• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kichcha Sudeep: ಕಿಚ್ಚನ ಸಿನಿಮಾ, ಜಾಹೀರಾತು, ಟಿವಿ ಶೋಗಳಿಗಿಲ್ಲ ಬ್ರೇಕ್! ಸುದೀಪ್‌ಗೆ ಚುನಾವಣಾ ಆಯೋಗದ ಗ್ರೀನ್‌ ಸಿಗ್ನಲ್

Kichcha Sudeep: ಕಿಚ್ಚನ ಸಿನಿಮಾ, ಜಾಹೀರಾತು, ಟಿವಿ ಶೋಗಳಿಗಿಲ್ಲ ಬ್ರೇಕ್! ಸುದೀಪ್‌ಗೆ ಚುನಾವಣಾ ಆಯೋಗದ ಗ್ರೀನ್‌ ಸಿಗ್ನಲ್

ನಟ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್ ಅವರ ಸಿನಿಮಾ, ಜಾಹೀರಾತುಗಳ ಪ್ರದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ನಟ ಕಿಚ್ಚ ಸುದೀಪ್ (Kichcha Sudeep) ಅವರ ಸಿನಿಮಾ, ಜಾಹೀರಾತುಗಳ ಪ್ರದರ್ಶನಕ್ಕೆ  ನಿರ್ಬಂಧ ಹೇರುವಂತೆ ಚುನಾವಣೆ ಆಯೋಗಕ್ಕೆ (Election Commission) ದೂರು ನೀಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ನಟ ಕಿಚ್ಚ ಸುದೀಪ್ ಅವರ ಸಿನಿಮಾ (Movie), ಜಾಹೀರಾತುಗಳ (Advertisement) ಪ್ರದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದೆ. ಚುನಾವಣೆ ಆಯೋಗದ ಆದೇಶದಿಂದ ಸುದೀಪ್ ನಿಟ್ಟುಸಿರು ಬಿಟ್ಟಿದ್ದಾರೆ. ಬಿಜೆಪಿ ಪರ ಸುದೀಪ್ ಪ್ರಚಾರಕ್ಕೆ ಈಗಾಗಲೇ ಭರ್ಜರಿ ಪ್ಲಾನ್ ಮಾಡಲಾಗಿದೆ.  


ಚುನಾವಣಾ ಆಯೋಗಕ್ಕೆ ಜೆಡಿಸ್​ ದೂರು


ಚುನಾವಣೆಗೆ ಸ್ಪರ್ಧಿಸುವ ಅಥವಾ ದೂರದರ್ಶನದಲ್ಲಿ ಪ್ರಚಾರ ಮಾಡುವ ನಟರನ್ನು ಮಾತ್ರ ವಾಣಿಜ್ಯ ಪ್ರದರ್ಶನದಿಂದ ನಿರ್ಬಂಧಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಸುದೀಪ್ ಅವರ ಚಿತ್ರಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಜೆಡಿಎಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.


JDS complaint against actor kichcha sudeepa pvn
ಬೊಮ್ಮಾಯಿ ಜೊತೆ ಸುದೀಪ್​


ಬೊಮ್ಮಾಯಿ ಹೇಳಿದ ಕಡೆ ಸುದೀಪ್​ ಪ್ರಚಾರ


ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಫೈಟ್ ಜೋರಾಗಿದೆ. ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿದ್ದಾರೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಈಗಾಗಲೇ ನಟ ಕಿಚ್ಚ ಸುದೀಪ್  ಘೋಷಿಸಿದ್ದಾರೆ. ಸಿಎಂ ಬೊಮ್ಮಾಯಿ ಹೇಳಿದ ಕಡೆ ಪ್ರಚಾರ ಮಾಡುವುದಾಗಿ ಸುದೀಪ್ ಹೇಳಿದ್ದಾರೆ.


ಬಿಜೆಪಿಯ ಸ್ಟಾರ್ ಪ್ರಚಾರಕ ಸುದೀಪ್​


ಕನ್ನಡದ ನಟ ಕಿಚ್ಚ ಸುದೀಪ್ ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸಿನಿಮಾ, ಜಾಹೀರಾತು, ಪೋಸ್ಟರ್ ಮುಂತಾದವುಗಳು ಮತದಾರರ ಮೇಲೆ ಪ್ರಭಾವ ಬೀರಬಹುದು. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಅವರ ಸಿನಿಮಾಗಳನ್ನು ತಡೆ ಹಿಡಿಯುವಂತೆ ಜೆಡಿಎಸ್​ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.


ಏಪ್ರಿಲ್ 14 ರಿಂದ ಸುದೀಪ್ ಕ್ಯಾಂಪೇನ್ ಶುರು

 ಸುದೀಪ್ ಬಿಜೆಪಿ ಪರ ಪ್ರಚಾರಕ್ಕೆ ನಿಂತಿದ್ದು,  ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ನಟ ಕಿಚ್ಚ ಸುದೀಪ್​ ಬಿಜೆಪಿ ಪರ ಪ್ರಚಾರಕ್ಕೆ (campaign) ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್ 14 ರಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅವರು ಪ್ರಚಾರ ಆರಂಭಿಸಲಿದ್ದಾರೆ ಎಂದು ಹೇಳಲಾಗ್ತಿದೆ.




ಎಲ್ಲಿಂದ ಶುರುವಾಗುತ್ತೆ ಕಿಚ್ಚನ ಪ್ರಚಾರ?


ಸಿಎಂ ಬೊಮ್ಮಾಯಿ ಕಣಕ್ಕಿಳಿಯಲಿರುವ ಶಿಗ್ಗಾಂವಿ ಜೊತೆಗೆ ನಾಯಕ್ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸುದೀಪ್ ಪ್ರಚಾರಕ್ಕಿಳಿಯುತ್ತಾರೆ ಎನ್ನಲಾಗ್ತಿದೆ. ಕಿಚ್ಚ ಸುದೀಪ್​ ಎಲ್ಲಿಂದ ಪ್ರಚಾರ ಆರಂಭಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.


ನನ್ನ ಬೆಂಬಲ ಬೊಮ್ಮಾಯಿಗೆ ಎಂದಿದ್ದ ಸುದೀಪ್​


ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರು ಸಿಎಂ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತಾಡಿ ನನ್ನ ಬೆಂಬಲ ಸಿಎಂ ಬೊಮ್ಮಾಯಿ ಅವರಿಗೆ ಎಂದು ಹೇಳಿದ್ರು. ಅಲ್ಲದೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಬೊಮ್ಮಾಯಿ ಅವರು ಹೇಳಿದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದಾಗಿ ಸುದೀಪ್​ ಹೇಳಿದ್ದಾರೆ. ಆದರೆ ಸುದೀಪ್ ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿಲ್ಲ. ತನಗೆ ಸಹಾಯ ಮಾಡಿದ ಬೊಮ್ಮಾಯಿ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನನ್ನನ್ನು ಬೆಂಬಲಿಸಿದರೆ ಬಿಜೆಪಿಯನ್ನು ಬೆಂಬಲಿಸಿದಂತೆ ಎಂದಿದ್ದರು.




ಬೊಮ್ಮಾಯಿ ಎಲ್ಲಿ ಹೇಳ್ತಾರೋ ಅಲ್ಲಿ ಕೆಲಸ ಮಾಡುವೆ


ನನ್ನ  ಜೀವನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒಳ್ಳೆಯ ಸ್ಥಾನ ನೀಡಿದ್ದೇನೆ. ಬಸವರಾಜ ಬೊಮ್ಮಾಯಿ ಎಲ್ಲಿ ಹೇಳ್ತಾರೆ ಅಲ್ಲಿ ಕೆಲಸ ಮಾಡೋಕೆ ನಾನು ರೆಡಿ ಇದ್ದೇನೆ ಎಂದ ಸುದೀಪ್ ಹೇಳಿದ್ದಾರೆ. ಬೇರೆ ಪಕ್ಷದ ನಾಯಕರು ಯಾರಾದರೂ ಹಿಂದೆ ನನ್ನ ಕಷ್ಟಕ್ಕೆ ಆಗಿದ್ರೆ, ಖಂಡಿತವಾಗಿಯೂ ಅವರ ಪರವಾಗಿ ನಾನು ಪ್ರಚಾರ ಮಾಡ್ತೀನಿ ಇದೇ ವೇಳೆ ಸುದೀಪ್ ಹೇಳಿದ್ದರು.


First published: