HOME » NEWS » State » NINE THIEVES ARRESTED BY POLICE AT RAICHUR LG

9 ಮಂದಿ ಕುಖ್ಯಾತ ಕಳ್ಳರ ಬಂಧನ; ಕಳ್ಳತನಕ್ಕಾಗಿಯೇ ಸ್ಕಾರ್ಪಿಯೋ ಕಾರು ಖರೀದಿಸಿದ್ದ ಖದೀಮರು

ಸದ್ಯ ಬಂಧಿತರಿಂದ 4.30 ಲಕ್ಷ ರೂಪಾಯಿ ಮೌಲ್ಯದ 7 ಕೆ.ಜಿ 10 ಗ್ರಾ ಬೆಳ್ಳಿ, 16,27 ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚಿನ್ನ ವಶಕ್ಕೆ , 5 ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೋ, 40 ಸಾವಿರ ರೂಪಾಯಿ ಮೌಲ್ಯದ ಬೈಕ್, 1.15 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

news18-kannada
Updated:November 18, 2020, 11:19 AM IST
9 ಮಂದಿ ಕುಖ್ಯಾತ ಕಳ್ಳರ ಬಂಧನ; ಕಳ್ಳತನಕ್ಕಾಗಿಯೇ ಸ್ಕಾರ್ಪಿಯೋ ಕಾರು ಖರೀದಿಸಿದ್ದ ಖದೀಮರು
ಸದ್ಯ ಬಂಧಿತರಿಂದ 4.30 ಲಕ್ಷ ರೂಪಾಯಿ ಮೌಲ್ಯದ 7 ಕೆ.ಜಿ 10 ಗ್ರಾ ಬೆಳ್ಳಿ, 16,27 ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚಿನ್ನ ವಶಕ್ಕೆ , 5 ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೋ, 40 ಸಾವಿರ ರೂಪಾಯಿ ಮೌಲ್ಯದ ಬೈಕ್, 1.15 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
  • Share this:
ರಾಯಚೂರು(ನ.18): ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿದ್ದರೂ ಮತ್ತೆ ಕಳ್ಳತನ ಮಾಡುತ್ತಿದ್ದ ತಂಡವನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ. ಲಿಂಗಸಗೂರು ಪೊಲೀಸ್ ಉಪವಿಭಾಗ ವ್ಯಾಪ್ತಿಯ ಲಿಂಗಸಗೂರು, ಹಟ್ಟಿ, ಮುದಗಲ್, ದೇವದುರ್ಗಾ, ಜಾಲಹಳ್ಳಿ ಸೇರಿದಂತೆ ಒಟ್ಟು 21 ಪ್ರಕರಣಗಳಲ್ಲಿ ಭಾಗಿಯಾಗಿದ್ದ 9 ಜನ ಕಳ್ಳರನ್ನು ಲಿಂಗಸಗೂರು ಉಪವಿಭಾಗದ ಪೊಲೀಸರ ತಂಡವು ಬಂಧಿಸಿದೆ. ಆರೋಪಿಗಳನ್ನು ಸೆರೆ ಹಿಡಿಯಲು ಕಳೆದ ಒಂದು ತಿಂಗಳಿನಿಂದ ಕಾರ್ಯಾಚರಣೆ ಮಾಡಲಾಗಿತ್ತು. ಕೊನೆಯದಾಗಿ ಮಂಗಳವಾರ  ಪೊಲೀಸರು ಕಳ್ಳರನ್ನು ಸೆರೆ ಹಿಡಿದಿದ್ದಾರೆ.  9 ಜನರ ತಂಡವು ರಾಯಚೂರು ಜಿಲ್ಲೆಯ ದೇವದುರ್ಗಾ ತಾಲೂಕಿನ ಮುಂಡರಗಿ ದೇವಸ್ಥಾನ ಸೇರಿದಂತೆ ಹಲವು ಕಡೆ ಕಳ್ಳತನ ಮಾಡಿದ್ದರು.

ಇದೇ ತಂಡವು , ಕುರಿ, ಚಿನ್ನ, ಬೆಳ್ಳಿ ಕಳ್ಳತನ‌ ಮಾಡಿದ್ದು ಕಳ್ಳತನಕ್ಕಾಗಿಯೇ ಸ್ಕಾರ್ಪಿಯೋ ಹಾಗೂ ಬೈಕ್ ಖರೀದಿಸಿದ್ದರು ಎಂದು ತಿಳಿದು ಬಂದಿದೆ. ಕಳ್ಳತನ ಮಾಡಿದ ಕುರಿಗಳನ್ನು ಸ್ಕಾರ್ಪಿಯೋ ಕಾರಿಗೆ ಹಾಕಿಕೊಂಡು ಹೋಗಿ ಮಾರಾಟ ಮಾಡಿದ್ದಾರೆ. ಇಲ್ಲಿಯವರೆಗೂ 1.53  ಲಕ್ಷ ರೂಪಾಯಿ ಮೌಲ್ಯದ 35 ಕುರಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊರಾಟೋರಿಯಂನಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್; ಡಿ. 16ರವರೆಗೆ ಹಣ ಹಿಂಪಡೆಯುವ ಮಿತಿ 25 ಸಾವಿರ

ರಾಯಚೂರು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಅಲ್ಲಲ್ಲಿ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿದ್ದವು. ಈ ಹಿನ್ನಲೆಯಲ್ಲಿ ಕಳ್ಳರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು, ಈ ತಂಡವು ಮಂಗಳವಾರ ತಿಂಥಣಿ ಸೇತುವೆ ಬಳಿಯಲ್ಲಿದ್ದ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬಂಗಾರ ಹಾಗೂ ಬೆಳ್ಳಿಯನ್ನು ಕಳ್ಳತನ ಮಾಡಿ, ಅದನ್ನು ಅಕ್ಕಸಾಲಿಗರು ಕರಗಿಸುವಂತೆ ಕುಲುಮೆಯಲ್ಲಿ ಕರಗಿಸಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಬಂಧಿತ ಆರೋಪಿಗಳನ್ನು ಯಾದಗಿರಿ ಮೂಲದ ಪ್ರಭು, ಅರ್ಜುನ, ಹೇಮ, ಹುಸೇನ್ ಭಾಷಾ, ಮಾನಪ್ಪ, ಗೋಕುಲ್ ಸಾಬ್ ದಾದಾಪೀರ್ ದಾವಲ್ ಸಾಬ್, ಖಲಂದರ್ ಎಂದು ಗುರುತಿಸಲಾಗಿದೆ. ಈ 9 ಜನರು ಸುಮಾರು ಆರು ಬಾರಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಸದ್ಯ ಬಂಧಿತರಿಂದ 4.30 ಲಕ್ಷ ರೂಪಾಯಿ ಮೌಲ್ಯದ 7 ಕೆ.ಜಿ 10 ಗ್ರಾ ಬೆಳ್ಳಿ, 16,27 ಲಕ್ಷ ರೂಪಾಯಿ ಮೌಲ್ಯದ 250 ಗ್ರಾಂ ಚಿನ್ನ ವಶಕ್ಕೆ , 5 ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೋ, 40 ಸಾವಿರ ರೂಪಾಯಿ ಮೌಲ್ಯದ ಬೈಕ್, 1.15 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಳ್ಳರನ್ನು ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರ ತಂಡ ಈಗ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಬಂಧಿತರ ಇತರ ಕೃತ್ಯಗಳ ಬಗ್ಗೆಯೂ ವಿಚಾರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
Published by: Latha CG
First published: November 18, 2020, 11:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading