ಅತ್ಯಾಚಾರ ಆರೋಪ ಪ್ರಕರಣ; ನಿತ್ಯಾನಂದ ಸ್ವಾಮಿಗೆ ಹೊಸ ಸಂಕಷ್ಟ

ನಿತ್ಯಾನಂದ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಸಂಬಂಧ ಕಳೆದ ಒಂದುವರೆ ವರ್ಷಗಳಿಂದ ಅವರು ರಾಮನಗರ ಸೆಷನ್ಸ್​​ ಕೋರ್ಟ್​​ಗೆ ಹಾಜರಾಗುತ್ತಿಲ್ಲ. ಈ ಸಂಬಂಧ ಹೈಕೋರ್ಟ್​ ಮಹತ್ವದ ಸೂಚನೆ ನೀಡಿದೆ.

news18-kannada
Updated:February 1, 2020, 8:11 AM IST
ಅತ್ಯಾಚಾರ ಆರೋಪ ಪ್ರಕರಣ; ನಿತ್ಯಾನಂದ ಸ್ವಾಮಿಗೆ ಹೊಸ ಸಂಕಷ್ಟ
ನಿತ್ಯಾನಂದ ಸ್ವಾಮಿ
  • Share this:
ಬೆಂಗಳೂರು (ಫೆ.1): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ನಿರಂತರವಾಗಿ ವಿಚಾರಣೆಗೆ ಗೈರಾಗುತ್ತಿದ್ದು, ಈ ವಿಚಾರವಾಗಿ ಅವರಿಗೆ ನೋಟಿಸ್​ ನೀಡಲು ಕರ್ನಾಟಕ ಹೈಕೋರ್ಟ್ ಸಿಐಡಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ನಿತ್ಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಸಂಬಂಧ ಕಳೆದ ಒಂದೂವರೆ ವರ್ಷಗಳಿಂದ ಅವರು ರಾಮನಗರ ಸೆಷನ್ಸ್​​ ಕೋರ್ಟ್​​ಗೆ ಹಾಜರಾಗುತ್ತಿಲ್ಲ. ನಿತ್ಯಾನಂದ ಕೋರ್ಟ್​​ಗೆ ಹಾಜರಾಗದೆ ಇದ್ದ ಕಾರಣಕ್ಕೆ ನಿತ್ಯಾನಂದನ ಕಾರು ಚಾಲಕನಾಗಿದ್ದ ಲೆನಿನ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

“ನಿತ್ಯಾನಂದಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಆದರೆ ಅವರು ಜಾಮೀನು ಉಲ್ಲಂಘಿಸಿ ಕೋರ್ಟ್​ಗೆ ಹಾಜರಾಗುತ್ತಿಲ್ಲ. ಅವಧಿ ಮುಗಿದ ಪಾಸ್​ಪೋರ್ಟ್​ ಜೊತೆ ಅವರು ದೇಶ ತೊರೆದಿದ್ದಾರೆ. ಅವರ ಜಾಮೀನು ರದ್ದು ಮಾಡಬೇಕು,” ಎಂದು ಲೆನಿನ್​ ಪರ ವಕೀಲರು ಮನವಿ ಮಾಡಿದ್ದರು.

ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾ. ಜಾನ್ ಮೈಕಲ್ ಕುನ್ನಾ ನೇತೃತ್ವದ ಏಕಸದಸ್ಯ ಪೀಠ, ಫೆ.3 ರೊಳಗೆ ನಿತ್ಯಾನಂದಗೆ ನೊಟೀಸ್ ಜಾರಿ ಮಾಡಬೇಕು ಎಂದು ಸಿಐಡಿ ಅಧಿಕಾರಿಗಳಿಗೆ ಸೂಚಿಸಿದೆ. ಜತೆಗೆ ಅದರ ವರದಿಯನ್ನು ಫೆ.3 ರೊಳಗೆ ಕೋರ್ಟ್​ಗೆ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿ ಆಶ್ರಮ ನೆಲಸಮ

ತೀರ್ಪು ಕಾಯ್ದಿರಿಸಿದ ಕೋರ್ಟ್​: ಇನ್ನು ಪ್ರಕರಣ ವರ್ಗಾವಣೆ ವಿಚಾರದಲ್ಲಿ ಕೋರ್ಟ್​ ತೀರ್ಪು ಕಾಯ್ದಿರಿಸಿದೆ. ನಿತ್ಯಾನಂದ ವಿರುದ್ಧ ಅತ್ಯಾಚಾರ ಪ್ರಕರಣವನ್ನು 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನಿಂದ ಬೇರೆಡೆ ವರ್ಗಾವಣೆ ಕೋರಿ ಲೆನಿನ್​ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
First published: February 1, 2020, 8:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading