ಇನ್ನೊಂದು ವಾರ ತಿಮ್ಮಪ್ಪನ ದರ್ಶನವಿರುವುದಿಲ್ಲ; ಭಕ್ತರು ತಿರುಪತಿಗೆ ಹೋಗದಿರುವುದು ಒಳ್ಳೆಯದು

news18
Updated:August 10, 2018, 8:58 AM IST
ಇನ್ನೊಂದು ವಾರ ತಿಮ್ಮಪ್ಪನ ದರ್ಶನವಿರುವುದಿಲ್ಲ; ಭಕ್ತರು ತಿರುಪತಿಗೆ ಹೋಗದಿರುವುದು ಒಳ್ಳೆಯದು
news18
Updated: August 10, 2018, 8:58 AM IST
ನ್ಯೂಸ್​ 18 

ಬೆಂಗಳೂರು (ಆ.10): ಸದಾ ಭಕ್ತರಿಂದ ತುಂಬಿರುವ ದೇಶದ ಶ್ರೀಮಂತ ದೇವಾಲಯವಾದ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಹೋಗುವ ಯೋಜನೆ ರೂಪಿಸಿದ್ದರೆ, ಇದನ್ನು ಇನ್ನೊಂದು ವಾರಗಳ ಕಾಲ ಮುಂದೂಡಿದೆ. ಕಾರಣ ಆ. 11ರಿಂದ 16ರವರೆಗೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶವಿಲ್ಲ

ತಿರುಪತಿ ತಿರುಮಲದಲ್ಲಿ 12 ವರ್ಷಗಳಿಗೆ ಒಮ್ಮೆ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ ಕಾರ್ಯ ನಡೆಯುತ್ತದೆ. ಈ ವೇಳೆ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ, ಅರ್ಚಕರನ್ನು ಹೊರತು ಪಡಿಸಿ ಬೇರೆಯಾರು ಈ ವೇಳೆ ಪ್ರವೇಶ ಮಾಡುವಂತಿಲ್ಲ. ಈ ಹಿನ್ನಲೆಯಲ್ಲಿ ಐದುದಿನಗಳ ಕಾಲ ತಿಮ್ಮಪ್ಪನ ದರ್ಶನಕ್ಕೆ ಹೋಗದಿರುವುದು ಒಳಿತು.

16ರ ಗುರುವಾರ ಮಧ್ಯರಾತ್ರಿಯಿಂದ ಮತ್ತೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಐದು ದಿನಗಳ ಕಾಲ ನಿಗದಿಯಾಗಿದ್ದ ಎಲ್ಲಾ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಐದು ದಿನಗಳ ಕಾಲ ನಡೆಯಲಿರುವ ಮಹಾಪ್ರೋಕ್ಷಣಂ ಬಳಿಕ 48ದಿನಗಳ ಕಾಲ ದೇವಾಲಯದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ಕಾಲ್ನಡಿಗೆ ಮೂಲಕ ಬೆಟ್ಟ ಹತ್ತಿ ದೇವರ ದರ್ಶನಕ್ಕೂ ಯಾವುದೇ ಅಕಾಶ ವಿರುವುದಿಲ್ಲ.ಈ ಕುರಿತು ಶ್ರೀವಾರಿ ಮೆಟ್ಟಿಲು, ಅಲಿಪಿರಿ ಮೆಟ್ಟಿಲಿನ ಪ್ರವೇಶದಲ್ಲಿಯೂ ಸೂಚನೆ ನೀಡಲಾಗಿದೆ. ದರ್ಶನದ ಸಮಯ ನೋಡಿಕೊಂಡು ಕೆಲವು ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು. ಆದ ಕಾರಣ ಈ ಸಮಯದಲ್ಲಿ ಭಕ್ತರು ದರ್ಶನ ಕಾರ್ಯ ಕೈಗೊಳ್ಳದಿದ್ದರೆ ಒಳಿತು.  ಈ ಬದಲಾವಣೆಗೆ ಭಕ್ತರು ಸಹಕರಿಸಬೇಕು ಎಂದು ಆಡಳಿತ ಮಂಡಳಿ ತಿಳಿಸಿದೆ.

 
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ