• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • KPTCL ಕಿರಿಯ ಸಹಾಯಕ ಪರೀಕ್ಷೆ ಗೋಲ್ಮಾಲ್: 9 ಜನ ಅರೆಸ್ಟ್, ತೋಟದ ಮನೆಯಲ್ಲಿ ನಡೆದಿತ್ತು ಪ್ಲ್ಯಾನ್

KPTCL ಕಿರಿಯ ಸಹಾಯಕ ಪರೀಕ್ಷೆ ಗೋಲ್ಮಾಲ್: 9 ಜನ ಅರೆಸ್ಟ್, ತೋಟದ ಮನೆಯಲ್ಲಿ ನಡೆದಿತ್ತು ಪ್ಲ್ಯಾನ್

ಕೆಪಿಟಿಸಿಎಲ್ ಸ್ಕ್ಯಾಮ್

ಕೆಪಿಟಿಸಿಎಲ್ ಸ್ಕ್ಯಾಮ್

ಈ ತೋಟದ ಮನೆಯಲ್ಲಿ ಕುಳಿತು ಹಲವು ಜನ ಸೇರಿಕೊಂಡು ಪರೀಕ್ಷೆಯ ಉತ್ತರವನ್ನು ಹಲವು ಅಭ್ಯರ್ಥಿಗಳಿಗೆ ನೀಡಿರುತ್ತಾರೆ. ಕೃತ್ಯಕ್ಕೆ ಸಹಕಾರ ಮಾಡಿದ ಆರೋಪದಡಿ ತೋಟದ ಮನೆಯ ಮಾಲೀಕ ಬಸವಣ್ಣಿ ದೊಡ್ಡವಾಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

  • Share this:

ಬೆಳಗಾವಿ: ರಾಜ್ಯದಲ್ಲಿ ಪಿಎಸ್​ಐ ಪರೀಕ್ಷೆ ಗೋಲ್​​ಮಾಲ್ (PSI Exams Scam) ಪ್ರಕರಣ ತನಿಖೆ ಹಂತದಲ್ಲಿ ಇರುವಾಗಲೇ ಮತ್ತೊಂದು ಅಕ್ರಮ ಬಯಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ನಡೆದಿರೋ ಪರೀಕ್ಷಾ ಅಕ್ರಮಕ್ಕೆ ಗದಗ (Gadag), ಉತ್ತರ ಕನ್ನಡ (Uttara Kannada) ಜಿಲ್ಲೆಗಳ ನಂಟು ಇರೋದು ತನಿಖೆಯಿಂದ ಬೆಳಕಿಗೆ ಬಂದಿದೆ. ಆಗಸ್ಟ್ 7ರಂದು ರಾಜ್ಯದಲ್ಲಿ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ಪರೀಕ್ಷೆಯನ್ನು (KPTCL Recruitment) ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ (Gokak, Belagavi) ಅಭ್ಯರ್ಥಿ ಓರ್ವ ಸ್ಮಾರ್ಟ್ ವಾಚ್ (Smartwatch) ಮೂಲಕ ಫೋಟೋ ತೆಗೆದಿರೋದು ಬೆಳಕಿಗೆ ಬಂದಿತ್ತು. ಬಳಿಕ ಪ್ರಕರಣ ಬೆನ್ನತ್ತಿದ್ದ ಬೆಳಗಾವಿ ಪೊಲೀಸರಿಗೆ (Belagavi Police) ಅನೇಕ ಮಹತ್ವದ ವಿಚಾರಗಳು ಕಂಡು ಬಂದಿವೆ. ಜತೆಗೆ ಪ್ರಕರಣ ಸಂಬಂಧ ಈಗಾಗಲೇ 9 ಜನರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಅನೇಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.


ಗೋಕಾಕ್ ನಗರದ ಜಿಎಸ್​ಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸಿದ್ದಪ್ಪ ಮದಿಹಳ್ಳಿ ಎನ್ನುವ ಯುವಕ ಸ್ಮಾರ್ಟ್ ವಾಚ್ ಬಳಸಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದಿದ್ದನು. ಬಳಿಕ ಟೆಲಿಗ್ರಾಂ ಆ್ಯಪ್ ಮೂಲಕ ಫೋಟೋಗಳನ್ನು ಆರೋಪಿಗಳಿಗೆ ಕಳುಹಿಸಿದ್ದನು.


Nine Arrested In KPTCL Exam Scam csb mrq
ಪರೀಕ್ಷಾ ಅಕ್ರಮಕ್ಕೆ ಬಳಸಿದ ಉತ್ಪನ್ನ


ಇದನ್ನೂ ಓದಿ;  Dinesh Gundurao: ಮಾಂಸಾಹಾರಿಗಳ ವೋಟ್ ಬೇಡ ಅನ್ನೋ ತಾಕತ್ತು ಬಿಜೆಪಿಗಿದೆಯೇ? ದಿನೇಶ್ ಗುಂಡೂರಾವ್ ಪ್ರಶ್ನೆ


ಮೊದಲಿಗೆ ಗೋಕಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು


ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದನ್ನು ಗಮಿಸಿದ ಸಿಬ್ಬಂದಿ ಗೋಕಾಕ್ ಶಹರ್ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಪ್ರಕರಣದ ಗಂಭೀರತೆ ಅರಿತ ಬೆಳಗಾವಿ ಎಸ್​ಪಿ ಡಾ. ಸಂಜೀವ್ ಪಾಟೀಲ್ ಪ್ರಕರಣ ತನಿಖೆಗೆ ವಿಶೇಷ ತಂಡದ ರಚನೆಯನ್ನು ಮಾಡುತ್ತಾರೆ.  ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಸುನೀಲ್ ಬಂಗಿ ಎನ್ನುವ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸುತ್ತಾರೆ.


Nine Arrested In KPTCL Exam Scam csb mrq
ಪರೀಕ್ಷಾ ಅಕ್ರಮಕ್ಕೆ ಬಳಸಿದ ಉತ್ಪನ್ನ


ತೋಟದ ಮನೆ ಮೇಲೆ ದಾಳಿ


ಆರೋಪಿಯು ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಉತ್ತರ ಪಡೆದು ಬರೆಯಲಾಗಿದೆ ಎನ್ನುವ ಸತ್ಯವನ್ನು ಹೇಳುತ್ತಾನೆ. ಆರೋಪಿಯ ಮಾಹಿತಿಯನ್ನು ಆಧರಿಸಿ ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ ಕೆ ಗ್ರಾಮದ ತೋಟದ ಮನೆಯ ಮೇಲೆ ದಾಳಿ ಮಾಡಿದಾಗ ಪ್ರಿಂಟರ್ ಸೇರಿ ಇತರೆ ವಸ್ತುಗಳು ಪತ್ತೆಯಾಗುತ್ತವೆ.


ಗೋಕಾಕ್ ಟು ಗದಗ್ ಲಿಂಕ್


ಶಿರಹಟ್ಟಿ ಬಿ ಕೆ ಗ್ರಾಮದಲ್ಲಿ ವಶಕ್ಕೆ ಪಡೆಸಿಕೊಂಡ ಪ್ರಶ್ನೆ ಪತ್ರಿಕೆಯ ಮೇಲೆ ಇರೋ ನಂಬರ್ ಪರಿಶೀಲನೆ ಮಾಡಿದಾಗ ಅದು ಗದಗ ಜಿಲ್ಲೆಯ ನಗರಸಭೆ ಕಾಲೇಜಿನಲ್ಲಿ ಹಂಚಿಕೆಯಾಗಿದ್ದ ಪ್ರಶ್ನೆ ಪತ್ರಿಕೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಗುತ್ತದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಪ್ರಕರಣ ಸಂಬಂಧ ಪ್ರಾಚಾರ್ಯ ಮಾರುತಿ ಸೋನಾವಲೆ, ಆತನ ಪುತ್ರ ಸಮೀತ್ ಕುಮಾರ್ ಪಾತ್ರ ಇರೋದು ಕಂಡು ಬಂದಿದ್ದು ಇಬ್ಬರನ್ನು ಬಂಧಿಸಲಾಗಿದೆ.


Nine Arrested In KPTCL Exam Scam csb mrq
ಪರೀಕ್ಷಾ ಅಕ್ರಮಕ್ಕೆ ಬಳಸಿದ ಉತ್ಪನ್ನ


ಇದನ್ನೂ ಓದಿ:  Bengaluru: ಶಿವಾನಂದ ಸರ್ಕಲ್​​ನಲ್ಲಿರುವ ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ BBMP ಎಡವಟ್ಟು; ಸಾರ್ವಜನಿಕರ ಆರೋಪಗಳೇನು?


ಒಬ್ಬ ಅಭ್ಯರ್ಥಿಯಿಂದ 3-5 ಲಕ್ಷ


ಪ್ರಕರಣ ಬೆನ್ನತ್ತಿರೋ ಬೆಳಗಾವಿ ಎಸ್​ಪಿ ಡಾ. ಸಂಜೀವ್ ಪಾಟೀಲ್ ನೇತೃತ್ವದ ತಂಡ ಅನೇಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು. ಓರ್ವ ಅಭ್ಯರ್ಥಿಯಿಂದ 3-5 ಲಕ್ಷ ಹಣ ಫಿಕ್ಸ್ ಮಾಡಿದ್ದರು ಎನ್ನುವ ಮಾಹಿತಿ ಇದೆ.


Nine Arrested In KPTCL Exam Scam csb mrq
ಪರೀಕ್ಷಾ ಅಕ್ರಮಕ್ಕೆ ಬಳಸಿದ ಉತ್ಪನ್ನ


ಇನ್ನೂ ಪ್ರಕರಣ ಸಂಬಂಧ ಎಲ್ಲಾ ಮಾಹಿತಿಯನ್ನು ಪರೀಕ್ಷಾ ಪ್ರಾಧಿಕಾರಕ್ಕೆ ಅಧಿಕಾರಿಗಳು ನೀಡುತ್ತಿದ್ದಾರೆ. ಇನ್ನು ಬ್ಲೂ ಟೂತ್ ಡಿವೈಸ್ ಅನ್ನು ಆರೋಪಿಗಳ ಬಾಯಿಯಲ್ಲಿ ಇಟ್ಕೊಂಡು ಪರೀಕ್ಷಾ ಕೇಂದ್ರ ಪ್ರವೇಶ ಮಾಡಿದ್ದರು ಎನ್ನಲಾಗಿದೆ.

top videos
    First published: