Nivar Cyclone: ನಿವಾರ್ ಚಂಡಮಾರುತದ ಅಬ್ಬರಕ್ಕೆ ನಲುಗಿದ ರೈತರು; ಇನ್ನೂ ಕಟಾವು ಮಾಡದ ರಾಗಿ ಕೈತಪ್ಪುವ ಆತಂಕ
ಕಳೆದ 2 ದಿನದಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ನಿವಾರ್ ಸೈಕ್ಲೋನ್ ಪರಿಣಾಮ ಎಡಬಿಡದೆ ಮಳೆಯಾಗಿದೆ. ತಾಲೂಕಿನ ಚಿಕ್ಕಗೊಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆನಾಶವಾಗಿದ್ದು, ಪರಿಹಾರ ನೀಡುವಂತೆ ರೈತಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.
news18-kannada Updated:November 28, 2020, 9:21 AM IST

ಮಳೆಗೆ ಕೊಳೆಯುತ್ತಿರುವ ರಾಗಿ
- News18 Kannada
- Last Updated: November 28, 2020, 9:21 AM IST
ಕೋಲಾರ(ನ.28): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ, ನಿವಾರ್ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಕೋಲಾರ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಜಿಟಿಜಟಿ ಮಳೆ, ಮೋಡಕವಿದ ವಾತಾವರಣ ಮುಂದುವರೆದಿದೆ. ಇನ್ನು ಎರಡು ದಿನಗಳ ಕಾಲ ಬಿರುಗಾಳಿ ಸಹಿತ ಜೋರು ಮಳೆಯಾಗುವ ಮುನ್ಸೂಚನೆಯನ್ನು ಕೋಲಾರ ಜಿಲ್ಲಾಡಳಿತ ನೀಡಿದೆ. ಕಳೆದ 3 ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ನೀರು ಕೋಡಿ ಹರಿಯುತ್ತಿವೆ. ಆದರೆ ಚಿನ್ನದ ನಾಡಿನ ರೈತರಿಗೆ ನಿವಾರ್ ಚಂಡಮಾರುತದ ಪರಿಣಾಮ ಇದೀಗ ಕಾಡಲು ಆರಂಭವಾಗಿದೆ. ಈಗಾಗಲೇ ಕಟಾವು ಮಾಡದೇ ಉಳಿದಿರುವ ರಾಗಿ ತೆನೆ, ಜೋರು ಗಾಳಿ ಸಹಿತ ಮಳೆಗೆ ಜಮೀನಿನಲ್ಲೇ ನೆಲಕ್ಕೆ ಉರುಳಿ ಬಿದ್ದಿದೆ. ಹೀಗೆ ಮಳೆ ಇನ್ನು ಮುಂದುವರೆದರೆ, ರಾಗಿ ತೆನೆಯಲ್ಲಿನ ಬೀಜಗಳು ಮೊಳಕೆ ಒಡೆವ ಭೀತಿಯು ರಾಗಿ ಬೆಳೆಗಾರರನ್ನ ಕಾಡುತ್ತಿದೆ. ರಾಗಿ ತೆನೆ ಮೊಳಕೆ ಹೊಡೆದಲ್ಲಿ, ರಾಗಿಯನ್ನ ಯಾರೂ ಕೊಳ್ಳುವುದಿಲ್ಲ.
ಇತ್ತ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆಯಿದ್ದು, ದುಪ್ಪಟ್ಟು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿವಾರ್ ಚಂಡಮಾರುತ ಪರಿಣಾಮ ತಟ್ಟುವ ಆತಂಕ ಎದುರಾಗಿದೆ. ಸಾಮಾನ್ಯವಾಗಿ ಹೆಚ್ಚಾಗಿ ಮಳೆಯಾದಲ್ಲಿ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಅಪ್ಪಳಿಸುವ ಭೀತಿಯಿರುತ್ತದೆ. ಟೊಮೆಟೊ ಮತ್ತು ಆಲೂಗಡ್ಡೆ ಬೆಳೆಗೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ನಿರಂತರವಾಗಿ ಮಳೆಯಾದರೆ, ಅಂಗಮಾರಿ ರೋಗ ವೇಗವಾಗಿ ಬೆಳೆಯನ್ನ ಆವರಿಸುತ್ತದೆ, ಆಗ ಔಷಧಿಗಳನ್ನು ಸಿಂಪಡಿಸಲಾಗದೆ ರೈತರು ನಷ್ಟದ ಸುಳಿಯಲ್ಲಿ ಸಿಲುಕುವ ಸಾಧ್ಯತೆಯಿದೆ. ಕೃಷ್ಣನಗರಿ ಉಡುಪಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ; ಲಕ್ಷದೀಪ ಬೆಳಗಿ ಪುಳಕಿತರಾದ ಭಕ್ತ ಸಮೂಹ
ಕಳೆದ 2 ದಿನದಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ನಿವಾರ್ ಸೈಕ್ಲೋನ್ ಪರಿಣಾಮ ಎಡಬಿಡದೆ ಮಳೆಯಾಗಿದೆ. ತಾಲೂಕಿನ ಚಿಕ್ಕಗೊಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆನಾಶವಾಗಿದ್ದು, ಪರಿಹಾರ ನೀಡುವಂತೆ ರೈತಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ. ಜೋರು ಗಾಳಿ ಮಳೆಯಿಂದಾಗಿ, ರಾಗಿ, ಭತ್ತ, ಬೀನ್ಸ್, ಟೊಮೆಟೊ ಬೆಳೆಗಳು ನೆಲಕಚ್ಚಿವೆ. ತೆಂಗಿನಮರ ಹಾಗೂ ಪರಂಗಿ ಮರಗಳು ಹಲವೆಡೆ ಕುಸಿದಿವೆ. ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘದ ಮುಖಂಡ ನಾರಾಯಣಗೌಡ ಹಾಗೂ ಹೋರಾಟಗಾರರು ಭೇಟಿ ನೀಡಿದ್ದು, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಮುಳಬಾಗಿಲು ತಾಲೂಕು ಕಚೇರಿ ಎದುರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.
ಕೋಲಾರದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಮುನ್ಸೂಚನೆಯನ್ನು ಜಿಲ್ಲಾಡಳಿತ ನೀಡಿದ್ದು, ರೈತರು ಸದ್ಯ ಕೃಷಿ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ. ಆದರೆ ಕಟಾವು ಮಾಡಲಾಗದೆ ಜಮೀನಿನಲ್ಲಿ ಉಳಿದಿರುವ ರಾಗಿ ಬೆಳೆಗಾರರ ನೋವು ಒಂದಾದರೆ, ಇತ್ತ ಮಳೆ ಮುಂದುವರೆದಲ್ಲಿ ಆಲೂಗಡ್ಡೆ, ಟೊಮೆಟೊ ಬೆಳೆಗೆ ರೋಗಗಳು ಬಾದಿಸುವ ಭೀತಿ ಎದುರಾಗಿದೆ. ಒಟ್ಟಿನಲ್ಲಿ ಚಿನ್ನದ ನಾಡಿನಲ್ಲಿ ಅನ್ನದಾತರ ಗೋಳು ಹೇಳತೀರದ್ದಾಗಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂದು ರೈತರು ಮನವಿ ಮಾಡಿದ್ದಾರೆ.
ಇತ್ತ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆಯಿದ್ದು, ದುಪ್ಪಟ್ಟು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ನಿವಾರ್ ಚಂಡಮಾರುತ ಪರಿಣಾಮ ತಟ್ಟುವ ಆತಂಕ ಎದುರಾಗಿದೆ. ಸಾಮಾನ್ಯವಾಗಿ ಹೆಚ್ಚಾಗಿ ಮಳೆಯಾದಲ್ಲಿ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಅಪ್ಪಳಿಸುವ ಭೀತಿಯಿರುತ್ತದೆ. ಟೊಮೆಟೊ ಮತ್ತು ಆಲೂಗಡ್ಡೆ ಬೆಳೆಗೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ, ನಿರಂತರವಾಗಿ ಮಳೆಯಾದರೆ, ಅಂಗಮಾರಿ ರೋಗ ವೇಗವಾಗಿ ಬೆಳೆಯನ್ನ ಆವರಿಸುತ್ತದೆ, ಆಗ ಔಷಧಿಗಳನ್ನು ಸಿಂಪಡಿಸಲಾಗದೆ ರೈತರು ನಷ್ಟದ ಸುಳಿಯಲ್ಲಿ ಸಿಲುಕುವ ಸಾಧ್ಯತೆಯಿದೆ.