪೆಯ ನೀಲ ಸಮುದ್ರ ನೋಡಬೇಕು,  ಬಿಳ್ನೊರೆಯ ಅಲೆಗಳ ಜೊತೆಗೆ ಆಟವಾಡಬೇಕು,  ವಿಹಂಗಮ ನೋಟ ನೋಡಬೇಕು ಅಂತ ನೀವೇನಾದ್ರೂ ಉಡುಪಿ ಟ್ರಿಫ್ ಪ್ಲ್ಯಾನ್ ಹಾಕಿದ್ರೆ, ಸೆಪ್ಟೆಂಬರ್ 15ರವರೆಗೆ ನಿಮ್ಮ  ಪ್ಲ್ಯಾನ್ ಮುಂದೂಡಿ. ಯಾಕ್ ಹೀಗೆ ಅಂದ್ರೆ, ಇತ್ತೀಚಿಗೆ ಇದೇ ಮಲ್ಪೆ ಸಮುದ್ರದಲ್ಲಿ 4 ಜನ ಪ್ರವಾಸಿಗರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಕೊನೆಗೆ ಮೂವರು ಬದುಕುಳಿದು ಓರ್ವ ಯುವತಿ ಸಾವನ್ನಪ್ಪಿದ್ದಳು. ಸಮುದ್ರ ರಫ್ ಆಗಿದ್ದು ಅಲೆಗಳ ಅಬ್ಬರ ಕೂಡ ಜೋರಾಗಿದ್ದು, ಒಂದ್ ರೀತಿಯಲ್ಲಿ ಮಲ್ಪೆ ಸಮುದ್ರ ಡೇಂಜರ್ ರೀತಿಯಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ:Gold Price Today: ಇಂದೂ ಸಹ ಇಳಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ರೇಟು?

ಮೂಲ ಸೌಕರ್ಯಗಳೇ ಇಲ್ಲದ ಪರಿಸ್ಥಿತಿ ಇಲ್ಲಿಯದಾಗಿತ್ತು. ಇನ್ನು ಪ್ರವಾಸಿಗರು ಎಚ್ಚರಿಕೆ ಮೀರಿ ನೀರಿಗೆ ಇಳಿಯುತ್ತಿದ್ದರು. ಇದರ ಪರಿಣಾಮ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಹೀಗೆ ಒಂದು ಸಾವು ಸಂಭವಿಸಿದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ,  ಸಮುದ್ರ ದಡದಲ್ಲಿ ಬಲೆಗಳಿಂದ ಬೇಲಿ ಹಾಕಿ ಮುಂದಕ್ಕೆ ಹೋಗದಂತೆ ಎಚ್ಚರಿಕೆ ಬೋರ್ಡ್ ಹಾಕಿದೆ. ಸೂಚನೆ ಹೊರತಾಗಿಯೂ ಸಮುದ್ರಕ್ಕೆ ಇಳಿದ್ರೆ 500 ರೂ ಡಂಡ ವಿಧಿಸೋದಾಗಿ ಎಚ್ಚರಿಸಿದೆ.. ಈ ಆದೇಶ ಸಪ್ಟೆಂಬರ್ 15 ವರೆಗೂ ಮುಂದುವರಿಯಲಿದೆ..

ಹೀಗೆ ಜಿಲ್ಲಾಡಳಿತ ಧಿಡೀರ್ ಹಾಕಿರೋ ಬೇಲಿಯ ಮಾಹಿತಿ ಇಲ್ಲದೆ ಈಗಲೂ ವೀಕೆಂಡ್ ಗೆ ಪ್ರವಾಸಿಗರು ಬರ್ತಿದ್ದಾರೆ. ಹೀಗೆ ಸ್ನೇಹಿತರ ಜೊತೆ ಬೀಚ್​​ಗೆ ಬಂದ ಪ್ರವಾಸಿಗರು ಬೇಲಿ ಕಂಡು ನೀರಿಗಿಳಿಯದೆ ಕೇವಲ‌ ಕಣ್ತುಂಬಿಕೊಂಡು ಕಾಲ ಕಳೆಯುತ್ತಿದ್ದಾರೆ.‌ ಇನ್ನು ಕೆಲವರು ಬೀಚ್ ಬದಿಯ ಮರಳಿನಲ್ಲೇ ಎಂಜಾಯ್ ಮಾಡುವುದು ಕಂಡುಬಂತು.‌ ಆದ್ರೂ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ.

ಇದನ್ನೂ ಓದಿ:Karnataka Weather Today: ಇಂದು ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಉಡುಪಿ ಜಿಲ್ಲಾಡಳಿತದ ಈ ಏಕಾಏಕಿ ಆದೇಶದ ಬಗ್ಗೆ ಪ್ರವಾಸಿಗರು ಬೇಸರಗೊಂಡಿದ್ದಾರೆ.. ಸಮುದ್ರದ ಅಲೆಗಳ ಜೊತೆಗೆ ಆಟ ಮಾಡಬೇಕು ಅಂತ ದೂರದಿಂದ ಬಾಡಿಗೆ ವಾಹನ ಮಾಡ್ಕೊಂಡು ಬಂದ ಸಾವಿರಾರು ಪ್ರವಾಸಿಗರು  ಸಮುದ್ರದ ಅಲೆಗಳ ಜೊತೆಗೆ ಆಟವಾಡಲು, ಆಗದೇ ದೂರದಿಂದಲೇ ನೋಡಿಕೊಂಡು ದಡದಲ್ಲೇ ಆಟವಾಡುವಂತಾಗಿದೆ.

ಒಟ್ಟಿನಲ್ಲಿ, ಕರಾವಳಿ ಪ್ರವಾಸದ ಯೋಚನೆಯನ್ನು ಸದ್ಯಕ್ಕೆ ಕೈ ಬಿಡೋದೆ ಬೆಸ್ಟ್, ಯಾಕೆಂದರೆ ಅತ್ತ ಧರ್ಮಸ್ಥಳ ಮುಂತಾದ ತೀರ್ಥಕ್ಷೇತ್ರಗಳಲ್ಲೂ ಕೊರೋನಾ ಕಾರಣದಿಂದ ಪ್ರವೇಶ ನಿರ್ಬಂಧ ಇದೆ.  ಇತ್ತ ಸಮುದ್ರಕ್ಕೂ ಇಳಿಯಲು ಬಿಡೋದಿಲ್ಲ. ಹೀಗಾಗಿ ನೀವೇನಾದ್ರೂ ಬಂದ್ರು, ಬಂದ ದಾರಿಗೆ ಸುಂಕ ಇಲ್ಲ ಎನ್ನುವ ಪರಿಸ್ಥಿತಿ ನಿಮ್ಮದಾಗಬಹುದು.
Published by:Latha CG
First published: