• Home
  • »
  • News
  • »
  • state
  • »
  • Vokkaliga Community: ಒಕ್ಕಲಿಗರಿಗೂ ಬೇಕು ಮೀಸಲಾತಿ; ಹೋರಾಟದ ಸುಳಿವು ಕೊಟ್ರು ನಿರ್ಮಲಾನಂದನಾಥ ಸ್ವಾಮೀಜಿ!

Vokkaliga Community: ಒಕ್ಕಲಿಗರಿಗೂ ಬೇಕು ಮೀಸಲಾತಿ; ಹೋರಾಟದ ಸುಳಿವು ಕೊಟ್ರು ನಿರ್ಮಲಾನಂದನಾಥ ಸ್ವಾಮೀಜಿ!

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಮಾತನಾಡುವುದು ಬೇಡ ಎಂದು ಸುಮ್ಮನಿದ್ದೆವು. ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ಹೆಚ್ಚಿಸುವುದಾದರೆ, ನಮಗೂ ಶೇ 8 ಪ್ರತಿಶತದಷ್ಟು ಮೀಸಲಾತಿ ಹೆಚ್ಚಿಸಿ. ಕಾನೂನು ಸಮ್ಮತವಾಗಿ ನಮ್ಮ ಬೇಡಿಕೆ ಈಡೇರದಿದ್ದರೆ, ನಮ್ಮ ಕೂಗಿಗೆ ಬೆಲೆ ಕೊಡದಿದ್ದರೆ ಹಂತ ಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಎಚ್ಚರಿಸಿದರು.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ (SC-ST Reservation) ಹೆಚ್ಚಳ ಮಾಡಿದ್ದ ಬಳಿಕ ಒಕ್ಕಲಿಗರಿಗೂ ಮೀಸಲಾತಿ ಬೇಕು ಎನ್ನುವ ಕೂಗು ಕೇಳಿಬರ್ತಿದೆ. ಕೋಲಾರದಲ್ಲಿ ಮಾತಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanath Swamiji ), ಒಕ್ಕಲಿಗರ ಸಮುದಾಯದಕ್ಕೂ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಒಕ್ಕಲಿಗರಿಗೂ (Vokkaliga) ಮೀಸಲಾತಿ (Reservation) ಬೇಕು ಎನ್ನುವ ಮೂಲಕ ನಿರ್ಮಲಾನಂದನಾಥ ಸ್ವಾಮೀಜಿ ಹೋರಾಟದ ಸುಳಿವು ಕೊಟ್ಟಿದ್ದಾರೆ. 1993ರ ನಂತರ ನಮ್ಮ ಸಮುದಾಯ ಯಾವುದೇ ಮೀಸಲಾತಿ ಹೋರಾಟ ದಲ್ಲಿ ಪಾಲ್ಗೊಂಡಿಲ್ಲ. ಅಲ್ಲದೇ ಅಂದಿನಿಂದ ಮೀಸಲಾತಿ ಕೂಗು ನಮ್ಮ‌ ಸಮುದಾಯದಲ್ಲಿ (Community) ಎದ್ದಿಲ್ಲ ಎಂದು ಹೇಳಿದ್ರು.


ಶೇ 12 ಪ್ರತಿಶತದಷ್ಟು ಮೀಸಲಾತಿ ನೀಡಿ


ಒಬಿಸಿಗೆ ಶೇ 35 ರಷ್ಟು ಮೀಸಲಾತಿ ನೀಡಲಾಗಿದ್ದು, ಇದರಲ್ಲಿ ಒಕ್ಕಲಿಗರಿಗೆ ಶೇ 4 ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಈ ಮೀಸಲಾತಿ ಸಾಕಾಗುವುದಿಲ್ಲ, ಶೇ 8 ರಷ್ಟು ಏರಿಸಿ, ಒಟ್ಟು ಶೇ 12 ಪ್ರತಿಶತದಷ್ಟು ಮೀಸಲಾತಿ ನೀಡಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದ್ದಾರೆ.


ನಮ್ಮ ಕೂಗಿಗೆ ಬೆಲೆ  ಕೊಡದಿದ್ರೆ  ಹೋರಾಟದ ಎಚ್ಚರಿಕೆ


ಕೋಲಾರದಲ್ಲಿ ಒಕ್ಕಲಿಗರ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಮಾತನಾಡುವುದು ಬೇಡ ಎಂದು ಸುಮ್ಮನಿದ್ದೆವು. ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ಹೆಚ್ಚಿಸುವುದಾದರೆ, ನಮಗೂ ಶೇ 8 ಪ್ರತಿಶತದಷ್ಟು ಮೀಸಲಾತಿ ಹೆಚ್ಚಿಸಿ. ಕಾನೂನು ಸಮ್ಮತವಾಗಿ ನಮ್ಮ ಬೇಡಿಕೆ ಈಡೇರದಿದ್ದರೆ, ನಮ್ಮ ಕೂಗಿಗೆ ಬೆಲೆ ಕೊಡದಿದ್ದರೆ ಹಂತ ಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.


ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ


SC-ST Reservation: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಿಎಂ ಬೊಮ್ಮಾಯಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಂಪುಟ ಸಭೆಯಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆಸಿ ಮಾಧುಸ್ವಾಮಿ, ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15 ರಿಂದ ಶೇ.17ಕ್ಕೆ ಮತ್ತು ಪರಿಶಿಷ್ಠ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ ಎಂದರು.


ಜನಸಂಖ್ಯೆಗನುಗುಣವಾಗಿ ಮೀಸಲಾತಿ ಜಾರಿ ಮಾಡುತ್ತಿದ್ದೇವೆ. ಬೇರೆ ಸಮುದಾಯದ ಬಗ್ಗೆಯೂ ಚಿಂತನೆ ಮಾಡುತ್ತಿದ್ದೇವೆ. ವೈಜ್ಞಾನಿಕ ಅಧ್ಯಯನ ಮಾಡಿದ ಮೇಲೆ ಬೇರೆ ಸಮುದಾಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಮಾಧುಸ್ವಾಮಿ ಹೇಳಿದರು. ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಸರ್ಕಾರಿ ಆದೇಶದಲ್ಲಿ ಜಾರಿ ಮಾಡಿರೋ ಬಗ್ಗೆ ಸ್ಪಷ್ಟತೆ ಕೊಡುತ್ತೇವೆ. ನ್ಯಾ. ನಾಗಮೋಹನದಾಸ್ ರವರೆ ಸದಾಶಿವ ವರದಿ ಪ್ರಕಾರ ಒಳ ಮೀಸಲಾತಿ ಜಾರಿ ಬಗ್ಗೆ ಹೇಳಿದ್ದಾರೆ. ಹಾಗಾಗಿ ಲಾ ಮಿನಿಸ್ಟರ್ ಅಧ್ಯಕ್ಷತೆಯಲ್ಲಿ ವರದಿ ಕೊಡಲು ಸಂಪುಟದಲ್ಲಿ ಅಧಿಕಾರ ಕೊಡಲಾಗಿದೆ ಎಂದರು.


ಮೀಸಲಾತಿಗಾಗಿ ಹೆಚ್ಚಿದ ಬೇಡಿಕೆ


ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರದ ನಂತರ ವಿವಿಧ ಸಮುದಾಯಗಳಿಂದ ಮೀಸಲಾತಿ ಸಂಬಂಧಿತ ಬೇಡಿಕೆಗಳು ತೀವ್ರಗೊಂಡಿವೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಸಮುದಾಯಗಳು ಈ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದು, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.


ವಿವಿಧ ಸಮುದಾಯಗಳಿಂದ ಮೀಸಲಾತಿ ಸಂಬಂಧಿತ ಬೇಡಿಕೆಗಳಿವೆ. ಪಂಚಮಸಾಲಿ ಲಿಂಗಾಯತರು ಹಿಂದುಳಿದ ವರ್ಗಗಳ ಪ್ರವರ್ಗ 2A ಅಡಿಯಲ್ಲಿ ಬರಲು ಬಯಸುತ್ತಾರೆ ಅವರು ಈಗ ಪ್ರವರ್ಗ 3B ಅಡಿಯಲ್ಲಿದ್ದಾರೆ. ಪ್ರಸ್ತುತ OBC ಗಳಾಗಿರುವ ಕುರುಬರು, ಪರಿಶಿಷ್ಟ ಪಂಗಡದ ಅಡಿಯಲ್ಲಿ ಸೇರಿಸಲು ಒತ್ತಾಯಿಸುತ್ತಿದ್ದಾರೆ. ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗರನ್ನು ಒಬಿಸಿ ಪಟ್ಟಿಗೆ ಸೇರಿಸಲು ಉತ್ಸುಕರಾಗಿದ್ದಾರೆ.

Published by:ಪಾವನ ಎಚ್ ಎಸ್
First published: