ಚನ್ನಪಟ್ಟಣದ ಈ ಗ್ರಾಮಕ್ಕಿಲ್ಲ ಸರ್ಕಾರಿ ಬಸ್; ತೊಂದರೆ ಅನುಭವಿಸುತ್ತಿರುವ 65 ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಈ ರಸ್ತೆಯಲ್ಲಿ ಸಂಜೆ ಸಮಯದಲ್ಲಂತೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುತ್ತದೆ. ಕಾಡಂಚಿನ ಗ್ರಾಮವಾಗಿರುವುದರಿಂದ ಕರಡಿ, ಚಿರತೆಗಳು ಹೆಚ್ಚಾಗಿ ಇರುತ್ತವೆ. ಜೊತೆಗೆ ಶೇ.40 ರಷ್ಟು ಹೆಣ್ಣು ಮಕ್ಕಳೇ ಇರುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗ್ತಿದೆ.

ವಿದ್ಯಾರ್ಥಿಗಳು

ವಿದ್ಯಾರ್ಥಿಗಳು

  • Share this:
ರಾಮನಗರ(ಮಾ.27): ಈ ಗ್ರಾಮದಲ್ಲಿ ಸರಿಸುಮಾರು 65ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗುತ್ತಾರೆ. ಕಾಡಂಚಿನ ಗ್ರಾಮವಾಗಿರುವುದರಿಂದ ಈ ಗ್ರಾಮಕ್ಕೆ ಯಾವುದೇ ಬಸ್ ವ್ಯವಸ್ಥೆಯೇ ಇಲ್ಲ. ದಿನನಿತ್ಯ 3.5 ಕಿ.ಮೀ ನಡೆದುಕೊಂಡೇ ಬಂದು ಶಾಲಾ, ಕಾಲೇಜಿಗೆ ಬರಬೇಕು. ಕಾಡುಪ್ರಾಣಿಗಳ ಹಾವಳಿಗೆ ಬೆದರಿ ವಿದ್ಯಾರ್ಥಿಗಳು ಭಯದಲ್ಲಿಯೇ ವಿದ್ಯೆ ಕಲಿಯುವ ದುಸ್ಥಿತಿ ಎದುರಾಗಿದೆ. ಪೋಷಕರ ನೆಮ್ಮದಿಗೂ ಇಲ್ಲಿ ಅವಕಾಶವಿಲ್ಲವಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ.

ಹೌದು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ಸರಿಸುಮಾರು 65-70 ಜನ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗುತ್ತಾರೆ. ಆದರೆ ಈ ಗ್ರಾಮಕ್ಕೆ ಇಲ್ಲಿಯವರೆಗೆ ಯಾವುದೇ ಬಸ್ ವ್ಯವಸ್ಥೆಯೇ ಇಲ್ಲದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಒಂದನೇ ತರಗತಿಯಿಂದ ಡಿಗ್ರಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿದ್ದಾರೆ, ಆದರೆ ಈ ಗ್ರಾಮಕ್ಕೆ ಯಾವುದೇ ಬಸ್ ವ್ಯವಸ್ಥೆಯಿಲ್ಲದಿರುವುದು ಮಾತ್ರ ನಿಜಕ್ಕೂ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗ್ತಿದೆ.

ದಿನನಿತ್ಯ 3.5 ಕಿ.ಮೀ ದೂರ ಶಾಲಾ, ಕಾಲೇಜಿಗೆ ವಿದ್ಯಾರ್ಥಿಗಳು ನಡೆದುಕೊಂಡೇ ಬಂದು ಪಾಠಕಲಿಯುವ ದುಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗ್ತಿದೆ. ಜೊತೆಗೆ ನಾವು ನಡೆದುಕೊಂಡು ಹೋಗಿ ಶಾಲಾ-ಕಾಲೇಜು ತಲುಪವಷ್ಟರಲ್ಲಿ ಒಂದೆರಡು ಕ್ಲಾಸ್ ಮುಗಿದಿರುತ್ತದೆ. ಆಗ ನಮಗೆ ಪಾಠ ಅರ್ಥವಾಗಲ್ಲ, ಜೊತೆಗೆ ಶಿಕ್ಷಕರು ಸಹ ನಮ್ಮನ್ನ ಶಾಲಾ ಕೊಠಡಿಯಿಂದ ಹೊರಗಿ ನಿಲ್ಲಿಸುತ್ತಾರೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

Explained: ಒಲಿಂಪಿಕ್ಸ್‌​ ಕ್ರೀಡಾ ಜ್ಯೋತಿ ಕೋವಿಡ್ ಸಂದರ್ಭದಲ್ಲಿ ಜಗತ್ತಿಗೆ ಉತ್ಸಾಹವನ್ನು ಹಂಚುವ ಸಂಜೀವಿನಿ...!

ಇನ್ನು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗುವ ಶಾಲೆಗೆ ಈ ಗ್ರಾಮದ ವಿದ್ಯಾರ್ಥಿಗಳು 6.30 ಕ್ಕೆ ಮನೆಯಿಂದ ನಡೆದುಕೊಂಡು ಶಾಲೆಯನ್ನ ತಲುಪಬೇಕಿದೆ. ಜೊತೆಗೆ ಸಂಜೆ 5 ಗಂಟೆಗೆ ಶಾಲೆ ಮುಗಿದರೆ ಶಾಲೆಯಿಂದ ನಡೆದುಕೊಂಡು ಮನೆ ತಲುಪಲು 7.30 ಗಂಟೆ ಆಗುತ್ತದೆ. ಶಾನುಭೋಗನಹಳ್ಳಿಯಿಂದ ಪಕ್ಕದ ಕೋಡಂಬಳ್ಳಿ ಗ್ರಾಮಕ್ಕೆ ವಿದ್ಯಾರ್ಥಿಗಳು ಪಾಠಕಲಿಯಲು ಬರಬೇಕಿದೆ.

ಈ ರಸ್ತೆಯಲ್ಲಿ ಸಂಜೆ ಸಮಯದಲ್ಲಂತೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುತ್ತದೆ. ಕಾಡಂಚಿನ ಗ್ರಾಮವಾಗಿರುವುದರಿಂದ ಕರಡಿ, ಚಿರತೆಗಳು ಹೆಚ್ಚಾಗಿ ಇರುತ್ತವೆ. ಜೊತೆಗೆ ಶೇ.40 ರಷ್ಟು ಹೆಣ್ಣು ಮಕ್ಕಳೇ ಇರುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗ್ತಿದೆ. ಈ ಸಮಸ್ಯೆಯಿಂದ ಗ್ರಾಮದ ಪೋಷಕರಿಗೂ ನೆಮ್ಮದಿಯಿಲ್ಲ ಎಂದು ಗ್ರಾ.ಪಂ.ಸದಸ್ಯ ಮತ್ತಿ ರವಿ ಹಾಗೂ ಯಜಮಾನ್ ಪುಟ್ಟಸ್ವಾಮಿಗೌಡ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಇಷ್ಟೆಲ್ಲ ಕಷ್ಟಗಳಿದ್ದರೂ ಸಹ ಈ ಗ್ರಾಮದ ವಿದ್ಯಾರ್ಥಿಗಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಈ ಸಂಬಂಧ ಗ್ರಾಮದ ಜನರು ರಾಜ್ಯ ಸರ್ಕಾರಕ್ಕೆ ನ್ಯೂಸ್ 18 ಕನ್ನಡದ ಮೂಲಕ ಮನವಿ ಮಾಡಿ ಆದಷ್ಟು ಬೇಗ ನಮ್ಮೂರಿಗೆ ಸರ್ಕಾರಿ ಬಸ್ ವ್ಯವಸ್ಥೆಯನ್ನ ಮಾಡಿದರೆ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸಮಾಜಕ್ಕೆ ಕೊಡುಗೆಯಾಗಿ ಸಿಗಲಿದ್ದಾರೆಂದು ತಿಳಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮವಹಿಸಲಿ ಎಂಬುದೇ ನಮ್ಮ ಆಶಯ.

(ವರದಿ: ಎ.ಟಿ.ವೆಂಕಟೇಶ್)
Published by:Latha CG
First published: