HOME » NEWS » State » NO BEDS AVAILABLE IN KOPPAL HOSPITAL AND DISTRICT ADMINISTRATIVE WILL ARRANGE ANOTHER FACILITY SBR LG

Coronavirus: ಕೊಪ್ಪಳದಲ್ಲಿ ಕೋವಿಡ್ ಹಾಸಿಗೆಗಳು ಭರ್ತಿ; ಪರ್ಯಾಯ ಮಾರ್ಗಕ್ಕೆ ಚಿಂತನೆ

ಈಗ ಜಿಲ್ಲೆಯಲ್ಲಿ ನಿತ್ಯ 400-600 ವರೆಗೂ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಈಗ ಜಿಲ್ಲಾಡಳಿತದ ಮಾಹಿತಿ ಪ್ರಕಾರ 368 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿಯೂ ಖಾಸಗಿ 10 ಆಸ್ಪತ್ರೆಯಲ್ಲಿ ಈಗಾಗಲೇ 160 ಹಾಸಿಗೆಗಳು ಭರ್ತಿಯಾಗಿವೆ.

news18-kannada
Updated:May 5, 2021, 3:59 PM IST
Coronavirus: ಕೊಪ್ಪಳದಲ್ಲಿ ಕೋವಿಡ್ ಹಾಸಿಗೆಗಳು ಭರ್ತಿ; ಪರ್ಯಾಯ ಮಾರ್ಗಕ್ಕೆ ಚಿಂತನೆ
ಹಾಸಿಗೆಗಗಳು ಭರ್ತಿಯಾಗಿರುವ ಬೋರ್ಡ್​
  • Share this:
ಕೊಪ್ಪಳ(ಮೇ 05): ಮಹಾಮಾರಿ ಕೊರೋನಾ ಎರಡನೆ ಅಲೆ ಅಬ್ಬರಿಸುತ್ತಿದೆ. ಈ ಸಂದರ್ಭದಲ್ಲಿ ಸೋಂಕಿತರ ಪರದಾಟ ಮುಂದುವರೆದಿದೆ. ಸೋಂಕಿತರಿಗೆ ಈಗ ಹಾಸಿಗೆಯ ಸಮಸ್ಯೆ ಎದುರಾಗಿದೆ. ಕೊಪ್ಪಳ ಜಿಲ್ಲಾಸ್ಪತ್ರೆಯ ಕೋವಿಡ್ ಹಾಸಿಗೆಗಳು ಭರ್ತಿಯಾಗಿವೆ. ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಕ್ಕೆ ಜಿಲ್ಲಾಡಳಿತ ಸಿದ್ದತೆ ನಡೆಸಿದೆ. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್​​ಗಾಗಿ 177 ಹಾಸಿಗೆಯನ್ನು ಮೀಸಲಿರಿಸಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಬೆಡ್ ಗಳನ್ನು ಮೀಸಲಿರಿಸಿದೆ.

ಆದರೆ ಈಗ ಜಿಲ್ಲೆಯಲ್ಲಿ ನಿತ್ಯ 400-600 ವರೆಗೂ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಈಗ ಜಿಲ್ಲಾಡಳಿತದ ಮಾಹಿತಿ ಪ್ರಕಾರ 368 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿಯೂ ಖಾಸಗಿ 10 ಆಸ್ಪತ್ರೆಯಲ್ಲಿ ಈಗಾಗಲೇ 160 ಹಾಸಿಗೆಗಳು ಭರ್ತಿಯಾಗಿವೆ. ಈಗ ಬರುತ್ತಿರುವ ಪೇಷಂಟ್ ಗಳಲ್ಲಿ ಬಹುತೇಕರು ಆಕ್ಸಿಜನ್ ಅವಶ್ಯವಿರುವವರೇ ಬರುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯ ಬೆಡ್ ಗಳು ಖಾಲಿ ಇಲ್ಲ, ಭರ್ತಿಯಾಗಿವೆ ಎಂಬ ಬೋರ್ಡ್ ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ ಎಲ್ಲಾ ಕಡೆ ಹಾಕಲಾಗಿದೆ. ಈಗ ಆಸ್ಪತ್ರೆಗೆ ಬರುವ ಕೋವಿಡ್ ಪೇಷಂಟ್ ಗಳಿಗೆ ಬೆಡ್ ಸಮಸ್ಯೆ ಎದುರಾಗಿದೆ.

ಈ ಮಧ್ಯೆ ಜಿಲ್ಲೆಯಲ್ಲಿ ಕೋವಿಡ್ ಹಾಸಿಗೆಗಳು ಭರ್ತಿಯಾಗಿರುವ ಹಿನ್ನಲೆಯಲ್ಲಿ ಈಗಿರುವ ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಶೇ 50 ಹಾಗೂ ಕೊಪ್ಪಳದ ಶ್ರೀಗವಿಸಿದ್ದೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಬೇಕಾಗಿದೆ. ಈ ಹಿನ್ನಲೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಪರವಾನಿಗೆಗಾಗಿ ಕೊಪ್ಪಳ ಜಿಲ್ಲಾಧಿಕಾರಿ ವಿಕಾಶ ಕಿಶೋರ ಸುರಳ್ಕರ ಪ್ರಸ್ತಾವನೆ ಸಲ್ಲಿಸಿದ್ದಾರೆ. 

Covid-19 Crisis - ಮುಂಬೈ ನೋಡಿ ಕಲಿಯಿರಿ ಎಂದು ಕೇಂದ್ರಕ್ಕೆ ತಾಕೀತು ಮಾಡಿದ ಸುಪ್ರೀಂ

ಇದರ ನಡುವೆ ಇಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪವು ಕೇಳಿ ಬರುತ್ತಿದೆ. ಇಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಆದರೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬಳಕೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ವೇಳೆಗೆ ಆಕ್ಸಿಜನ್ ಸರಬರಾಜಿನಲ್ಲಿ ತಾಂತ್ರಿಕ ತೊಂದರೆಯಾಗಿ ರೋಗಿಯೊಬ್ಬರು  ಒದ್ದಾಡುತ್ತಿದ್ದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಗಾಳಿ ಬೀಸುತ್ತಿದ್ದರು.  ಸಿಬ್ಬಂದಿ ಎಚ್ಚೆತ್ತುಕೊಂಡು ಆಮೇಲೆ ಆಕ್ಸಿಜನ್ ಸರಬರಾಜು ಮಾಡಿದರು.

ಇದೇ ಹೊಸಪೇಟೆ ತಾಲೂಕಿನ ಕೊವಿಡ್ ಪೇಷಂಟ್ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ ನಲ್ಲಿ ಪೇಷಂಟ್ ಗೆ ಸರಿಯಾಗಿ ವೆಂಟಿಲೇಟರ್ ಜೋಡಣೆ ಮಾಡಿರಲಿಲ್ಲ. ಜೋಡಣೆ ಮಾಡಿ ಎಂದು ಕೇಳಿಕೊಂಡರು ಸಿಬ್ಬಂದಿ ಅವರ ಗಮನಕ್ಕೆ ತಂದಿಲ್ಲ. ಈ ಮಧ್ಯೆ ಅವರೊಂದಿಗೆ ಇದ್ದ ಅವರ ತಮ್ಮನನ್ನು ಸಹ ಹೊರಗಡೆ ಕಳುಹಿಸಿದ್ದಾರೆ. ಇದರಿಂದಾಗಿ ಸೋಂಕಿತ ಸಾವನ್ನಪ್ಪಿದ್ದಾನೆ. ಈ ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯ ವೇ ಕಾರಣ ಎಂದು ಮೃತನ ತಮ್ಮ ರೋಧಿಸುತ್ತಾ ಆರೋಪ ಮಾಡಿದ್ದಾರೆ.
Youtube Video
ಮೃತನ ಸಂಬಂಧಿಗಳು ಹೊರಗಡೆ ಇರುವ ಪೊಲೀಸರ ಮುಂದೆಯೂ ರೋಧಿಸುತ್ತಾ ಆರೋಪ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಅನಾವಶ್ಯವಾಗಿ ತಿರುಗಾಡುವವರನ್ನು ಕೊವಿಡ್ ಆಸ್ಪತ್ರೆ ಸಿಬ್ಬಂದಿ ತಡೆದಿದೆ, ಒಂದು ವೇಳೆ ನಾನು ಒಳಗಡೆ ಇದ್ದರೆ ನನ್ನ ಅಣ್ಣ ಉಳಿಯುತ್ತಿದ್ದ ನನಗೆ ಏನಾದರೂ ಚಿಂತೆ ಇರಲಿಲ್ಲ ಎಂದು ರೋಧಿಸಿದ.
Published by: Latha CG
First published: May 5, 2021, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories