ಮನೆ ಕಳೆದುಕೊಂಡು 6 ತಿಂಗಳಾದರೂ ಇನ್ನೂ ಸಿಕ್ಕಿಲ್ಲ ಪರಿಹಾರ; ಇದು ರಾಯಚೂರು ನೆರೆ ಸಂತ್ರಸ್ತರ ಗೋಳು

ಜಿಲ್ಲೆಯಲ್ಲಿ ಒಟ್ಟು 3500 ಕುಟುಂಬಗಳ ಮನೆಗಳು ಹಾಳಾಗಿವೆ. ಈ ಮನೆಗಳಲ್ಲಿ ಬಿದ್ದಿರುವ ಮನೆಗಳನ್ನು  ಮೂರು ಪ್ರಮಾಣದಲ್ಲಿ ಗುರುತಿಸಲಾಗಿದೆ. ಸಂಪೂರ್ಣವಾಗಿ ಬಿದ್ದಿರುವ ಮನೆಗಳಿಗೆ 5 ಲಕ್ಷ, ಭಾಗಶಃ ಬಿದ್ದಿರುವ ಮನೆಗಳಿಗೆ 3 ಲಕ್ಷ ಹಾಗೂ ಸಣ್ಣಪುಟ್ಟವಾಗಿ ಬಿದ್ದಿರುವ ಮನೆಗಳಿಗೆ 10 ಸಾವಿರ ರೂಪಾಯಿಯವರೆಗೂ ಪರಿಹಾರ ನೀಡಲು ಘೋಷಣೆಯಾಗಿದೆ. ಆದರೆ ಇಲ್ಲಿಯವರೆಗೂ 2300 ಮನೆಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ.

ಮನೆ ಕಳೆದುಕೊಂಡವರ ಬದುಕು

ಮನೆ ಕಳೆದುಕೊಂಡವರ ಬದುಕು

  • Share this:
ರಾಯಚೂರು(ಫೆ.13): ಈ ಬಾರಿ ರಾಯಚೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.40 ರಷ್ಟು ಅಧಿಕ ಮಳೆಕಯಾಗಿದೆ. ಇಷ್ಟು ಪ್ರಮಾಣದ ಮಳೆಯಾಗಿದ್ದು ಜಿಲ್ಲೆಯಲ್ಲಿ ಈಗಿನ ತಲೆಮಾರಿನವರು ನೋಡಿರಲಿಲ್ಲ. ಒಂದು ಕಡೆ ಮಳೆಯಿಂದ ಮನೆ ಮಠಗಳನ್ನು ಕಳೆದುಕೊಂಡರೆ, ಇನ್ನೊಂದು ಕಡೆ ಕೃಷ್ಣಾ ನದಿಯ ಮಹಾಪ್ರವಾಹದಿಂದಾಗಿ ಬೆಳೆ ನಾಶವಾಗಿದೆ. ಮಳೆ ಹಾಗೂ ಪ್ರವಾಹದಿಂದ ಹಾಳಾದ ರೈತರಿಗೆ ಇನ್ನೂ ಸಂಪೂರ್ಣವಾಗಿ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ ಸಂತ್ರಸ್ತರು ಕಾಯುವಂತಾಗಿದೆ.

ಮುಂಗಾರು ಹಂಗಾಮು ಆರಂಭದಲ್ಲಿ‌ ಮಳೆ ಕೊರತೆಯಾಗಿತ್ತು. ಆದರೆ ನಂತರ ಹಿತಮಿತವಾಗಿ ಮಳೆಯಾಯಿತು. ಈ ಮಳೆಗೆ ಉತ್ತಮ ಬೆಳೆ ಬೆಳೆದು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಬಹುದು. ಒಂದಿಷ್ಟು ಆರ್ಥಿಕ ಬೆಳೆಯಿಂದ ಆದಾಯ ಬಂದು ಮಕ್ಕಳ ಮದುವೆ, ಮಕ್ಕಳ‌ ಶಿಕ್ಷಣ, ಹೀಗೆ ಹಲವಾರು ಅವಶ್ಯಕತೆ ಗಳನ್ನು ಪೂರೈಸಿ ಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆ ಬಹಳ ದಿನಗಳವರೆಗೂ ಉಳಿಯಲಿಲ್ಲ.  ಕಾರಣ ಆಗಸ್ಟ್​​ನಿಂದ ಆರಂಭವಾದ ಮಳೆಯು ನವಂಬರ್ ತಿಂಗಳವರೆಗೂ ಮುಂದುವರೆದು, ವಾಡಿಕೆಗಿಂತ ಅತ್ಯಧಿಕ ಮಳೆಯಾಗಿ ರೈತರ ಬದುಕನ್ನೆ ನಾಶ ಮಾಡಿತು. ಕಟ್ಟಿದ ಕನಸುಗಳಿಗೆ ಮಳೆರಾಯ ಅಡ್ಡಿ ಮಾಡಿ ಮತ್ತೆ ರೈತ ಚಿಂತೆಗೊಳಗಾಗುವಂತೆ ಮಾಡಿದೆ.

ರಾಯಚೂರು ಜಿಲ್ಲೆಯ ಪ್ರಮುಖ ಬೆಳೆಗಳು ಹತ್ತಿ, ಭತ್ತ, ತೊಗರಿ ಈ ಮೂರು ಬೆಳೆಗಳು ಮಳೆಯಿಂದ ಹಾಳಾಗಿವೆ. ಹತ್ತಿ ಬೆಳೆಯು ಕಾಯಿ ಒಡೆದು ಹತ್ತಿ ಬಿಡಿಸುವ ಸಂದರ್ಭದಲ್ಲಿ ಮಳೆಯಾಗಿದ್ದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 29 ಸಾವಿರ ರೈತರ 43 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ; ಇನ್ಮುಂದೆ ಟಿಕೆಟ್​ ಜೊತೆ ಐಷಾರಾಮಿ ಹೋಟೆಲ್​​ ಕೂಡ ಬುಕ್ ಮಾಡಬಹುದು...!

ಇನ್ನೂ ಜಿಲ್ಲೆಯಲ್ಲಿ ಒಟ್ಟು 3500 ಕುಟುಂಬಗಳ ಮನೆಗಳು ಹಾಳಾಗಿವೆ. ಈ ಮನೆಗಳಲ್ಲಿ ಬಿದ್ದಿರುವ ಮನೆಗಳನ್ನು  ಮೂರು ಪ್ರಮಾಣದಲ್ಲಿ ಗುರುತಿಸಲಾಗಿದೆ. ಸಂಪೂರ್ಣವಾಗಿ ಬಿದ್ದಿರುವ ಮನೆಗಳಿಗೆ 5 ಲಕ್ಷ, ಭಾಗಶಃ ಬಿದ್ದಿರುವ ಮನೆಗಳಿಗೆ 3 ಲಕ್ಷ ಹಾಗೂ ಸಣ್ಣಪುಟ್ಟವಾಗಿ ಬಿದ್ದಿರುವ ಮನೆಗಳಿಗೆ 10 ಸಾವಿರ ರೂಪಾಯಿಯವರೆಗೂ ಪರಿಹಾರ ನೀಡಲು ಘೋಷಣೆಯಾಗಿದೆ. ಆದರೆ ಇಲ್ಲಿಯವರೆಗೂ 2300 ಮನೆಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಕೆಲವರಿಗೆ 3000 ರೂಪಾಯಿಯನ್ನು ಹಾಕಿದ ನಂತರ ಮತ್ತೆ ಹಣ ಹಾಕಿಲ್ಲ, ಇನ್ನೂ ಕೆಲವು ಕಡೆ ಈ ಹಣವನ್ನು ಸಹ ಹಾಕಿಲ್ಲ, ಸಂಪೂರ್ಣ ಮನೆ ಬಿದ್ದಿರುವವರೆಗೆ 1 ಲಕ್ಷ ರೂಪಾಯಿಯನ್ನು ಹಾಕಿ ನಂತರ ಇತ್ತ ಏನಾಗಿದೆ ಎಂಬುವುದನ್ನು ನೋಡಿಲ್ಲ.

ಬೆಳೆ ಹಾನಿಗಾಗಿ ಇಲ್ಲಿಯವರೆಗೆ 17.33 ಕೋಟಿ ರೂಪಾಯಿ ಜಮಾ ಮಾಡಲಾಗಿದೆ. ಆದರೆ ಇನ್ನೂ 10 ಸಾವಿರಕ್ಕೂ ಅಧಿಕ ರೈತರ ಖಾತೆಗೆ ಹಣ ಜಮಾ ಮಾಡಬೇಕಾಗಿದೆ. ಮನೆಗಳನ್ನು ಕಳೆದುಕೊಂಡವರಿಗೆ ರಾಜೀವ ಗಾಂಧಿ ವಸತಿ ಯೋಜನೆಯಿಂದ ಹಣವನ್ನು ಮನೆಗಳ ಮಾಲೀಕರಿಗೆ ಹಾಕಲಾಗುವುದು ಈ ಹಿನ್ನಲೆಯಲ್ಲಿ ಒಟ್ಟು 10.65 ಕೋಟಿ ರೂಪಾಯಿ ಜಮಾ ಆಗಿದೆ. ಈ ಹಣವನ್ನು ಮನೆ ಕಳೆದುಕೊಂಡವರ ಖಾತೆಗೆ ಜಮಾ ಆಗಬೇಕಾಗಿದೆ.

ಮನೆಗಳನ್ನು ಕಳೆದುಕೊಂಡವರು ಈಗ ಬೀದಿಯಲ್ಲಿ ವಾಸವಾಗಿದ್ದರೆ, ಹೊರಗಡೆಯೇ ಅಡುಗೆ ಮಾಡಿಕೊಳ್ಳುವ ಸ್ಥಿತಿ, ಇನ್ನೂ ಕೆಲವರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ, ಮಳೆಯಿಂದಾಗಿ ಬಿರುಕು ಬಿಟ್ಟ ಮನೆಗಳು ಆಗೊ ಈಗಲೋ ಬೀಳುವ ಸ್ಥಿತಿಯಲ್ಲಿವೆ. ಇಂಥ ಮನೆಗಳಲ್ಲಿ ಜೀವ ಭಯದಲ್ಲಿ ಬದುಕುವಂಥ ಸ್ಥಿತಿ ಇದೆ.

ಸರಕಾರ ನಿಗದಿ ಮಾಡಿದಂತೆ ಪರಿಹಾರ ನೀಡಿದರೆ ಒಂದಿಷ್ಟು ರಿಪೇರಿನೂ ಅಥವಾ ತಾವೊಂದಿಷ್ಟು ಹಣವನ್ನು ಹಾಕಿ ಮನೆಗಳನ್ನು ಕಟ್ಟಿಸಿಕೊಳ್ಳಬಹುದು , ಆದರೆ ಸರಕಾರ ಇನ್ನೂ ಪರಿಹಾರ ಆಪ್ ನಲ್ಲಿ ಅಪಲೋಡ್, ಇಲಾಖೆಗಳಿಂದ ಪರಿಶೀಲನೆ, ದಾಖಲೆಗಳನ್ನು ಹುಡುಕುವುದರಲ್ಲಿ ಕಾಲಹರಣ ಮಾಡುತ್ತಿದೆ, ಮಳೆ ನಿಂತು ಐದು ತಿಂಗಳಾದರೂ ಪರಿಹಾರ ಸಿಗದೆ ಸಂತ್ರಸ್ತರು ಪರದಾಡುವಂತಾಗಿದೆ. ಈಗಲಾದರೂ ಸರಕಾರ ಬೇಗನೆ ಪರಿಹಾರ ನೀಡುವುದೇ ಕಾದು ನೋಡಬೇಕು.
Published by:Latha CG
First published: