ಯಾವ ಬಾಂಬೆ ಟೀಮೂ ಇಲ್ಲ, ಈಗಿರೋದು ಯಡಿಯೂರಪ್ಪನವರ ಟೀಂ ಮಾತ್ರ; ಸಚಿವ ಬಿ.ಸಿ ಪಾಟೀಲ್

ನಮ್ಮಲ್ಲಿ ಯಾವುದೇ ಬಿರುಕು ಉಂಟಾಗಿಲ್ಲ. ಬಿಜೆಪಿಯಿಂದ ತಾಳಿ ಕಟ್ಟಿಸಿಕೊಂಡು ಮದುವೆಯಾಗಿ ಶಾಸಕರಾದ  ಮೇಲೆ  ಯಾವ ಟೀಮೂ ಇಲ್ಲ. ನಮ್ಮಲ್ಲಿರೋದು ಒಂದೇ ಟೀಮು; ಅದು ಬಿಎಸ್​ವೈ ಟೀಂ, ಬಿಜೆಪಿ ಟೀಂ ಎಂದು ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಬಿ.ಸಿ. ಪಾಟೀಲ್.

ಬಿ.ಸಿ. ಪಾಟೀಲ್.

  • Share this:
ಚಾಮರಾಜನಗರ (ಜ. 23): ನಮ್ಮಲ್ಲಿ ಯಾವ ಬಾಂಬೆ ಟೀಮೂ ಇಲ್ಲ, ಬೆಂಗಳೂರು ಟೀಮೂ ಇಲ್ಲ. ಈಗ ನಮ್ಮದೆಲ್ಲ ಯಡಿಯೂರಪ್ಪನವರ ಟೀಂ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾತನಾಡಿದ ಬಿ.ಸಿ. ಪಾಟೀಲ್, ನಮ್ಮಲ್ಲಿ ಯಾವುದೇ ಬಿರುಕು ಉಂಟಾಗಿಲ್ಲ. ಬಿಜೆಪಿಯಿಂದ ತಾಳಿ ಕಟ್ಟಿಸಿಕೊಂಡು ಮದುವೆಯಾಗಿ ಶಾಸಕರಾದ  ಮೇಲೆ  ಯಾವ ಟೀಮೂ ಇಲ್ಲ. ನಮ್ಮಲ್ಲಿರೋದು ಒಂದೇ ಟೀಮು; ಅದು ಬಿಎಸ್​ವೈ ಟೀಂ, ಬಿಜೆಪಿ ಟೀಂ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ನಂತರ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನದ  ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇಕಾಗಿದ್ದು ಸಿಗದಿದ್ದಾಗ ಅತೃಪ್ತಿ ಸಹಜ. ಐದು ಬೆರಳು ಒಂದೇ ಸಮ ಇರುವುದಿಲ್ಲ. ಒಂದೆರೆಡು ದಿನದಲ್ಲಿ ಎಲ್ಲವೂ ಸರಿಹೋಗಲಿದೆ. ನನಗೆ ಅರಣ್ಯ ಖಾತೆ ಕೊಟ್ಟಿದ್ದರು. ಆದರೆ ನಾನೇ ಕೇಳಿಕೊಂಡು  ಕೃಷಿ ಖಾತೆ ಪಡೆದೆ. ತಮಗೆ ಇಷ್ಟವಾದ ಖಾತೆ ಸಿಕ್ಕರೆ ಒಳ್ಳೆಯ ಕೆಲಸ ಮಾಡಬಹುದು ಎಂಬುದು ಕೆಲವರ ಅಭಿಪ್ರಾಯ ಇರಬಹುದು ಎಂದಿದ್ದಾರೆ.

ರೈತರು ಸ್ವಾವಲಂಬಿಗಳಾಗಿ ಆತ್ಮಾಭಿಮಾನದಿಂದ ಬದುಕುವಾಂತಾದರೆ ಅದೇ ನನಗೆ ಖುಷಿ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಮೆಜಾರಿಟಿ ರೈತರು ಒಪ್ಪಿಕೊಂಡಿದ್ದಾರೆ. ತಂದೆತಾಯಿಗೆ ವಯಸ್ಸಾಯಿತೆಂದು ಹೊರಗೆ ಹಾಕುತ್ತೇವಾ? ಹಾಗೇ ಗೋವುಗಳನ್ನು ಸಹ ನೋಡಿಕೊಳ್ಳಬೇಕಲ್ಲವೇ? ಅವುಗಳು ಸಗಣಿಯಿಂದ ಗೊಬ್ಬರವಾಗುವುದಿಲ್ಲವೇ? ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಆತ್ಮರಕ್ಷಣೆಗೆ ಕೈ ಮಾಡಿದ ಸೌಮ್ಯ ರೆಡ್ಡಿ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ; ಡಿಕೆ ಶಿವಕುಮಾರ್

ಗಣಿಗಾರಿಕೆಯಿಂದ ಬೆಳೆಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ  ಸಚಿವ ಬಿ.ಸಿ. ಪಾಟೀಲ್, ಈ ಬಗ್ಗೆ ಗಣಿ ಸಚಿವರೊಂದಿಗೆ ಚರ್ಚಿಸುತ್ತೇನೆ. ರೈತರ ಬೆಳೆಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು, ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳ ಬಗ್ಗೆ ಗುಂಡ್ಲುಪೇಟೆ ತಾಲೋಕು ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಸಚಿವ ಬಿ.ಸಿ. ಪಾಟೀಲ್ ಭೇಟಿ ಮಾಡಿ ರೈತರ ಅಹವಾಲು ಆಲಿಸಿದರು.

ಈ ವೇಳೆ ಮಾತನಾಡಿದ ರೈತರು ನೀವು ನಮ್ಮ ಹಸಿರು ಟವೆಲ್ ಹಾಕಿಕೊಂಡಿದ್ದೀರಿ. ರೈತರ ಪರ ಕೆಲಸ ಮಾಡಿ ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ. ಪಾಟೀಲ್, ನಾನು ಯಾವಾಗಲೂ ರೈತರ ಪರವೇ ಕೆಲಸ ಮಾಡುತ್ತಿದ್ದೇನೆ. ಹಿಂದೆ ರೈತರ ಪರ ಹೋರಾಟ ಮಾಡಿದ್ದಕ್ಕೆ  ನನ್ನನ್ನು 9 ದಿನ ಜೈಲಿಗೆ ಹಾಕಿದ್ದರು. ಮಹಿಳಾ ಕಾನ್​ಸ್ಟೇಬಲ್ ಮೇಲೆ ಅತ್ಯಾಚಾರಕ್ಕೆ ಯತ್ನ ಎಂದು ನನ್ನ ಮೇಲೆ  ಸುಳ್ಳು ಕೇಸ್ ಹಾಕಿದ್ದರು ಎಂದರು.

ನಾನು ಹಸಿರು ಟವಲ್ ಹಾಕಿಕೊಂಡೇ ಜೈಲಿಗೆ ಹೋದವನು. 9 ದಿನಗಳ ಕಾಲ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದೆ. ಬೆಳೆ ವಿಮೆ ಬಗ್ಗೆ ರೈತರೊಂದಿಗೆ ಸೇರಿ ಹೋರಾಟ ಮಾಡುವಾಗ ಲಾಠಿ ಚಾರ್ಚ್ ಮಾಡಿ ಎಲ್ಲರನೂ ಅರೆಸ್ಟ್ ಮಾಡಿದ್ದರು. ಸುಳ್ಳು ಕೇಸ್ ಹಾಕಿ ಜೈಲಿಗೆ ಕಳಿಸಿದ್ದರು ಎಂದು ತಾವು ಜೈಲಿಗೆ ಹೋದ ಪ್ರಸಂಗವನ್ನ ಪ್ರತಿಭಟನಾ ರೈತರೊಂದಿಗೆ ಹಂಚಿಕೊಂಡರು.

(ವರದಿ: ಎಸ್.ಎಂ. ನಂದೀಶ್)
Published by:Sushma Chakre
First published: