ನಾವಿಕನಿಲ್ಲದ ದೋಣಿಯಂತಾಗಿದೆ ಚಿಕ್ಕಮಗಳೂರು ನಗರಸಭೆ; ಜನಪ್ರತಿನಿಧಿಗಳಿಲ್ಲದೇ ಅಭಿವೃದ್ಧಿ ಕುಂಠಿತ

ಕೆಲವರ ವೈಯಕ್ತಿಕ ಹಿತಾಸಕ್ತಿಯ ಸಂಘರ್ಷದಿಂದ ಇಡೀ ನಗರದ ಜನರು ಪರಿತಪಿಸುವಂತಾಗಿದೆ. ಹಾಗಾಗೀ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ, ನಗರಸಭೆಗೆ ಚುನಾವಣೆಯನ್ನ ಘೋಷಣೆ ಮಾಡಬೇಕು ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ನಗರಸಭೆ ಕಾರ್ಯಾಲಯ

ಚಿಕ್ಕಮಗಳೂರು ನಗರಸಭೆ ಕಾರ್ಯಾಲಯ

  • Share this:
ಚಿಕ್ಕಮಗಳೂರು(ಅ.31): ಒಂದು ಮನೆಗೆ ಒಬ್ಬ ಜವಾಬ್ದಾರಿಯುತ ಯಜಮಾನ ಇದ್ರೆ ಆ ಕುಟುಂಬ ಸರಿಯಾದ ದಿಕ್ಕಿನಲ್ಲಿ ಸಾಗುತ್ತೆ. ಹಾಗೆಯೇ ಯಾವುದೇ ಒಂದು ಕೆಲಸ ಸರಿಯಾಗಿ ಆಗ್ಬೇಕಂದ್ರೆ ಮಾರ್ಗದರ್ಶನ ಮಾಡಲು ಒಬ್ಬ ನಾಯಕ ಬೇಕೇ ಬೇಕು. ಆದ್ರೆ ಚಿಕ್ಕಮಗಳೂರು ನಗರಸಭೆ ಮಾತ್ರ ಇದಕ್ಕೆ ತದ್ವಿರುದ್ಧ. ಕಳೆದ ಎರಡು ವರ್ಷದಿಂದ ಕೂಡ ನಾವಿಕನಿಲ್ಲದ ದೋಣಿಯಂತಾಗಿದೆ ಕಾಫಿನಾಡ ನಗರಸಭೆಯ ಪರಿಸ್ಥಿತಿ. ಜನಸಾಮಾನ್ಯರು ಇದು ನಗರಸಭೆಯಲ್ಲ, ನರಕಸಭೆ ಅಂತಾ ಹಿಡಿಶಾಪ ಹಾಕುವಂತಾಗಿದೆ. ಚಿಕ್ಕಮಗಳೂರು ನಗರದ ಪ್ರತಿಯೊಂದು ಮನೆಯ ಒಬ್ಬಬ್ಬರು ಒಂದೊಂದು ಸಮಸ್ಯೆ ಹಾಗೇ ಜೀವಂತವಾಗಿದೆ. ಕಾರಣ, ಕಳೆದ ಎರಡು ವರ್ಷದಿಂದ ನಗರಸಭೆ ಚೈತನ್ಯವನ್ನೇ ಕಳೆದುಕೊಂಡಿದೆ. ಸದಸ್ಯರ ಅವಧಿ ಮುಗಿದ್ರೂ ಕೂಡ ಇಲ್ಲಿವರೆಗೂ ಚುನಾವಣೆಗೆ ಕಂಕಣ ಕೂಡಿ ಬಂದಿಲ್ಲ. ಪರಿಣಾಮ, ನಾವಿಕನಿಲ್ಲದೇ ದೋಣಿಯಂತಾಗಿದೆ ನಗರಸಭೆಯ ಪರಿಸ್ಥಿತಿ. ದೋಣಿಯಲ್ಲಿ ಕುಳಿತಿರುವ ಜನರು ಆ ಕಡೆಯೂ ಹೋಗಲಾರದೇ, ಈ ಕಡೆ ಬರಲಾರದೇ ಮೈಕೈ ಪರಚಿ ಕೊಳ್ಳೋ ಸಂದಿಗ್ಧ ಸ್ಥಿತಿಯಂತೆ, ಚಿಕ್ಕಮಗಳೂರು ನಗರದ ಜನಸಾಮಾನ್ಯರ ಪರಿಸ್ಥಿತಿ ಆಗಿದೆ.

ಯಾವುದೇ ಅಭಿವೃದ್ಧಿ ಕಾರ್ಯಗಳು ನಗರದಲ್ಲಿ ನಡೀತಿಲ್ಲ, ರಸ್ತೆ ಸ್ಥಿತಿಯಂತೂ ಕೇಳೋ ಹಾಗೇ ಇಲ್ಲ. ಎಲ್ಲಿ ನೋಡಿದ್ರೂ ಗುಂಡಿಗಳದ್ದೇ ಕಾರುಬಾರು. ಇನ್ನೂ ನಗರವಾಸಿಗಳು ಯಾವುದೇ ಒಂದು ಮನೆ ಸಂಬಂಧನೋ, ಖಾತೆ ಸಂಬಂಧನೋ ಅಥವಾ ಇನ್ನೇನಾಕಾದ್ರೂ ಹೋದ್ರೂ ಕೆಲ್ಸ ಆಗಲ್ಲ. ಆಗಬೇಕು ಅಂದ್ರೆ ಅನಿವಾರ್ಯವಾಗಿ ಹಣ ಬಿಚ್ಚಲೇ ಬೇಕು ಅಂತಾರೆ ಸ್ಥಳೀಯರು. ಯಾರಾದ್ರೂ ನಮ್ಮ ವಾರ್ಡಿನ ಸದಸ್ಯರು ಇದ್ರೆ ಕೇಳಬಹುದು, ಆದ್ರೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಆಡಿದ್ದೇ ಆಟ ಅಂತಾ ಜನಸಾಮಾನ್ಯರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕೆಸಿ ವ್ಯಾಲಿ ಯೋಜನೆ ಮೂಲಕ ಅಮ್ಮೇರಹಳ್ಳಿ ಕೆರೆಗೆ ನೀರು; ಬಯಲುಸೀಮೆಯಲ್ಲಿ ಅಂತರ್ಜಲ ಅಭಿವೃದ್ಧಿ ಕ್ರಾಂತಿ

ಚುನಾವಣೆ ಘೋಷಣೆ ಆಗೋಕೆ ಇಲ್ಲಿನ ಸ್ಥಳೀಯರೇ ಅಡ್ಡಗಾಲು ಹಾಕುತ್ತಿದ್ದಾರೆ. ಒಂದಿಲ್ಲೊಂದು ವಿಚಾರ ತೆಗೆದುಕೊಂಡು ಚುನಾವಣೆಗೆ ತಡೆ ನೀಡುವಂತೆ ಕೋರ್ಟ್ ಮೆಟ್ಟಿಲೇರುತ್ತಾರೆ. ಇದರಿಂದ ಚುನಾವಣೆ ಘೋಷಣೆ ಮಾಡಲು ಕೂಡ ಅಡ್ಡಿಯಾಗುತ್ತಿದೆ ಅನ್ನೋದು ಸ್ಥಳೀಯರ ಆರೋಪ. ಕೆಲವರ ವೈಯಕ್ತಿಕ ಹಿತಾಸಕ್ತಿಯ ಸಂಘರ್ಷದಿಂದ ಇಡೀ ನಗರದ ಜನರು ಪರಿತಪಿಸುವಂತಾಗಿದೆ. ಹಾಗಾಗೀ ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ, ನಗರಸಭೆಗೆ ಚುನಾವಣೆಯನ್ನ ಘೋಷಣೆ ಮಾಡಬೇಕು ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ.

ಕೆಲವು ಸದಸ್ಯರು ಯುಜಿಡಿ ಕೆಲಸದಿಂದ ಹಿಡಿದು ರಸ್ತೆ ಕಾಮಗಾರಿ ಸೇರಿದಂತೆ ಅನೇಕ ಟೆಂಡರ್ಗಳಲ್ಲಿ ಅಕ್ರಮ ಎಸಗಿದ್ದಾರೆ. ಹಾಗಾಗೀ ಬೇರೆ ಯಾರಾದ್ರೂ ಅಧಿಕಾರಕ್ಕೆ ಬಂದ್ರೆ ನಮ್ಮ ಬಣ್ಣ ಎಲ್ಲಿ ಬಯಲಾಗುತ್ತೋ ಅನ್ನೋ ಭಯದಿಂದ ಪದೇ ಪದೇ ಚುನಾವಣೆ ನಡೆಯದಂತೆ ಮಸಲತ್ತು ಮಾಡ್ತಿದ್ದಾರೆ ಅಂತಾಲೂ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕೆಲವರ ಮಸಲತ್ತಿನಿಂದ ಚಿಕ್ಕಮಗಳೂರಿನ ಹಲವರು ಸಂಕಟ ಪಡುವಂತೆ ಆಗಿರೋದಂತೂ ಸತ್ಯ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ಇದರ ಬಗ್ಗೆ ಗಮನವಹಿಸಿ ಚುನಾವಣೆ ನಡೆಯೋದಕ್ಕೆ ಅನುವು ಮಾಡಿಕೊಟ್ಟರೆ ಜನಸಮಾನ್ಯರು ಕಷ್ಟಪಡೋದು ತಪ್ಪಬಹುದು.
Published by:Latha CG
First published: