• Home
  • »
  • News
  • »
  • state
  • »
  • Karnataka BJP: ಬಿಜೆಪಿಯೇ ಟಿಕೆಟ್​ ಕೊಡ್ತೀನಿ ಅಂದ್ರು ತೆಗೆದುಕೊಳ್ಳದ ಜನ; ಯಾಕೆ ಈ ಮುನಿಸು?

Karnataka BJP: ಬಿಜೆಪಿಯೇ ಟಿಕೆಟ್​ ಕೊಡ್ತೀನಿ ಅಂದ್ರು ತೆಗೆದುಕೊಳ್ಳದ ಜನ; ಯಾಕೆ ಈ ಮುನಿಸು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇಂದ್ರ, ರಾಜ್ಯ, ವಿಜಯಪುರ ನಗರದಲ್ಲಿ ಬಿಜೆಪಿ ಇದೆ. ಆದರೆ ವಾರ್ಡ್ ನಲ್ಲಿ ಟಿಕೆಟ್ ಕೋಳೋರಿಲ್ಲ. ವಿಜಯಪುರದ ವಾರ್ಡ್ ನಂಬರ್ 20 ಹಾಗೂ 27 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿಲ್ಲ.

  • News18 Kannada
  • Last Updated :
  • Karnataka, India
  • Share this:

ಸ್ಥಳೀಯ ಚುನಾವಣೆಗಳು ಬಂದ್ರೆ ರಾಷ್ಟ್ರೀಯ ಪಕ್ಷಗಳ (National Political Party) ಟಿಕೆಟ್ ಪಡೆಯಲು ಆಕಾಂಕ್ಷಿಗಳು ಕ್ಯೂನಲ್ಲಿ ನಿಂತಿರುತ್ತಾರೆ. ಟಿಕೆಟ್ (Election Ticket) ಪಡೆಯುವ ಮೊದಲೇ ಕ್ಷೇತ್ರದಲ್ಲಿ ಗುರುತಿಸಿಕೊಂಡು ಲಾಬಿ ಸಹ ಮಾಡಿರುತ್ತಾರೆ. ಸದ್ಯ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ (VIjayapura Mahanagara Palike Election) ನಡೆಯುತ್ತಿದೆ. 35 ವಾರ್ಡ್​ಗಳ ಪೈಕಿ 33ರಲ್ಲಿ ಬಿಜೆಪಿ ಸ್ಪರ್ಧೆ ಮಾಡಿದೆ. ಆದರೆ ಎರಡು ವಾರ್ಡ್​ಗಳಲ್ಲಿ ಬಿಜೆಪಿಗೆ (BJP) ಅಭ್ಯರ್ಥಿಯೇ ಸಿಕ್ಕಿಲ್ಲ. ಈ ಎರಡೂ ವಾರ್ಡ್​ಗಳು ಅತ್ಯಧಿಕ ಮುಸ್ಲಿಂ ಮತಗಳನ್ನು (Muslim Votes) ಹೊಂದಿವೆ. ಹಾಗಾಗಿ ಈ  ಕ್ಷೇತ್ರಗಳಲ್ಲಿ ಮುಸ್ಲಿಮೇತರ ಅಭ್ಯರ್ಥಿಗಳು ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದಾರೆ. ಇತ್ತ ಮುಸ್ಲಿಮರು ಸಹ ಬಿಜೆಪಿ ಟಿಕೆಟ್ ಪಡೆಯಲು ಸಹ ಮುಂದಾಗಿಲ್ಲ. ಮೂಲಗಳ ಪ್ರಕಾರ, ಬಿಜೆಪಿ ಹಲವು ಮುಸ್ಲಿಮರಿಗೆ ಟಿಕೆಟ್ ನೀಡಲು ಮುಂದಾಗಿತ್ತು ಆಗಿತ್ತಂತೆ. ಆದ್ರೆ ಯಾವ ಮುಸ್ಲಿಂ ಪ್ರತಿನಿಧಿಗಳು ಟಿಕಟ್ ಪಡೆದಿಲ್ಲ ಎಂದು ತಿಳಿದು ಬಂದಿದೆ. ಮುಸ್ಲಿಮರು ಅಧಿಕವಾಗಿರುವ ಪ್ರದೇಶಗಳಲ್ಲಿ ಬಿಜೆಪಿ ಟಿಕೆಟ್ ಕೇಳೋರು ಇಲ್ಲದಂತಾಗಿದೆ.


ಕೇಂದ್ರ, ರಾಜ್ಯ, ವಿಜಯಪುರ ನಗರದಲ್ಲಿ ಬಿಜೆಪಿ ಇದೆ. ಆದರೆ ವಾರ್ಡ್ ನಲ್ಲಿ ಟಿಕೆಟ್ ಕೋಳೋರಿಲ್ಲ. ವಿಜಯಪುರದ ವಾರ್ಡ್ ನಂಬರ್ 20 ಹಾಗೂ 27 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿಲ್ಲ.


ರಾಜ್ಯದಲ್ಲಿ ಉಂಟಾದ ಧರ್ಮದ ವಿವಾದ ಕಾರಣದಿಂದ ಬಿಜೆಪಿಯಿಂದ ಮುಸ್ಲಿಮರು ದೂರ ಹೋದ್ರಾ ಅನ್ನೋ ಅನುಮಾನ  ಮೂಡಿದೆ. 20ನೇ ವಾರ್ಡ್​ನಲ್ಲಿ ಸುಮಾರು 12 ಸಾವಿರ ಮತಗಳಿವೆ. 27ನೇ ವಾರ್ಡ್​ನಲ್ಲಿ 7 ಸಾವಿರ ಮತಗಳಿವೆ. ಆದರೂ ಇಲ್ಲಿ ಬಿಜೆಪಿಗೆ ಅಭ್ಯರ್ಥಿಗಳಿಲ್ಲ. ಎರಡು ವಾರ್ಡ್​​ಗಳಿಗೆ ಬಿಜೆಪಿ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್, ಆಮ್ ಆದ್ಮಿ‌, ಜೆಡಿಎಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.


No candidates for bjp in two wards vijayapur mrq
ಸಾಂದರ್ಭಿಕ ಚಿತ್ರ


ವಿಜಯಪುರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ


ಮಹಾನಗರ ಪಾಲಿಕೆ ಚುನಾವಣೆ ವೇಳೆ ಅಸಮಾಧಾನ ಸ್ಫೋಟಗೊಂಡಿದೆ. ಮಹಾನಗರ ಪಾಲಿಕೆ ಸದಸ್ಯ ರವಿ ಬಗಲಿ ರಾಜೀನಾಮೆ ನೀಡಿ ವಾರ್ಡ್ 22ರ ಪಕ್ಷೇತರ‌ ಅಭ್ಯರ್ಥಿಯಾಗಿ ಸ್ಪರ್ಧೆಮಾಡಿದ್ದಾರೆ. ರವಿ ಬಗಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಸಹ ಆಗಿದ್ದರು. ರವಿ ಬಗಲಿ ಜೊತೆಗೆ 10 ಬೂತ್​ಗಳ ಪ್ರಮುಖರು ಸಹ ರಾಜೀನಾಮೆ ಸಲ್ಲಿಸಿದ್ದಾರೆ.


ಇದನ್ನೂ ಓದಿ:  Bengaluru: ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದ ಮಗು; ಶೋಧಕಾರ್ಯ ಮಾಡಿದ್ರು ಪತ್ತೆಯಾಗದ ಕಂದ


ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು  ರಾಜ್ಯ ನಾಯಕರು,‌ ಜಿಲ್ಲಾ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾರ್ಯಕರ್ತರ ಬದಲಾಗಿ ಹಣ ಇರುವವರಿಗೆ ಟಿಕೆಟ್ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ನಿನ್ನೆ ನಾಮಪತ್ರ ಸಲ್ಲಿಸುವ ಗಡವು ಮುಕ್ತಾಯಗೊಂಡಿದ್ದು, ಇದೇ 28ರಂದು ಚುನಾವಣೆ ನಡೆಯಲಿದೆ.


ಬೆಳಕಿನ ಹಬ್ಬಕ್ಕೆ ಧರ್ಮದ‌ ಕಿಡಿ!


ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಹಲಾಲ್ ಮುಕ್ತ (Halal Free) ಮಹಾ ಸಮ್ಮೇಳನ ನಡೆದಿದ್ದು, ದೀಪಾವಳಿ ಹಬ್ಬಕ್ಕೆ (Diwali Festival) ಹಲಾಲ್ ಮಾಂಸ ಬಳಕೆ ಮಾಡಬಾರದೆಂದು ಸಮ್ಮೇಳನದಲ್ಲಿ ಹಿಂದೂಗಳಿಗೆ (Hindu) ಕರೆ ನೀಡಲಾಗಿದೆ. ಹಿಂದೂ ಜನ ಜಾಗೃತಿ ವೇದಿಕೆಯಿಂದ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲಾಲ್ ಜಿಹಾದ್? ಗ್ರಂಥ ಲೋಕಾರ್ಪಣೆ ಮಾಡಲಾಗಿದೆ.


ಸಾಂದರ್ಭಿಕ ಚಿತ್ರ


ಬಳಿಕ ಧಾನ್ಯಗಳು, ಹಣ್ಣು, ಸೌಂದರ್ಯ ವರ್ಧಕ ಹಾಗೂ ಔಷಧಿಗಳು ಅನೇಕ ಪದಾರ್ಥಗಳನ್ನು ಮುಸ್ಲಿಂ ವ್ಯಾಪಾರಿಗಳಿಂದ (Merchant) ಕೊಳ್ಳದಂತೆ ಬಹಿಷ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ.


ಇದನ್ನೂ ಓದಿ: MLA Renukacharya: ಶಾಸಕ ರೇಣುಕಾಚಾರ್ಯ ಆಪ್ತ ಸಹಾಯಕನ ಮೇಲೆ ಹಲ್ಲೆ


ಹಿಂದೂ ವ್ಯಾಪಾರಿಗಳಿಂದ ಲೂಟಿ


ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ಈ ಹಲಾಲ್ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಸಭೆಯಲ್ಲಿ ಕರೆ ನೀಡಿದ್ದಾರೆ. ಈ ಮಹಾ ಸಮ್ಮೇಳನದಲ್ಲಿ ಹಲವು ಹಿಂದೂ ಸಂಘಟನೆಗಳ ಮುಖ್ಯಸ್ಥರು ಭಾಗಿಯಾಗಿದ್ದರು.

Published by:Mahmadrafik K
First published: