• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Govt School: ಈ ಶಾಲೆಯಲ್ಲಿಲ್ಲ ಕೊಠಡಿ ವ್ಯವಸ್ಥೆ : ಪೋಷಕರಿಂದ ಮಕ್ಕಳ ಕಳುಹಿಸದೆ ಪ್ರತಿಭಟನೆ

Govt School: ಈ ಶಾಲೆಯಲ್ಲಿಲ್ಲ ಕೊಠಡಿ ವ್ಯವಸ್ಥೆ : ಪೋಷಕರಿಂದ ಮಕ್ಕಳ ಕಳುಹಿಸದೆ ಪ್ರತಿಭಟನೆ

ಶಾಲೆ

ಶಾಲೆ

ಪೋಷಕರು ಮಕ್ಕಳನ್ನು ಶಾಲೆಗೆ  ಕಳುಹಿಸುವುದನ್ನೇ ತಾತ್ಕಾಲಿಕವಾಗಿ  ನಿಲ್ಲಿಸಿದ್ದಾರೆ. ಬರುವುದುದೇ ನಿಂತಿದೆ. ತರಗತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ ಬಳಿಕವೇ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಲು ಪೋಷಕರು ತೀರ್ಮಾನಿಸಿದ್ದು , ಕಳೆದ ಐದು ದಿನಗಳಿಂದ ಈ ಶಾಲೆಗೆ ಮಕ್ಕಳು ಶಾಲೆಗೆ ಬರುವುದನ್ನೇ ನಿಲ್ಲಿಸಿವೆ.

ಮುಂದೆ ಓದಿ ...
  • Share this:

ಮಕ್ಕಳಿದ್ದ ಕಡೆ ಸೌಲಭ್ಯಗಳಿಲ್ಲ, ಸೌಲಭ್ಯಗಳಿದ್ದ ಕಡೆ ಮಕ್ಕಳಿಲ್ಲ. ಹೌದು ಇದು ಸದ್ಯದ ಸರಕಾರಿ ಶಾಲೆಗಳ (Government School) ಸಾಮಾನ್ಯ ಸ್ಥಿತಿ. ಇಂಥಹುದೇ ಒಂದು ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಗ್ರಾಮೀಣ ಭಾಗದ ಶಾಲೆಯೊಂದಿದೆ. ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ, ಮಕ್ಕಳಿಗೆ ಕುಳಿತು ಪಾಠ ಕೇಳಲು ತರಗತಿಗಳೇ (Classroom) ಇಲ್ಲ. ಖಾಸಗಿ ಶಾಲೆಗಳಲ್ಲಿ (Private School Fees) ವಿಧಿಸಲಾಗುವ ಫೀಸನ್ನು ಭರಿಸಲಾಗದೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪೋಷಕರು (Parents) ತಮ್ಮ ಮಕ್ಕಳನ್ನು (Chidren) ಸರಕಾರಿ ಶಾಲೆಗಳಿಗೆ ಸೇರಿಸುವ ಪ್ರಕ್ರಿಯೆ ಆರಂಭಗೊಂಡಿದೆ.


ಖಾಸಗಿ ಶಾಲೆಗಳಲ್ಲಿ ಸಿಗುವ ಮೂಲಭೂತ ಸೌಕರ್ಯಗಳು ಸರಕಾರಿ ಶಾಲೆಯಲ್ಲೂ ಸಿಗುವ ಕಾರಣಕ್ಕಾಗಿ ಪೋಷಕರು ಈ ವ್ಯವಸ್ಥೆಯತ್ತ ಮುಖ ಮಾಡಿದ್ದಾರೆ. ಆದರೆ ಈ ರೀತಿಯ ಬದಲಾವಣೆಯ ಸಮಯದಲ್ಲಿ ಸರಕಾರಿ ಶಾಲೆಗಳಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸೋದು ಸರಕಾರದ ಜವಾಬ್ದಾರಿಯೂ ಆಗಿದೆ. ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಕಾರಣ ಗ್ರಾಮೀಣ ಭಾಗದ ಪೋಷಕರು ಪರದಾಡುವಂತಹ ಸ್ಥಿತಿಯೀಗ ನಿರ್ಮಾಣಗೊಂಡಿದೆ.


ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 84 ಮಕ್ಕಳು ಕಲಿಯುತ್ತಿದ್ದು, ಈ ಶಾಲೆಯ ದುರಸ್ತಿಯಲ್ಲಿದ್ದ ಕಟ್ಟಡಗಳೆಲ್ಲಾ ಇದೀಗ ನೆಲಸಮವಾಗಿದೆ.


ಇದನ್ನೂ ಓದಿ:  Text Book Row: ಸಮಿತಿ ನೇಮಕ ಮಾಡುವಾಗಲೇ ಸರ್ಕಾರ ಎಡವಿದೆ: ಕರವೇ ನಾರಾಯಣಗೌಡರು


ರಂಗಮಂದಿರದಲ್ಲಿ ಮಕ್ಕಳಿಗೆ ಪಾಠ


ಇದೀಗ ಈ ಶಾಲೆಯಲ್ಲಿ ಕೇವಲ ಒಂದು ಕೊಠಡಿ ಮಾತ್ರ ಉಳಿದಿದ್ದು, ಈ ಕೊಠಡಿಯಲ್ಲೇ ಒಂದರಿಂದ ಏಳನೇ ತರಗತಿಯ ಮಕ್ಕಳಿಗೆ ಪಾಠ ಕೇಳಬೇಕಾದ ಸ್ಥಿತಿಯಿದೆ. ಈ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಅಧ್ಯಾಪಕರು ಇದೀಗ ಕೆಲವು ಮಕ್ಕಳಿಗೆ ಶಾಲಾ ರಂಗಮಂದಿರದಲ್ಲೇ ಪಾಠ ಹೇಳಿಕೊಡುತ್ತಿದ್ದಾರೆ.


No classroom in this government school puttur akp mrq
ಶಾಲೆ


ಇದರಿಂದಾಗಿ ಬಿರು ಬಿಸಿಲಿನ ಸಮಯದಲ್ಲಿ ಮಕ್ಕಳು ಬಿಸಿಲಲ್ಲಿ ಬೇಯುವ, ಮಳೆಯ ಸಂದರ್ಭದಲ್ಲಿ ನೀರಲ್ಲಿ ತೋಯುವ ಸ್ಥಿತಿ ಸಾಮಾನ್ಯವಾಗಿದೆ. ಇದರಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ  ಕಳುಹಿಸುವುದನ್ನೇ ತಾತ್ಕಾಲಿಕವಾಗಿ  ನಿಲ್ಲಿಸಿದ್ದಾರೆ. ಬರುವುದುದೇ ನಿಂತಿದೆ.


ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಪೋಷಕರ ತೀರ್ಮಾನ


ತರಗತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ ಬಳಿಕವೇ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಲು ಪೋಷಕರು ತೀರ್ಮಾನಿಸಿದ್ದು , ಕಳೆದ ಐದು ದಿನಗಳಿಂದ ಈ ಶಾಲೆಗೆ ಮಕ್ಕಳು ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಾರೆ.


ಶಾಲೆಯ ಈ ದುಸ್ಥಿತಿಯನ್ನು ವಿರೋಧಿಸಿ ಪೋಷಕರು ಹಲವು ರೀತಿಯ ಪ್ರತಿಭಟನೆಗಳನ್ನೂ ನಡೆಸುವ ಮೂಲಕ ಸಂಬಂಧಪಟ್ಟ ಇಲಾಖೆಗಳ ಗಮನಸೆಳೆದಿದ್ದಾರೆ. ಇದ್ದ ಎರಡು ಕಟ್ಟಡಗಳು ಅಪಾಯಕಾರಿ ಸ್ಥಿತಿ ತಲುಪಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಕಟ್ಟಡವನ್ನು ಕೆಡವಲು ಇಲಾಖೆ ತೀರ್ಮಾನಿಸಿದೆ.


ಕೊಠಡಿ ನಿರ್ಮಾಣ ಕಾಮಗಾರಿ


ಈಗಾಗಲೇ ಒಂದು ಕಟ್ಟಡವನ್ನು ಕೆಡವಲಾಗಿದ್ದು, ಇನ್ನೊಂದು ಕಟ್ಟಡವನ್ನೂ ಸದ್ಯದಲ್ಲೇ ಕೆಡವಲಾಗುತ್ತದೆ. ಈ ನಡುವೆ ದಾನಿಗಳು ಶಾಲೆಗೆ ಎರಡು ಕೊಠಡಿಗಳನ್ನು ಕಟ್ಟಿಸಿಕೊಡುತ್ತಿದ್ದು, ಕೊಠಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.


ತರಗತಿಯ ಲಭ್ಯತೆ ಇಲ್ಲದ ಕಾರಣ ಮಕ್ಕಳಿಗೆ ಪಾಠ ಮಾಡುವುದು ತುಂಬಾ ಕಷ್ಟ ಸಾಧ್ಯವಾಗಿದ್ದು, ಈ ಪರಿಸ್ಥಿತಿಯನ್ನು ವಿರೋಧಿಸಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದ್ದಾರೆ.


ತರಗತಿ ನಡೆಸುವ ಭರವಸೆ


ಸದ್ಯಕ್ಕೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಶಾಲೆಯ ಅಧ್ಯಾಪಕರ ಕೊಠಡಿ, ರಂಗಮಂದಿರಕ್ಕೆ ಶೇಡ್ ನೆಟ್ ಅಳವಡಿಸಿ ಮಕ್ಕಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ತರಗತಿ ನಡೆಸುವ ಭರವಸೆಯನ್ನು ಅಧಿಕಾರಿಗಳು ಪೋಷಕರಿಗೆ ನೀಡಿದ್ದಾರೆ.


ಇದನ್ನೂ ಓದಿ:  Tambula Prashne: ಮಳಲಿಯಲ್ಲಿ ಇದ್ದಿದ್ದು ಮಂದಿರವೋ, ಮಸೀದಿಯೋ? ತಾಂಬೂಲ ಪ್ರಶ್ನೆಯಲ್ಲಿ ರಹಸ್ಯ ಬಯಲು!


ಗ್ರಾಮೀಣ ಭಾಗದ ಈ ಶಾಲೆಯನ್ನು ಹೆಚ್ಚಿನ ಜನ ಅವಲಂಭಿಸಿದ್ದು, ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಆದರೆ ಶಾಲೆಯಲ್ಲಿ ಯಾವುದೇ ವ್ಯವಸ್ಥೆಯಿಲ್ಲದ ಕಾರಣ ಇದೀಗ ಮಕ್ಕಳನ್ನು ಶಾಲೆಗೆ ಕಳುಹಿಸದೆ ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.

Published by:Mahmadrafik K
First published: