B Sriramulu: ಸಾರಿಗೆ ಸಚಿವರ ಕ್ಷೇತ್ರದಲ್ಲಿಯೇ ಮಿತಿ ಮೀರಿದ ಆಟೋ, ಟೆಂಪೋ, ಖಾಸಗಿ ಬಸ್ ಟಾಪ್​ಗಳಲ್ಲಿ ಅಪಾಯಕಾರಿ ಪ್ರಯಾಣ

ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ, ಜೆಬಿ ಹಳ್ಳಿ, ದಡಗೂರು, ಗುಡ್ಡದಹಳ್ಳಿ, ತಿಮ್ಮಲಾಪುರ, ಕರಡಿಹಳ್ಳಿ, ಬೊಮ್ಮದೇವರ ಹಳ್ಳಿ, ಸಂತೆಗುಡ್ಡ, ವಡೇರಹಳ್ಳಿ, ಹಿರೇಕೆರೆಹಳ್ಳಿ,  ಓಬಳಾಪುರ, ಕೆಳಗಿನ ಕಣಿವೆ, ಮೇಗಳ ಕಣಿವೆ, ಬಸಾಪುರ, ಬಾಂಡ್ರವಿ, ಮಾಚೆನಹಳ್ಳಿ, ದೇವಸಮುದ್ರ,ಸೇರಿದಂತೆ ಹಲವು ಹಳ್ಳಿಗಳಿಗೆ ಬಸ್ ಸಂಪರ್ಕವೇ ಇಲ್ಲವಾಗಿದೆ

ಟೆಂಪೋ ಮೇಲೆ ಅಪಾಯಕಾರಿ ಪ್ರಯಾಣ

ಟೆಂಪೋ ಮೇಲೆ ಅಪಾಯಕಾರಿ ಪ್ರಯಾಣ

  • Share this:
ಚಿತ್ರದುರ್ಗ(ಮಾ.25): ಮಿತಿ ಮೀರಿದ ಬಸ್ ಟಾಪ್ (Bus top) ಪ್ರಯಾಣ ಮಾಡುವ ವೇಳೆ ಪಾವಗಡ ತಾಲ್ಲೂಕಲ್ಲಿ ನಡೆದ ಬೀಕರ ಅಪಘಾತದ ಬಳಿಕ ಸಾರಿಗೆ ಸಚಿವ ಬಿ. ಶ್ರೀರಾಮುಲು (B Sriramulu) ಸ್ಥಳಕ್ಕೆ ಬೇಟಿ ನೀಡಿ ಹೈಡ್ರಾಮ ಮಾಡಿದ್ರು. ಆದರೇ ಅವರದೇ ಸ್ವ ಕ್ಷೇತ್ರದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ (Transport System) ಇಲ್ಲದೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಖಾಸಗಿ ಬಸ್ (Private bus), ಆಟೋ, ಟೆಂಪೋ, ಲಾರಿ ಟಾಪ್ ಏರಿ ಜೋತುಬಿದ್ದು ಪ್ರಯಾಣ ಮಾಡೋ  ಪರಿಸ್ಥಿತಿ ಮಾತ್ರ ಜೀವಂತವಿದೆ. ಸಾರಿಗೆ ಸಚಿವ ಬಿ. ಶ್ರೀ ರಾಮುಲು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು. ಪ್ರಸ್ತುತ ಆಕ್ಷೇತ್ರದ ಬಡತನ ಕಂಡು ಅಭಿವೃದ್ದಿಯ ಮಂತ್ರ ಜಪಿಸಬೇಕಾದವರು. ಆದರೇ ಸಾರಿಗೆ ಸಚಿವ ಬಿ.ಶ್ರೀರಾಮುಲು ಕ್ಷೇತ್ರದಲ್ಲಿ ಬಸ್ಸಿಲ್ಲದೆ ಇಂದಿಗೂ ವಿಧ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳೋಕೆ ಪರದಾಟ ನಡೆಸುವ ಪರಿಸ್ಥಿತಿ ಇದೆ.

ತಾಲ್ಲೂಕಿನ ಗಡಿ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಶಿಕ್ಷಣ ಕಲಿಯೋಕೆ ಪ್ರಾಣದ ಹಂಗು ತೊರೆದು,ಆಟೋ, ಟೆಂಪೋ, ಲಾರಿ, ಖಾಸಗಿ ಬಸ್ ಗಳ ಟಾಪ್ ಹತ್ತಿ ಪ್ರಯಾಣ, ಕೈಯಲ್ಲಿ ಜೀವ ಬಿಗಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಕಾರಣ ಮೊಳಕಾಲ್ಮೂರು ಕ್ಷೇತ್ರದ ಹಲವು ಹಳ್ಳಿಗಳಿಗೆ ಬಸ್ ಸಂಚಾರವೇ ಇಲ್ಲವಾಗಿದ್ದು, ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಸರ್ಕಾರಿ ಬಸ್ ಇಲ್ಲದೇ ಖಾಸಗಿ ವಾಹನಗಳನ್ನೇ ಇಲ್ಲಿನ ಜನರು ಅವಲಂಬಿಸಿದ್ದಾರೆ.

ಲಗೇಜ್ ಆಟೋ, ಟೆಂಪೋ, ಖಸಾಗಿ ಬಸ್ ಗಳಲ್ಲಿ ಜೋತು ಬಿದ್ದು ಜನರ ಪ್ರಯಾಣ

ಅಲ್ಲದೇ ಇಲ್ಲಿಂದ ಪಟ್ಟಣ, ನಗರ ಪ್ರದೇಶಗಳಿಗೆ ತೆರಳಬೇಕಾದ ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸೇ ಇಲ್ಲ, ಆದರೂ ಈ ಕ್ಷೇತ್ರದ ಜನರ ಗೋಳು ಕೇಳೋರಿಲ್ಲ ಅನ್ನುವಂತಾಗಿದೆ. ತಾಲ್ಲೂಕಿನ ಅನೇಕ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲವೇ ಇಲ್ಲ, ಹಾಗಾಗಿ ಅನಿವಾರ್ಯವಾಗಿ ಲಗೇಜ್ ಆಟೋ, ಟೆಂಪೋ, ಖಸಾಗಿ ಬಸ್ ಗಳಲ್ಲಿ ಜೋತು ಬಿದ್ದು ಜನರು ಪ್ರಯಾಣ ಮಾಡುತ್ತಿದ್ದಾರೆ.

ಭೀಕರ ಅಪಘಾತಗಳ ನಂತರವೂ ಬದಲಾಗಿಲ್ಲ ವ್ಯವಸ್ಥೆ

ಹಲವು ಬಾರಿ ಮೊಳಕಾಲ್ಮೂರು, ರಾಂಪುರ ಬಳಿ ನಡೆದಿರೋ ಬೀಕರ ಅಫಘಾತಗಳು ನಡೆದಿದ್ದರೂ ಯಾವುದೇ ಬದಲಾವಣೆಗಳು ಆಗಿಯೇ ಇಲ್ಲ, ಬೀಕರ ಅಪಘಾತಗಳು ನಡೆದಿದ್ದರೂ ಖಾಸಗಿ ವಾಹನಗಳಿಗೆ ಬ್ರೇಕ್ ಹಾಕದೆ RTO, ಮತ್ತು ಪೋಲೀಸರು, ನಿರ್ಲಕ್ಷ ತೋರಿದ್ದು, ಜನರ ಪ್ರಾಣಾಪಾಯಕ್ಕೆ ಸಾಕ್ಷಿ ಆಗುತ್ತಿದ್ದಾರೆ. ಸಾರ್ವಜನಿಕರ ಸಾರಿಗೆ ಸಮಸ್ಯೆ ಬಗೆಹರಿಸದೇ ಸಚಿವರು ನಿರ್ಲಕ್ಷ ತೋರಿದ್ದಾರೆ ಅಂತ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಹರ್ಷನ ಕುಟುಂಬಕ್ಕೆ ₹25 ಲಕ್ಷ, ST ವ್ಯಕ್ತಿಯ ಕುಟುಂಬಕ್ಕೆ ಕೇವಲ 4 ಲಕ್ಷ ಏಕೆ.. Siddaramaiah ಪ್ರಶ್ನೆ

ಅಲ್ಲದೇ ಅನೇಕ ಬಾರಿ ಬಸ್ ಸಂಪರ್ಕ ಕಲ್ಪಿಸೋಕೆ ಜನರು ಮನವಿ ನೀಡಿದರೂ ಕ್ಯಾರೆ ಎನ್ನದ KSRTC ಅಧಿಕಾರಿಗಳು, ಕೇವಲ ಬೆರಳೆಣಿಕೆಯ ಹಳ್ಳಿಗಳಿಗೆ ಮಾತ್ರ ಸಾರಿಗೆ ವ್ಯವಸ್ತೆ ಕಲ್ಪಿಸಿದ್ದಾರೆ.ಹೀಗೆ ಸಾರಿಗೆ ಸಚಿವರ ಕ್ಷೇತ್ರದಲ್ಲೆ ಈ ಸಮಸ್ಯೆ ಆದರೆ ರಾಜ್ಯದ ಜನರ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಇನ್ನೂ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ, ಜೆಬಿ ಹಳ್ಳಿ, ದಡಗೂರು, ಗುಡ್ಡದಹಳ್ಳಿ, ತಿಮ್ಮಲಾಪುರ, ಕರಡಿಹಳ್ಳಿ, ಬೊಮ್ಮದೇವರ ಹಳ್ಳಿ, ಸಂತೆಗುಡ್ಡ, ವಡೇರಹಳ್ಳಿ, ಹಿರೇಕೆರೆಹಳ್ಳಿ,  ಓಬಳಾಪುರ, ಕೆಳಗಿನ ಕಣಿವೆ, ಮೇಗಳ ಕಣಿವೆ, ಬಸಾಪುರ, ಬಾಂಡ್ರವಿ, ಮಾಚೆನಹಳ್ಳಿ, ದೇವಸಮುದ್ರ, ಸೇರಿದಂತೆ ಹಲವು ಹಳ್ಳಿಗಳಿಗೆ ಬಸ್ ಸಂಪರ್ಕವೇ ಇಲ್ಲವಾಗಿದೆ.

ಇದನ್ನೂ ಓದಿ: ಏನ್ ಸ್ಮಾರ್ಟ್ ಆಗಿ ಬಂದಿದ್ದೀರಾ? Eshwarappa ಪ್ರಶ್ನೆಗೆ Siddaramaiah ನೀಡಿದ ಉತ್ತರ ಹೀಗಿತ್ತು

ಇನ್ನೂ  ಜೆಬಿ ಹಳ್ಳಿ, ಕಣ್ವಕುಪ್ಪೆ, ಬಾಂಡ್ರವಿ ಗ್ರಾಮಗಳಿಗೆ ಬೆಳಗ್ಗೆ ಸಂಜೆ 2ಬಾರಿ ಮಾತ್ರ ಸರ್ಕಾರಿ ಬಸ್ ಸಂಚಾರ ಮಾಡುತ್ತಿದ್ದು, ಮಿತಿ ಮೀರಿದ ಆಟೋ, ಟೆಂಪೋ, ಲಾರಿ ಪ್ರಯಾಣ ನಿಲ್ಲಿಸಿ ಸರ್ಕಾರಿ ಬಸ್ ವ್ಯವಸ್ಥೆಗೆ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.
Published by:Divya D
First published: