ನಿಖಿಲ್​ ಗೆದ್ದೇ ಗೆಲ್ಲುತ್ತಾರೆ, ಬೇಕಿದ್ದರೆ ಬೆಟ್ಟಿಂಗ್​ ಕಟ್ಟುತ್ತೇನೆ ಎಂದು ಸವಾಲು ಹಾಕಿದ ಶಾಸಕ ನಾರಾಯಣಗೌಡ

ಮಂಡ್ಯದಲ್ಲಿ ಸ್ಟಾರ್​ಗಳು ಬಂದು ಗಾಳಿಪಟ ಹವಾ ಬಿಟ್ಟು ಹೋದರು. ಭಾಷಣ ಬಿಗಿದು ಹೋದರು. ಈಗ ಎಲ್ಲಿ ಹೋಗಿದ್ದಾರೆ?

ಬಿಜೆಪಿ ಶಾಸಕ ನಾರಾಯಣಗೌಡ

ಬಿಜೆಪಿ ಶಾಸಕ ನಾರಾಯಣಗೌಡ

  • News18
  • Last Updated :
  • Share this:
ಮಂಡ್ಯ,(ಮೇ 11): ಮಂಡ್ಯ ಲೋಕಸಭಾ ಚುನಾವಣೆ ಮುಗಿದರೂ ಅಲ್ಲಿನ ಕಾವು ಇನ್ನೂ ಸಹ ಆರಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಮತ್ತು ನಿಖಿಲ್​ ಬೆಂಬಲಿಗರ ನಡುವೆ ಪರಸ್ಪರ ಟೀಕೆ, ವಾಗ್ದಾಳಿಗಳು ನಡೆಯುತ್ತಲೇ ಇವೆ. ಇಂದು ಕೆ.ಆರ್​. ಪೇಟೆಯಲ್ಲಿ ಶಾಸಕ ನಾರಾಯಣಗೌಡ ಸುಮಲತಾ ಪರ ಬೆಂಬಲಕ್ಕೆ ನಿಂತಿದ್ದ ಸ್ಟಾರ್​ ನಟರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಸ್ಯಾಂಡಲ್​ವುಡ್​​ ನಟರಾದ ದರ್ಶನ್​​ ಹಾಗೂ ಯಶ್​ ಬೆಂಬಲಕ್ಕೆ ನಿಂತಿದ್ದರು. ಜೊತೆಗೆ ಇಬ್ಬರೂ ಸಹ ಮಂಡ್ಯ ಜಿಲ್ಲೆಯಾದ್ಯಂತ ಸುಮಲತಾ ಪರ ಪ್ರಚಾರ ನಡೆಸಿದ್ದರು. ಪ್ರಚಾರ ಸಂದರ್ಭದಲ್ಲಿಯೂ ಕೂಡ ನಟರು ಹಾಗೂ ಜೆಡಿಎಸ್​​ ನಾಯಕರ ನಡುವೆ ಪರಸ್ಪರ ವಾಗ್ದಾಳಿಗಳು ನಡೆದಿದ್ದವು. ಜೋಡೆತ್ತು ಪ್ರಸ್ತಾಪ ಜೋರಾಗಿಯೇ ನಡೆದಿತ್ತು. ದರ್ಶನ್​ ಹಾಗೂ ಯಶ್​ ವಿರುದ್ಧ ಈ ಹಿಂದೆ ವಾಗ್ದಾಳಿ ನಡೆಸಿದ್ದ ಜೆಡಿಎಸ್​ ಶಾಸಕ ನಾರಾಯಣಗೌಡ ಈಗ ಮತ್ತೆ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ V/S ನಿಖಿಲ್​​​: ಹಣ, ಹಸು, ಎಮ್ಮೆ, ಆಡು, ಕುರಿ, ಕೋಳಿ ಪಣಕ್ಕಿಟ್ಟು ಬೆಟ್ಟಿಂಗ್​​ಗೆ ಮುಂದಾದ ಜನ

'ಮಂಡ್ಯದಲ್ಲಿ ಸ್ಟಾರ್​ಗಳು ಬಂದು ಗಾಳಿಪಟ ಹವಾ ಬಿಟ್ಟು ಹೋದರು. ಭಾಷಣ ಬಿಗಿದು ಹೋದರು. ಈಗ ಎಲ್ಲಿ ಹೋಗಿದ್ದಾರೆ? ರೈತರ ಕಷ್ಟಗಳಿಗೆ ನಾವೇ ಆಗಬೇಕು. ಯಾರಿಗಾದರೂ ಒಂದು ಬೋರ್​ವೆಲ್ ತೆಗೆಸಿಕೊಟ್ಟರಾ? ಒಬ್ಬ ರೈತನಿಗೆ ಉಳುಮೆಗಾಗಿ ದನಗಳನ್ನು ಕೊಡಿಸಿದ್ದಾರಾ? ಈಗ ಜನ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ' ಎಂದು ತೀವ್ರ ಟೀಕೆ ಮಾಡಿದ್ದಾರೆ.

ಇನ್ನೂ ನಿಖಿಲ್​ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ನಿಖಿಲ್​ ಚುನಾವಣೆಯಲ್ಲಿ ಗೆದ್ದಾಗಿದೆ. ಈ ಬಗೆಗೆ ಯಾರೂ ಬೇಕಾದರೂ ಬೆಟ್ಟಿಂಗ್​ ಕಟ್ಟಬಹುದು ಎಂದು ನಾರಾಯಣಗೌಡ ಸವಾಲು ಹಾಕಿದ್ದಾರೆ. ಬೆಟ್ಟಿಂಗ್​ ಅಂದರೆ ಕೋಟ್ಯಂತರ ರೂ. ಲಕ್ಷಾಂತರ ರೂ.ಕಟ್ಟುವುದಲ್ಲ. ಒಂದು ರೂ ಕಟ್ಟಿದರೂ ಆಯ್ತು. ನೂರಾ ಒಂದು ರೂ. ಕಟ್ಟಿದರೂ ಆಯ್ತು. ನಿಖಿಲ್​ ಎಷ್ಟು ಲೀಡ್​​ನಲ್ಲಿ ಗೆಲ್ಲುತ್ತಾರೆ ಎಂದು ಹೇಳಲ್ಲ. ಆದರೆ ಗೆದ್ದೇ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್​ ಕಟ್ಟುತ್ತೇನೆ ಎಂದು ಹೇಳಿದರು.

ಕೆಲವು ಕಡೆ ಸುಮಲತಾಗೆ ಲೀಡ್​ ಎನ್ನುವುದು ಭ್ರಮೆ. ಯಾಕೆಂದರೆ ಎಲ್ಲಾ ಕಡೆ ಜನ ಜೆಡಿಎಸ್​​ ಶಾಸಕರನ್ನು ಗೆಲ್ಲಿಸಿದ್ದಾರೆ. ಎಲ್ಲಾ ಶಾಸಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

First published: