• Home
  • »
  • News
  • »
  • state
  • »
  • ಗುಂಡ್ಲುಪೇಟೆಯಲ್ಲಿ ಎಗ್ಗಿಲ್ಲದೆ ಸಾಗಿದ ಕೇರಳ ಲಾಟರಿ ದಂಧೆ ; ಅಮಾಯಕ ಕೂಲಿ ಕಾರ್ಮಿಕರೇ ದಂಧೆಕೋರರ ಟಾರ್ಗೆಟ್.!

ಗುಂಡ್ಲುಪೇಟೆಯಲ್ಲಿ ಎಗ್ಗಿಲ್ಲದೆ ಸಾಗಿದ ಕೇರಳ ಲಾಟರಿ ದಂಧೆ ; ಅಮಾಯಕ ಕೂಲಿ ಕಾರ್ಮಿಕರೇ ದಂಧೆಕೋರರ ಟಾರ್ಗೆಟ್.!

 ಕೇರಳ ಲಾಟರಿ ಟಿಕೆಟ್

ಕೇರಳ ಲಾಟರಿ ಟಿಕೆಟ್

ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಕೇರಳ ಹಾಗು ತಮಿಳುನಾಡು ರಾಜ್ಯಗಳಲ್ಲಿ ಲಾಟರಿ ಎಂದಿನಂತೆ ಮುಂದುವರಿದಿದೆ. ದಂಧೆಕೋರರು ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿ ಇರುವ ಲಾಟರಿಯನ್ನು ಗುಂಡ್ಲುಪೇಟೆ ಭಾಗಕ್ಕೆ ತಂದು ಕದ್ದುಮುಚ್ಚಿ ತಂದು ಮಾರಾಟ ಮಾಡುತ್ತಿದ್ದಾರೆ

  • Share this:

ಚಾಮರಾಜನಗರ(ಜ.18) : ದಶಕದ ಹಿಂದೆಯೇ ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಲಾಗಿದೆ. ಆದರೆ ರಾಜ್ಯದ ಗಡಿಯಂಚಿನಲ್ಲಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಭಾಗದಲ್ಲಿ ಕದ್ದುಮುಚ್ಚಿ ಹೊರ ರಾಜ್ಯಗಳ ಲಾಟರಿ ದಂಧೆ ನಡೆಯುತ್ತಿದೆ. ಕೂಲಿ ಕಂಬಳ ಮಾಡುವ ಬಡವರೇ ದಂಧೇ ಕೋರರ ಟಾರ್ಗೆಟ್ ಆಗಿದ್ದಾರೆ.

ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯದ ಏಕಮಾತ್ರ ಪಟ್ಟಣ ಅಂದ್ರೆ ಅದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ. ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್ ಬತ್ತೇರಿ ಹಾಗು ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿವೆ. ಈ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಲಾಟರಿ ದಂಧೆಕೋರರು ಬಸ್ ಗಳಲ್ಲಿ ಕೇರಳ ಹಾಗು ತಮಿಳುನಾಡಿಗೆ ಪ್ರತಿನಿತ್ಯ ಪ್ರಯಾಣ ಬೆಳಸಿ ಅಲ್ಲಿನ ಲಾಟರಿಗಳನ್ನು ತಂದು ಗುಂಡ್ಲುಪೇಟೆ ಭಾಗದಲ್ಲಿ ಮಾರಾಟ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಕೇರಳ ಹಾಗು ತಮಿಳುನಾಡು ರಾಜ್ಯಗಳಲ್ಲಿ ಲಾಟರಿ ಎಂದಿನಂತೆ ಮುಂದುವರಿದಿದೆ. ದಂಧೆಕೋರರು ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿ ಇರುವ ಲಾಟರಿಯನ್ನು ಗುಂಡ್ಲುಪೇಟೆ ಭಾಗಕ್ಕೆ ತಂದು ಕದ್ದುಮುಚ್ಚಿ ತಂದು ಮಾರಾಟ ಮಾಡುತ್ತಿದ್ದಾರೆ. ಯಾರಿಗೂ ಗೊತ್ತಾಗದಂತೆ ಲಾಟರಿ ಟಿಕೇಟ್ ಗಳನ್ನು ತಮ್ಮ ಷರ್ಟ್ ಹಾಗು ಪ್ಯಾಂಟ್ ಒಳಭಾಗದಲ್ಲಿಟ್ಟು ತಂದು ಮಾರಾಟ ಮಾಡಿ ಹೋಗುತ್ತಾರೆ.

ಒಂದು ವೇಳೆ ಕೇರಳ ಹಾಗು ತಮಿಳುನಾಡಿನ ದಂಧೇಕೋರರು ಸಿಕ್ಕಿಬಿದ್ದರೆ ತಮ್ಮ ರಾಜ್ಯದಲ್ಲಿ ಲಾಟರಿ ಖರೀದಿಸಿ ಜೇಬಿನಲ್ಲಿ ಇಟ್ಟುಕೊಂಡಿದ್ದೇವೆ. ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದೇವೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಸ್ಥಳೀಯ ದಂಧೆಕೋರರು ಪೊಲೀಸರ ಕಣ್ಣುತ್ತಪ್ಪಿಸಿ ಲಾಟರಿ ಮಾಡುತ್ತಾರೆ

ಇದನ್ನೂ ಓದಿ : ಆತ 42, ಆಕೆ 22; ಇಬ್ಬರು ಹೆಂಡಿರಿದ್ದರೂ ಮದುವೆಯಾದ ಚಪಲಿಗ; ಕೊಲೆ ಮಾಡಿ ಆ್ಯಕ್ಸಿಡೆಂಟ್ ಎಂದು ಕಥೆ ಕಟ್ಟಿದ

ಗಡಿನಾಡಲ್ಲಿ ನಡೆಯುತ್ತಿರುವ ಲಾಟರಿ ದಂಧೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಕೇಳಿದರೆ, ಗುಂಡ್ಲುಪೇಟೆ ಭಾಗದಲ್ಲಿ ಸಂಜೆ ವೇಳೆ ಹೊರ ರಾಜ್ಯದ ಲಾಟರಿ ಕದ್ದು ಮುಚ್ಚಿ ಮಾರಾಟ ಮಾಡುವುದು ತಿಳಿದು ಬಂದಿದೆ. ಲಾಟರಿ ಮಾರಾಟ ಮಾಡಿ ಸಿಕ್ಕಿ ಬಿದ್ದವರ ಮೇಲೆ ಈಗಾಗಲೇ ಗುಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಲಾಟರಿ ಮಾರಾಟದ ಬಗ್ಗೆ ಹದ್ದಿನ ಕಣ್ಣು ಇಡಲಾಗುವುದು ಎನ್ನುತ್ತಾರೆ.

ಒಟ್ಟಿನಲ್ಲಿ ಕಾಯೋನು ಹೆಚ್ಚೋ ಕಳ್ಳನು ಹೆಚ್ಚೋ ಅಂತಾರಲ್ಲ ಹಾಗೆ ಖದೀಮರ ಬಗ್ಗೆ ಪೊಲೀಸರು ಎಷ್ಟೇ ಹದ್ದಿನ ಕಣ್ಣು ಇಟ್ಟಿದ್ದರೂ ಲಾಟರಿ ಮಾರಾಟ ಪ್ರಕರಣಗಳು ಕದ್ದುಮುಚ್ಚಿ ನಡೆಯುತ್ತಲೆ ಇವೆ. ಅಮಾಯಕ ಕೂಲಿ ಕಾರ್ಮಿಕರು, ಬಡವರು ಲಾಟರಿ ದಂಧೆಗೆ ಗುರಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ

 (ವಿಶೇಷ ವರದಿ : ಎಸ್. ಎಂ. ನಂದೀಶ್)

First published: