ರಾಮನಗರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Union Minister for Road Transport and Highways Nitin Gadkari) ಇಂದು ಕರ್ನಾಟಕಕ್ಕೆ ಭೇಟಿ ನೀಡಿದ್ದು, ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ (Bengaluru-Mysuru Expressway) ಯೋಜನೆಗಳ ವೈಮಾನಿಕ ಪರಿಶೀಲನೆ ನಡೆಸಿದ್ದಾರೆ. 10 ಲೇನ್ನ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಪ್ರಯಾಣದ ಸಮಯವನ್ನು 7 ಗಂಟೆಗಳಿಂದ 3 ಗಂಟೆಗಳವರೆಗೆ ಕಡಿತಗೊಳಿಸಲಿದೆ. ನಾವು 16 ಸಾವಿರದ 730 ಕೋಟಿ ಮೌಲ್ಯದ 262 ಕಿಲೋ ಮೀಟರ್ ಉದ್ದದ 8 ಲೇನ್ ಹೆದ್ದಾರಿಯನ್ನು ನಿರ್ಮಿಸುತ್ತಿದ್ದೇವೆ. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಬೆಂಗಳೂರು ಮತ್ತು ಚೆನ್ನೈ ನಡುವಿನ (Bengaluru – Chennai Expressway) ಅಂತರ 300 ಕಿಲೋಮೀಟರ್ನಿಂದ 262 ಕಿಲೋಮೀಟರ್ಗೆ ಕಡಿಮೆಯಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಹೆಲಿಕಾಪ್ಟರ್ ಮೂಲಕ ಗಡ್ಕರಿ ಹೆದ್ದಾರಿ ಸಮೀಕ್ಷೆ
ಬಸ್ ಮೂಲಕ ಎಕ್ಸ್ಪ್ರೆಸ್ವೇ ಪರಿಶೀಲನೆ ನಡೆಸಿದ ಕೇಂದ್ರ ಸಚಿವರು, ಬೆಂಗಳೂರು-ಮೈಸೂರು ನಡುವೆ ಕೇವಲ ಒಂದು ಗಂಟೆಯಲ್ಲಿ ಪ್ರಯಾಣ ಮಾಡಬಹುದು. ಬಹಳ ಸುಂದರವಾಗಿಯೂ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.
ಸುರಕ್ಷತಾ ನಿಯಮಗಳನ್ನು ಕೂಡ ಸಂಪೂರ್ಣವಾಗಿ ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಲಾಗಿದೆ. ಅಮೃತ ಮಹೋತ್ಸಹ ಗಾರ್ಡನ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಮಳೆ ನೀರನ್ನು ಸಂಗ್ರಹ ಮಾಡಿ ಭೂಮಿಯಲ್ಲಿ ಹಿಂಗುವಂತೆ ಮಾಡಬಹುದು ಎಂದು ತಿಳಿಸಿದರು.
ಬೆಂಗಳೂರು ಮಂದಿಗೂ ಗುಡ್ನ್ಯೂಸ್ ಕೊಟ್ಟ ಗಡ್ಕರಿ
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ವೇಯನ್ನು ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿಗಳು ಉದ್ಘಾಟನೆ ಮಾಡಲಿದ್ದಾರೆ. ಮುಂದಿನ ತಿಂಗಳೇ ರಸ್ತೆ ಉದ್ಘಾಟನೆ ಆಗಲಿದೆ. ದಿನಾಂಕವನ್ನು ಸದ್ಯದಲ್ಲೇ ಹೇಳುತ್ತೇವೆ.
ಇದನ್ನೂ ಓದಿ: Padmashree: 16,000 ಅನಾಥ ಶವಗಳ ಅಂತ್ಯಸಂಸ್ಕಾರ, ಅಯೂಬ್ಗೆ ಪದ್ಮಶ್ರೀ ಕೊಡಿ, ಮೋದಿಗೆ ಪತ್ರ ಬರೆದ ಪ್ರತಾಪ್ ಸಿಂಹ!
ಬೆಂಗಳೂರಿಗೂ ಗುಡ್ನ್ಯೂಸ್ ಕೊಟ್ಟ ಗಡ್ಕರಿ ಅವರು, ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ನೀಡುತ್ತೇವೆ. ಬೆಂಗಳೂರಿನ ಸುತ್ತ ಸ್ಯಾಟಿಲೈಟ್ ರಿಂಗ್ ರಸ್ತೆಯನ್ನು ನಿರ್ಮಾಣ ಮಾಡುತ್ತೇವೆ. ಭಾರತ್ ಮಾಲಾ ಯೋಜನೆಯ ಅಡಿ ರಿಂಗ್ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯ ಆಗಲಿದೆ. ಮುಂಬೈ ರೀತಿಯಲ್ಲಿ ಬೆಂಗಳೂರಿನಲ್ಲೂ ಡಬಲ್ ಡೆಕ್ಕರ್ ಬಸ್ ಓಡಿಸಲಾಗುತ್ತದೆ ಎಂದು ಹೇಳಿದ್ದಾರೆ.
‘ಕನಕಪುರ ರೋಡ್ ಆಗ್ಬೇಕು ಅಲ್ವಾ?’
ದಶಪಥ ಹೆದ್ದಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಸಭೆ ಮಾಡಿ ಗಡ್ಕರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ಕೇಂದ್ರ ಸಚಿವರು ಸರಿಯಾದ ಮಾಹಿತಿ ಪಡೆದಿದ್ದಾರೆ. ಹಳ್ಳಿ ಜನರಿಗೆ ತೊಂದರೆ ಆಗದಂತೆ ಕ್ರಮಕ್ಕೆ ಒತ್ತಾಯಿಸಿದ್ದೇವೆ ಎಂದು ಹೇಳಿದ್ರು.
In this stretch, 52 Km is Greenfield consisting of 5 Bypasses which will reduce traffic blocks in the city and create a hassle-free journey for all commuters. #PragatiKaHighway #GatiShakti #BengaluruMysuruNationalHighway pic.twitter.com/Un5wghaQP7
— Nitin Gadkari (@nitin_gadkari) January 5, 2023
ಅಶ್ವತ್ಥ ನಾರಾಯಣ ಮತ್ತು ಸಂಸದ ಸುರೇಶ್ ನಡುವೆ ಮುನಿಸು ಮುಂದುವರಿದಿದೆ. ಕಳೆದ ಬಾರಿ ರಾಮನಗರದ ವೇದಿಕೆ ಕಾರ್ಯಕ್ರದಲ್ಲೇ ಕಿತ್ತಾಡಿಗೊಂಡಿದ್ದ ನಾಯಕರು, ಇಂದು ದಶಪಥ ರಸ್ತೆ ಕಾಮಗಾರಿ ವೀಕ್ಷಣೆ ವೇಳೆಯೂ ನಾನೊಂದು ತೀರ ನೀನೊಂದು ತೀರಾ ಅನ್ನುವಂತಿದ್ರು.
ಸಚಿವ ಗೋಪಾಲಯ್ಯ, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಜೊತೆ ಕುಶಲೋಪರಿ ವಿಚಾರಿಸಿ ಮಾತನಾಡುತ್ತಿದ್ದ ಸುರೇಶ್, ಅಶ್ವತ್ಥ್ ನಾರಾಯಣ್ ಕಡೆ ತಿರುಗಿಯೋ ನೋಡಿಲ್ಲ. ಇಬ್ಬರೂ ತಮ್ಮಷ್ಟಕ್ಕೆ ತಾವಿದ್ದರು. ಆದರೆ ಇನ್ನೊಂದು ಕಡೆ ರಾಜಕೀಯ ವೈರಿಗಳಾದ ಸಿಪಿ ಯೋಗೇಶ್ವರ್, ಸಂಸದ ಡಿಕೆ ಸುರೇಶ್ ಮಾತುಕತೆ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ