ಮಾರ್ಚ್ 20ರ ಬೆಳಗ್ಗೆ 5.30ಕ್ಕೆ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ದೆಹಲಿ ನ್ಯಾಯಾಲಯ ಮತ್ತೊಮ್ಮೆ ಆದೇಶ

ಪವನ್ ಗುಪ್ತಾ ಎಂಬ ಅಪರಾಧಿ ರಾಷ್ಟ್ರಪತಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮಾರ್ಚ್ 1ರ ಸಂಜೆ ಮರಣದಂಡನೆ ಶಿಕ್ಷೆಯನ್ನು ಮುಂದೂಡಿತ್ತು. 

ನಿರ್ಭಯಾ ಅತ್ಯಾಚಾರಿಗಳು.

ನಿರ್ಭಯಾ ಅತ್ಯಾಚಾರಿಗಳು.

 • Share this:
  ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆಪಾದಿತರನ್ನು ಇದೇ ತಿಂಗಳ 20ರಂದು ಮುಂಜಾನೆ 5.30ಕ್ಕೆ ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಮತ್ತೆ ಡೆತ್ ವಾರೆಂಟ್ ಹೊರಡಿಸಿದೆ.

  ಈ ಮೊದಲು ಮಾರ್ಚ್ 2ರಂದು ಆಪಾದಿತರನ್ನು ಗಲ್ಲಿಗೇರಿಸಲು ದಿನಾಂಕ ನಿಗದಿಯಾಗಿತ್ತು. ಆದರೆ, ಅದರ ಹಿಂದಿನ ದಿನ ದೆಹಲಿ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆ ನೀಡಿ ಆದೇಶ ನೀಡಿತ್ತು. ಹೀಗಾಗಿ ಅಪರಾಧಿಗಳನ್ನು ಬಿಗ್ ರಿಲೀಫ್ ಪಡೆದುಕೊಂಡಿದ್ದರು. ಇದೀಗ ಮತ್ತೆ ಅತ್ಯಾಚಾರ ಆರೋಪಿಗಳನ್ನು ಮಾರ್ಚ್ 20ರಂದು ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಹೊಸದಾಗಿ ಡೆತ್ ವಾರಂಟ್ ಜಾರಿ ಮಾಡಿದೆ.

  ಮರಣದಂಡನೆ ಶಿಕ್ಷೆಗೆ ತೆ ನೀಡಬೇಕೆಂದು ಕೋರಿ ನಾಲ್ವರು ಅಪರಾಧಿಗಳು ಪಟಿಯಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿತ್ತು. ಪವನ್​ ಗುಪ್ತಾ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿತ್ತು. ಅಲ್ಲದೇ, ತನಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಗೆ ತಡೆ ನೀಡಬೇಕು ಎಂಬ ಕೋರಿಕೆಯನ್ನೂ ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಮೂಲಕ ಮರಣದಂಡನೆಯಿಂದ ಪಾರಾಗಲು ಅಪರಾಧಿಗಳ ಮುಂದಿದ್ದ ಎಲ್ಲ ಕಾನೂನು ಆಯ್ಕೆಗಳು ಕೊನೆಗೊಂಡಿತ್ತು. ಮಾರ್ಚ್ 2ರಂದು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ನಿಗದಿಯಾಗಿತ್ತು. ಆದರೆ, ಪವನ್ ಗುಪ್ತಾ ಎಂಬ ಅಪರಾಧಿ ರಾಷ್ಟ್ರಪತಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮಾರ್ಚ್ 1ರ ಸಂಜೆ ಮರಣದಂಡನೆ ಶಿಕ್ಷೆಯನ್ನು ಮುಂದೂಡಿತ್ತು.

  ಇದನ್ನು ಓದಿ: ಗಲ್ಲಿಗೇರದ ನಿರ್ಭಯಾ ಅತ್ಯಾಚಾರಿಗಳು; ಒಬ್ಬನ ಕ್ಷಮಾದಾನ ಅರ್ಜಿಯಿಂದ ಮುಂದೂಡಿಕೆಯಾದ ಮರಣದಂಡನೆ ಶಿಕ್ಷೆ
  First published: