• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • CAA- NRC: ಎನ್​ಆರ್​ಸಿ ಅನುಷ್ಠಾನಗೊಳಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದ ಕೇಂದ್ರ ಸರ್ಕಾರ

CAA- NRC: ಎನ್​ಆರ್​ಸಿ ಅನುಷ್ಠಾನಗೊಳಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದ ಕೇಂದ್ರ ಸರ್ಕಾರ

ನಕಲಿ ಭಾರತೀಯ ದಾಖಲೆಗಳನ್ನು ರದ್ದುಗೊಳಿಸುವುದಕ್ಕಾಗಿ ಮತ್ತು ಕಾನೂನಿನ ನಿಯಮಗಳ ಪ್ರಕಾರ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದು ಸೇರಿದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ವಲಸಿಗರ ಎಲ್ಲಾ ರೀತಿಯ ವಿವರ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಸೆರೆಹಿಡಿಯುತ್ತಿದ್ದಾರೆ ಎಂದು ಗೃಹ ಸಚಿವಾಲಯ ಇದೇ ಮೊದಲ ಬಾರಿಗೆ ಉಲ್ಲೇಖಿಸಿದೆ.

ಮುಂದೆ ಓದಿ ...
 • Share this:

  ಭಾರತ ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಯನ್ನು (NRIC) ರಾಷ್ಟ್ರೀಯ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯವು ಮಂಗಳವಾರ ಲೋಕಸಭೆಗೆ ತಿಳಿಸಿದೆ.

  ಕಳೆದ ತಿಂಗಳು, ಗೃಹ ಸಚಿವಾಲಯ ಸಂಸತ್ತಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ನಿಯಮಗಳನ್ನು ರೂಪಿಸಲು ಇನ್ನೂ ಆರು ತಿಂಗಳುಗಳು ಬೇಕು ಎಂದು ತಿಳಿಸಿತ್ತು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಧೀನ ಶಾಸನಗಳ ಸಮಿತಿಗಳನ್ನು  ಜನವರಿ 9, 2022 ರವರೆಗೆ ಸಮಯವಕಾಶ ನೀಡಬೇಕು ಎಂದು ಕೇಳಲಾಗಿರುವುದಾಗಿ ಗೃಹ ಸಚಿವಾಲಯ ಹೇಳಿದೆ.

  ಈ ಸಮಯವಕಾಶ ಕೇಳಿರುವ ನಡುವೆಯೂ, ಕೆಲವು ರೋಹಿಂಗ್ಯಾ ವಲಸಿಗರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ವರದಿಗಳನ್ನು ಗೃಹ ಸಚಿವಾಲಯ ಲೋಕಸಭೆಗೆ ತಿಳಿಸಿತು.

  ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆಗಳನ್ನು ನೀಡಿದ್ದು,  ಕಾನೂನುಬಾಹಿರ ವಲಸಿಗರನ್ನು ಗುರುತಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳನ್ನು ಜಾಗೃತಗೊಳಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ಹಾಗೂ ಸಲಹೆ ನೀಡಿದೆ, ಕಾನೂನಿನ ನಿಬಂಧನೆಗಳ ಪ್ರಕಾರ ಅವರ ನಿರ್ದಿಷ್ಟ ಸ್ಥಳಗಳಿಗೆ ಗೋಗುವುದಕ್ಕೆ ನಿರ್ಬಂಧ, ಅವರ ಎಲ್ಲಾ ರೀತಿಯ ವಿವರ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಸೆರೆಹಿಡಿಯುವುದು, ನಕಲಿ ಭಾರತೀಯ ದಾಖಲೆಗಳನ್ನು ರದ್ದುಗೊಳಿಸುವುದು ಮತ್ತು ವಶಕ್ಕೆ ತೆಗೆದುಕೊಳ್ಳುವುದು, ಕಾನೂನಿನ ನಿಬಂಧನೆಗಳ ಪ್ರಕಾರ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಸೇರಿದಂತೆ ಇತರೇ ಕಾನೂನು ಕ್ರಮಗಳ ಬಗ್ಗೆ ಸಲಹೆ ನೀಡಿದೆ. ವಿದೇಶಿ ಪ್ರಜೆಗಳ ಮಿತಿಮೀರಿದ ಮತ್ತು ಅಕ್ರಮ ವಲಸೆಯ ಸಮಸ್ಯೆಯನ್ನು ನಿಭಾಯಿಸಲು ಏಕೀಕೃತ ಸೂಚನೆಗಳನ್ನು ಮಾರ್ಚ್ 30 ರಂದು ನೀಡಲಾಗಿದೆ ಎಂದು ಹೇಳಲಾಗಿದೆ.
  ನಕಲಿ ಭಾರತೀಯ ದಾಖಲೆಗಳನ್ನು ರದ್ದುಗೊಳಿಸುವುದಕ್ಕಾಗಿ ಮತ್ತು ಕಾನೂನಿನ ನಿಯಮಗಳ ಪ್ರಕಾರ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದು ಸೇರಿದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ವಲಸಿಗರ ಎಲ್ಲಾ ರೀತಿಯ ವಿವರ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಸೆರೆಹಿಡಿಯುತ್ತಿದ್ದಾರೆ ಎಂದು ಗೃಹ ಸಚಿವಾಲಯ ಇದೇ ಮೊದಲ ಬಾರಿಗೆ ಉಲ್ಲೇಖಿಸಿದೆ.

  ಎನ್‌ಆರ್‌ಸಿ ಅರ್ಜಿದಾರರ ವಿಷಯವು ಪೌರತ್ವ ದಾಖಲೆ ನವೀಕರಣ ಪ್ರಕ್ರಿಯೆಯ ಹಕ್ಕುಗಳು ಮತ್ತು ಆಕ್ಷೇಪಣೆಗಳ ಹಂತದಲ್ಲಿ ಅವರ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಲಾಗಿದೆ, ಇದರಿಂದ ಅವರು ತಮ್ಮ ಆಧಾರ್ ದಾಖಲಾತಿಯನ್ನು ತಿದ್ದುಪಡಿ ಮಾಡಲು ಸಾಧ್ಯವಾಗದಂತೆ ಮಾಡುವಂತೆ ಅಸ್ಸಾಂ ಸರ್ಕಾರವು ಸೂಕ್ತ ನಿರ್ದೇಶನವನ್ನು ಅಧಿಕಾರಿಗಳಿಗೆ ನೀಡಿದೆ, ಎಂದು ರಾಜ್ಯ ವಿಧಾನಸಭೆ ಸೋಮವಾರ ಮಾಹಿತಿ ನೀಡಲಾಗಿದೆ.

  ಪ್ರಧಾನಿ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ-ಗ್ರಾಮೀಣ (PMAY-G) ಯೋಜನೆ ಅಥವಾ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ (NFSA) ಅಡಿಯಲ್ಲಿ ಯಾವುದೇ ಅರ್ಹ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಇಲ್ಲದ ಕಾರಣದಿಂದ ಈ ಯೋಜನೆಗಳಿಂದ ವಂಚಿತರಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು.

  ಇದನ್ನೂ ಓದಿ: ಅಪರಾಧ ಹಿನ್ನೆಲೆಯ ಅಭ್ಯರ್ಥಿಯ ವಿವರವನ್ನು 48 ಗಂಟೆಯೊಳಗೆ ಪ್ರಕಟಿಸಬೇಕು: ಸುಪ್ರೀಂ ಕೋರ್ಟ್

  ಆಗಸ್ಟ್ 31, 2019 ರಂದು ಡಾಕ್ಯುಮೆಂಟ್‌ನ ಅಂತಿಮ ಕರಡನ್ನು ಪ್ರಕಟಿಸುವ ಮೊದಲು, ರಾಷ್ಟ್ರೀಯ ನಾಗರಿಕರ ರಿಜಿಸ್ಟರ್ ಅನ್ನು ಅಪ್‌ಡೇಟ್ ಮಾಡುವಾಗ 27 ಲಕ್ಷ NRC ಅರ್ಜಿದಾರರ ಬಯೋಮೆಟ್ರಿಕ್ ವಿವರಗಳನ್ನು ಆಕ್ಷೇಪಣೆಗಳ ಹಂತದಲ್ಲಿಯೇ ಸಂಗ್ರಹಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ  (RGI) ಪ್ರಕಟಣೆಯಲ್ಲಿ ತಿಳಿಸಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು