ಚುನಾವಣೆ ಭಾಗ್ಯ ಕಾಣದ ಚಿಕ್ಕೋಡಿಯ ಕಬ್ಬೂರು ಪಟ್ಟಣ ಪಂಚಾಯತ್

news18
Updated:September 8, 2018, 12:47 PM IST
ಚುನಾವಣೆ ಭಾಗ್ಯ ಕಾಣದ ಚಿಕ್ಕೋಡಿಯ ಕಬ್ಬೂರು ಪಟ್ಟಣ ಪಂಚಾಯತ್
news18
Updated: September 8, 2018, 12:47 PM IST
- ಲೋಹಿತ್ ಶಿರೋಳ್, ನ್ಯೂಸ್ 18 ಕನ್ನಡ

ಚಿಕ್ಕೋಡಿ (ಸೆ.08) :  ಮೊನ್ನೆಯಷ್ಟೆ ನಗರ ಸ್ಥಳೀಯ ಸಂಘ ಸಂಸ್ಥೆಗಳಿಗೆ ಭರ್ಜರಿ ಚುಣಾವಣೆ ಆಯ್ತು ಆದರೆ ಇದೊಂದು ಪಟ್ಟಣ ಪಂಚಾಯತಿಗೆ ಮಾತ್ರ ಚುನಾವಣೆ ಆಗಲೇ ಇಲ್ಲ.ಸರ್ಕಾರ ಮಾಡಿದ ತಪ್ಪಿಗೆ ಇಲ್ಲಿನ ಜನ ನಿತ್ಯ ಕಿರಿಕಿರಿ ಅನುಭವಿಸುವಂತ ಪರಿಸ್ಥಿತಿ ಎದುರಾಗಿದೆ. ಆ ಪಟ್ಟಣದ ಜನರಷ್ಟೆ ಅಲ್ಲದೆ ಅಕ್ಕ ಪಕ್ಕದ ಹಳ್ಳಿಯ ಜನರಿಗೂ ಸಹ ನಿತ್ಯ ಪೀಕಲಾಟ ತಪ್ಪುತ್ತಿಲ್ಲ. ಹೀಗಾಗಿ ಅಕ್ಕಪಕ್ಕದ ಹಳ್ಳಿಯ ಜನ ಈಗ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಯಾಕೆ ಆ ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋದ್ರು ಅಂತೀರಾ ಈ ಸ್ಟೋರಿ ಓದಿ..

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮ ಪಂಚಾಯತಿ 2015 ರಲ್ಲಿ  ಸರ್ಕಾರ  ಪಟ್ಟಣ ಪಂಚಾಯತ್ ಅಂತ ಮೇಲ್ದರ್ಜೆಗೆರಿಸಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶವೇನೊ ಮಾಡಿದೆ. ಆದರೆ ಕಬ್ಬೂರು ಗ್ರಾಮದಿಂದ 4 ರಿಂದ 5ಕೀಮಿ ದೂರವಿರುವ ಮೀರಾಪುರಹಟ್ಟಿ, ಜೋಡಟ್ಟಿ, ಚಿಕ್ಕೋಡಿರೋಡ್ ಹಾಗೂ ಕೆಂಚನಟ್ಟಿ ಗ್ರಾಮಗಳನ್ನು ಸಹ ಕಬ್ಬೂರು ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡಿಸಿದೆ. ಇದನ್ನ ವಿರೋಧಿಸಿ ಅಕ್ಕಪಕ್ಕದ ಗ್ರಾಮಸ್ಥರು ಕೋರ್ಟ್ ಮೊರೆ ಹೋಗಿದ್ದು ಇತ್ತ ಪಟ್ಟಣದ ಜನ ಚುನಾವಣೆ ಇಲ್ಲದೆ ಅತ್ತ ಹಳ್ಳಿಯ ಜನ ಪ್ರತ್ಯೇಕ ಪಂಚಾಯತಿಯೂ ಇಲ್ಲದೆ ಪರದಾಡುತ್ತಿದ್ದಾರೆ.

ಇನ್ನು ಕಬ್ಬೂರು ಗ್ರಾಮ ಪಂಚಾಯತಿ ಇದ್ದಾಗ ಮೀರಾಪುರಹಟ್ಟಿ, ಜೋಡಟ್ಟಿ, ಕೆಂಚನಟ್ಟಿ ಗ್ರಾಮಗಳು ಇದೆ ಪಂಚಾಯತಿಗೆ ಒಳಪಡುತ್ತಿದ್ದವೂ. ಆದರೆ ಕಬ್ಬೂರು ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಮೇಲೂ ಸಹ ಅಕ್ಕಪಕ್ಕದ ಗ್ರಾಮಗಳನ್ನು ಬೇರೆ ಪಂಚಾಯತಿಗಳನ್ನಾಗಿ ರೂಪಿಸದೆ ಸರ್ಕಾರ ಅದೇ ಪಟ್ಟಣ ಪಂಚಾಯತ್​ಗೆ ಸೇರಿಸಿದೆ. ಹೀಗಾಗಿ ಗ್ರಾಮೀಣ ಕೃಪಾಂಕ್ ಮತ್ತು ಸರ್ಕಾರದಿಂದ ಗ್ರಾಮೀಣ ಜನರಿಗೆ ಸಿಗುವ ಸೌಲಭ್ಯಗಳು ಈ ಗ್ರಾಮಗಳಿಗೆ ಸಿಗುತ್ತಿಲ್ಲ  ಎಂದು ಗ್ರಾಮಸ್ಥರು ಕೋರ್ಟಗೆ ಮೊರೆ ಹೋಗಿದ್ದಾರೆ.

ಗ್ರಾಮಸ್ಥರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪಟ್ಟಣ ಪಂಚಾಯತ್​ಗೆ ಮೀರಾಪುರಹಟ್ಟಿ, ಮತ್ತು ಜೋಡಟ್ಟಿ ಹಾಗು ಕೆಂಚನಟ್ಟಿ ಗ್ರಾಮಗಳನ್ನು ಮುಂದಿನ ಆದೇಶದವರೆಗೂ ಸೇರಿಸಬಾರದು ಅಂತ ಆದೇಶಿಸಿದೆ. ಇದರಿಂದ ಗ್ರಾಮಸ್ಥರು ಪಂಚಾಯತಿ ಇಲ್ಲದೆ ತಮ್ಮ ನಿತ್ಯದ ಕೆಲಸಕ್ಕೆ ಪರದಾಡುತ್ತಿದ್ದರೆ. 

ಇತ್ತ ಕಬ್ಬೂರು ಪಟ್ಟಣದ ಜನ ಚುಣಾಯಿತ ಸದಸ್ಯರಿಲ್ಲದೆ ಪರದಾಡುತ್ತಿದ್ದಾರೆ.  ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಸರ್ಕಾರ ನಿರ್ಣಯ ಮಾಡುವತನಕ ನಾವು ಎನು ಮಾಡಲು ಸಾಧ್ಯವಿಲ್ಲ ಅಂತ ಅಸಹಾಯಕತೆ ತೋರಿಸುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಮಾಡಿದ ತಪ್ಪಿಗೆ ಈಗ ನಾಲ್ಕು ಗ್ರಾಮದ ಜನ ಪರದಾಡುತ್ತಿದ್ದಾರೆ. ಇತ್ತ ಪಟ್ಟಣ ಪಂಚಾಯತ್ ಆದ ಕಬ್ಬೂರು ಜನರು ಸಹ ಚುನಾಯಿತ ಸದಸ್ಯರಿಲ್ಲದೆ ಪರದಾಡುತ್ತಿದ್ದಾರೆ. ಅತ್ತ ಗ್ರಾಮಸ್ಥರು ಸಲ್ಲಿಸಿದ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ತನ್ನ ಮುಂದಿನ ಆದೇಶದವರೆಗೂ ಈ ಗ್ರಾಮಗಳನ್ನು ಪಟ್ಟಣ ಪಂಚಾಯತ್​ಗೆ ಸೇರಿಸಬಾರದು ಅಂತ ಆದೇಶ ಮಾಡಿದೆ. ಸರ್ಕಾರದ ಈ ಅವೈಜ್ಞಾನಿಕ ನಿರ್ಧಾರದಿಂದ ಗ್ರಾಮೀಣ ಭಾಗದ ಜನ ಹೈರಾಣಾಗಿರುವುದಂತೂ ಸುಳ್ಳಲ್ಲ..
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ