HOME » NEWS » State » NO BUS FACILITIES FOR GADAG HATALGERE STUDENTS SESR SKG

ಬಸ್ ಪಾಸ್ ಇದ್ರು ನಡೆದುಕೊಂಡು ಕಾಲೇಜಿಗೆ ಹೋಗುವ ಸ್ಥಿತಿ; ಬಸ್​ ಸೇವೆಗೆ ವಿದ್ಯಾರ್ಥಿಗಳ ಆಗ್ರಹ

ತಾಲೂಕಿನ ಹಾತಲಗೇರಿ ಗ್ರಾಮದ ವಿದ್ಯಾರ್ಥಿಗಳು ನಿತ್ಯ ಗದಗ ನಗರಕ್ಕೆ ನಡೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ

news18-kannada
Updated:January 24, 2021, 7:16 AM IST
ಬಸ್ ಪಾಸ್ ಇದ್ರು ನಡೆದುಕೊಂಡು ಕಾಲೇಜಿಗೆ ಹೋಗುವ ಸ್ಥಿತಿ; ಬಸ್​ ಸೇವೆಗೆ ವಿದ್ಯಾರ್ಥಿಗಳ ಆಗ್ರಹ
ನಡೆದುಕೊಂಡು ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿಗಳು
  • Share this:
ಗದಗ (ಜ. 24): ಕೊರೋನಾ ಹಾವಳಿಯಿಂದ ಆನ್ ಲೈನ್ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದು, ಈಗ ತಾನೇ ಕಾಲೇಜು ಕಡೇ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಒಂದು ಕಡೇ ಕೊರೊನಾ ಆತಂಕ ಇನ್ನೊಂದೆಡೆ ಸಮರ್ಪಕ  ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಇರದಿದಕ್ಕೆ ವಿದ್ಯಾರ್ಥಿಗಳು ಪಡಬಾರದ ಕಷ್ಟವನ್ನು ಅನುಭವಿಸುತ್ತಿದ್ದಾರೆ. ತಾಲೂಕಿನ ಹಾತಲಗೇರಿ ಗ್ರಾಮದ ವಿದ್ಯಾರ್ಥಿಗಳು ನಿತ್ಯ ಗದಗ ನಗರಕ್ಕೆ ನಡೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾತಲಗೇರಿ ಗ್ರಾಮದಲ್ಲಿ ಸುಮಾರು  40 ರಿಂದ‌ 50 ವಿದ್ಯಾರ್ಥಿಗಳು, ಪಿಯುಸಿ, ಐಟಿಐ, ಸೇರಿದಂತೆ ಪದವಿ ಶಿಕ್ಷಣ ಪಡೆಯಲು ಗದಗ ನಗರಕ್ಕೆ ಆಗಮಿಸುತ್ತಾರೆ. ಆದ್ರೆ ಮುಂಜಾನೆ ಗದಗ ಲಕ್ಕುಂಡಿ ಮಾರ್ಗವಾಗಿ ಸಂಚಾರ ಮಾಡುವ ಒಂದೇ ಒಂದು ಬಸ್ ಇರೋದರಿಂದ ಅದು ಸಂಪೂರ್ಣವಾಗಿ ಭರ್ತಿಯಾಗಿ ಬರ್ತಾಯಿದೆ. ಹಾತಲಗೇರಿ ವಿದ್ಯಾರ್ಥಿಗಳು ಬಸ್ ನಲ್ಲಿ ಹತ್ತಲು ಸ್ಥಳಾವಕಾಶ ಇರದಿದಕ್ಕೆ ನಡೆದುಕೊಂಡು ಕಾಲೇಜಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ದುಡ್ಡು ಇದ್ದವರು ಟಂಟಂ ಗಳ ಮೂಲಕ  ಕಾಲೇಜಿಗೆ ಬಂದ್ರೆ, ಬಡ ವಿದ್ಯಾರ್ಥಿಗಳು ನಡೆದುಕೊಂಡು ಕಾಲೇಜಿಗೆ ಹೋಗುವಂತಹ ಸ್ಥಿತಿಯಿದೆ.‌ ಕೂಡಲೇ ನಮಗೆ ಬಸ್ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಬಸ್ ಪಾಸ್ ಇದ್ರು ನಡೆದುಕೊಂಡು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು..!

ಇನ್ನೂ ಸಾರಿಗೆ ಸಂಸ್ಥೆಗೆ 1050 ರೂಪಾಯಿ ಹಣ ನೀಡಿ ಬಸ್ ಪಾಸ್ ಪಡೆದುಕೊಂಡಿದ್ದಾರೆ. ಸರಿಯಾದ ಬಸ್ ವ್ಯವಸ್ಥೆ ಇರದಿದಕ್ಕೆ, ಕಾಲೇಜಿಗೆ ಹೋಗುವಾಗ ಹಾಗೂ ವಾಪಸ್ ಬರುವಾಗ ಖಾಸಗಿ ವಾಹನಗಳ ಮೂಲಕ ಹಣವನ್ನು ನೀಡಿಯೇ ಬರಬೇಕು. ಇಲ್ಲವಾದ್ರೆ ನಡೆದುಕೊಂಡು ಬರಬೇಕು ಅಂತಾ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡೆಸುತ್ತಿದ್ದಾರೆ.10 ಗಂಟೆಯ ನಂತ್ರ ಕಾಲೇಜು ಆರಂಭವಾದ್ರು ಕೂಡಾ ನಾವು ಮುಂಜಾನೆ‌  7 ಗಂಟೆಗೆ ಹೋಗುವಂತಹ ‌ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಮರ್ಪಕವಾಗಿ ಬಸ್ ವ್ಯವಸ್ಥೆ ಮಾಡಬೇಕು ಅಂತಾ ಒತ್ತಾಯ ಮಾಡ್ತಾಯಿದ್ದಾರೆ ವಿದ್ಯಾರ್ಥಿಗಳು.

ಗದಗ ನಗರದಿಂದ ಕೂಗಳತೆ ದೂರದಲ್ಲಿರುವ ಹಾತಲಗೇರಿ ಗ್ರಾಮ...! 

ಕೊರೋನಾ ಆತಂಕದ ನಡುವೆ ಕಾಲೇಜು ಆರಂಭವಾಗಿವೆ. ಆದ್ರೆ, ಕಾಲೇಜಿಗೆ ಬರಲು ವಿದ್ಯಾರ್ಥಿಗಳು ಪಡಬಾರದ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಹೌದು ಸಮರ್ಪಕವಾಗಿ ಬಸ್ ಸೌಕರ್ಯ ಇಲ್ಲದಿದಕ್ಕೆ ನಡೆದುಕೊಂಡು ಕಾಲೇಜಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ದುಡ್ಡು ಇದ್ದವರು ಖಾಸಗಿ ವಾಹನಗಳ ಮೂಲಕ ಹೋದ್ರೆ, ಹಣ ಇಲ್ಲದವರು ನಡೆದುಕೊಂಡು ವಿದ್ಯಾರ್ಜನೆಗೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿರೋದು ದುರ್ದೈವದ ಸಂಗತಿಯಾಗಿದೆ.

ಇನಾದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಎಚ್ಚತ್ತುಕೊಂಡು ಹಾತಲಗೇರಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಮಾಡಬೇಕಾಗಿದೆ. ಮುಂಜಾನೆ ಹಾಗೂ ಸಂಜೆ ಬಸ್ ಬಿಡುವ ಮೂಲಕ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕಾಗಿದೆ.

(ವರದಿ: ಸಂತೋಷ ಕೊಣ್ಣೂರ)
Published by: Seema R
First published: January 24, 2021, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories