ಯಾದಗಿರಿಯಲ್ಲಿ ಸೇವೆ ನಿಲ್ಲಿಸಿದ ಆ್ಯಂಬುಲೆನ್ಸ್​​ಗಳು​​​; ಕೋವಿಡ್​ ರೋಗಿಗಳ ಪರದಾಟ

ಕೋವಿಡ್ ನಿರ್ವಹಣೆಗೆ ಎಸ್ ಡಿಆರ್ ಎಫ್ ನಿಧಿಯಿಂದ ತಹಶೀಲ್ದಾರ ಅವರ ಮೂಲಕ ಇಂಧನದ ಹಣ ಸರಕಾರ ಪಾವತಿ ಮಾಡುತ್ತದೆ. ಆ್ಯಂಬುಲೆನ್ಸ್ ಗೆ ಡಿಸೇಲ್ ಹಾಕುವ ಬಂಕ್ ಮಾಲಿಕರಿಗೆ ತಹಶೀಲ್ದಾರ ಮೂಲಕ ಹಣ ಪಾವತಿ ಮಾಡಲಾಗುತ್ತದೆ. ಆದರೆ, ಹುಣಸಗಿಯಲ್ಲಿ ಕಳೆದ ಎರಡು ತಿಂಗಳಿನಿಂದ ಇಂಧನ ಹಾಕಿದ್ದ ಮಾಲಿಕರಿಗೆ ಅಂದಾಜು ಎರಡು ಲಕ್ಷ ರೂನಷ್ಟು ಪಾವತಿ ಮಾಡುವುದು ಬಾಕಿ ಇದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಯಾದಗಿರಿ(ಆ.31): ರೋಗಿಗಳ ಪಾಲಿಗೆ ಆ್ಯಂಬುಲೆನ್ಸ್ ಗಳು ಸಂಜೀವಿನಿಯಾಗಿವೆ. ಆದರೆ, ಈಗ ತುರ್ತು ಆಸ್ಪತ್ರೆಗೆ ದಾಖಲಾಗಬೇಕೆಂದರೆ ಕೋವಿಡ್ ಸೋಂಕಿತರು ಪರದಾಡುವಂತಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಾ ಕೇಂದ್ರದಲ್ಲಿಯೇ ಕಳೆದ ಒಂದು ವಾರದಿಂದ ಆ್ಯಂಬುಲೆನ್ಸ್ ಸೇವೆ ಸಿಗದೆ ರೋಗಿಗಳು ಪ್ರಯಾಸ ಪಡುವಂತಾಗಿದೆ. ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ನ್ನು ಒಂದು ವಾರದಿಂದ ಆಸ್ಪತ್ರೆ ಮುಂದೆ ನಿಲ್ಲಿಸಲಾಗಿದೆ. ಯಾವುದೇ ತುರ್ತು ಸೇವೆ ಸಿಗುತ್ತಿಲ್ಲ. ಸರಕಾರ ಕೋವಿಡ್ ರೋಗಕ್ಕೆ ಕಡಿವಾಣ ಹಾಕಲು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಟೆಸ್ಟ್ ಮಾಡಿಸುತ್ತಿದೆ. ಹುಣಸಗಿ ತಾಲೂಕಾ ಕೇಂದ್ರ ಹಾಗೂ ಹಳ್ಳಿಯಲ್ಲಿ ಕೂಡ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾಗಬೇಕಾದರೆ ಅಂಬುಲೆನ್ಸ್ ಸೇವೆ ಸಿಗದೆ  ಪರದಾಡುವಂತಾಗಿದೆ.

ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ನಿರ್ವಹಣೆಗೆ ಆ್ಯಂಬುಲೆನ್ಸ್ ಹಾಗೂ ಖಾಸಗಿ ಬಸ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ಹಾಗೂ ಖಾಸಗಿ ಬಸ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಈಗ ಇಂಧನ ಹಾಕಿಸದಕ್ಕೆ ಆ್ಯಂಬುಲೆನ್ಸ್ ಹಾಗೂ ಖಾಸಗಿ ಬಸ್  ಸೇವೆ ಕಳೆದ ಒಂದು ವಾರದಿಂದ  ಸ್ಥಗಿತ ಮಾಡಲಾಗಿದೆ. ಕೋವಿಡ್ ನಿರ್ವಹಣೆಗೆ ಎಸ್ ಡಿಆರ್ ಎಫ್ ನಿಧಿಯಿಂದ ತಹಶೀಲ್ದಾರ ಅವರ ಮೂಲಕ ಇಂಧನದ ಹಣ ಸರಕಾರ ಪಾವತಿ ಮಾಡುತ್ತದೆ. ಆ್ಯಂಬುಲೆನ್ಸ್ ಗೆ ಡಿಸೇಲ್ ಹಾಕುವ ಬಂಕ್ ಮಾಲಿಕರಿಗೆ ತಹಶೀಲ್ದಾರ ಮೂಲಕ ಹಣ ಪಾವತಿ ಮಾಡಲಾಗುತ್ತದೆ. ಆದರೆ, ಹುಣಸಗಿಯಲ್ಲಿ ಕಳೆದ ಎರಡು ತಿಂಗಳಿನಿಂದ ಇಂಧನ ಹಾಕಿದ್ದ ಮಾಲಿಕರಿಗೆ ಅಂದಾಜು ಎರಡು ಲಕ್ಷ ರೂನಷ್ಟು ಪಾವತಿ ಮಾಡುವುದು ಬಾಕಿ ಇದೆ. ಈ ಬಗ್ಗೆ ಬಂಕ್ ಮಾಲಿಕರು ಹಣ ಪಾವತಿ ಮಾಡುವಂತೆ ಕೇಳಿದರೂ ನಿಷ್ಕಾಳಜಿ ತೊರಿದ್ದಾರೆ. ಇದರಿಂದ ಬಂಕ್ ಮಾಲಿಕ ಡಿಸೇಲ್ ಹಾಕುವುದು ಬಂದ್ ಮಾಡಿದ ಪರಿಣಾಮ ಆ್ಯಂಬುಲೆನ್ಸ್ ಹಾಗೂ ಖಾಸಗಿ ಬಸ್ ಸೇವೆ ರೋಗಿಗಳಿಗೆ ಮರೀಚಿಕೆಯಾಗಿದೆ.

ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್ ಭೂಷಣ್​ಗೆ 1 ರೂ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಬಸವರಾಜ ಅವರು ಮಾತನಾಡಿ,ಕೋವಿಡ್ ರೋಗಿಗಳಿಗೆ ಅಂಬುಲೆನ್ಸ್ ಸೌಲಭ್ಯ ಸ್ಥಗಿತ ಮಾಡಿರುವುದರಿಂದ ಬಡ ರೋಗಿಗಳು  ಹಾಗೂ ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂದರು.

ಬಹುತೇಕ ಸೋಂಕಿತರು ಬೈಕ್ ಹಾಗೂ ಕಾರು‌ ಮೂಲಕ ತೆರಳಿ  ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಡವರು ಹಾಗೂ ತೀವ್ರ ಸಮಸ್ಯೆದಿಂದ ಬಳಲುತ್ತಿರುವ ರೋಗಿಗಳಿಗೆ ಆ್ಯಂಬುಲೆನ್ಸ್ ಸೇವೆ ಸಿಗದಕ್ಕೆ ಸಂಕಷ್ಟವಾಗುತ್ತಿದೆ. ಕೆಲ ರೋಗಿಗಳು ಆ್ಯಂಬುಲೆನ್ಸ್ ಗಾಗಿ ಗಂಟೆಗಟ್ಟೆಲೇ ಕಾಯುತ್ತಿದ್ದು ಸುರಪುರದಿಂದ ಹುಣಸಗಿಗೆ ಅಂಬುಲೆನ್ಸ್ ತೆರಳಿ ಸೋಂಕಿತರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಇದು ವಿಳಂಬವಾಗುವ ಜೊತೆಗೆ ಸುರಪುರದಲ್ಲಿರುವ ಆ್ಯಂಬುಲೆನ್ಸ್ ಗಳು ಬೆರೆ ಕಡೆ ತೆರಳಿದರೆ ಆ್ಯಂಬುಲೆನ್ಸ್ ಸೌಲಭ್ಯ ಕಷ್ಟವಾಗುತ್ತಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಸುರಪುರ ತಾಲೂಕಾ ಆರೋಗ್ಯಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ, ಸುರಪುರ ತಹಶಿಲ್ದಾರ ಅವರು ಆಸ್ಪತ್ರೆಗೆ ದಾಖಲಾಗಿರುವುದರಿಂದ ಇಂಧನದ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ. ಈ ಸಮಸ್ಯೆ ಬೇಗ ಪರಿಹರಿಸಿ ಆ್ಯಂಬುಲೆನ್ಸ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು. ಸರಕಾರ ಕೋವಿಡ್ ತಡೆಗೆ ಕೋಟ್ಯಂತರ ರೂ ಹಣ ಖರ್ಚು ಮಾಡುತ್ತದೆ. ಆದರೆ, ಹಣ ಪಾವತಿ ಮಾಡಲು ವಿಳಂಬ ಮಾಡದೆ ಕೂಡಲೇ ಹಣ ಪಾವತಿ ಮಾಡಿ ರೋಗಿಗಳಿಗೆ ಆ್ಯಂಬುಲೆನ್ಸ್ ಸೇವೆ ಕಲ್ಪಿಸಬೇಕಾಗಿದೆ.
Published by:Latha CG
First published: