ರಾಮನಗರದ ಜಾನಪದ ಲೋಕದ ಬಳಿ ನಿಖಿಲ್ ಮದುವೆ ಫಿಕ್ಸ್ - ಎಚ್​ಡಿಕೆ ಅಭಿಮಾನಿಯಿಂದ ವಿಶೇಷ ಕೋರಿಕೆ

ರಾಮನಗರ - ಚನ್ನಪಟ್ಟಣ ಮಧ್ಯೆ ಜಾನಪದಲೋಕದ ಪಕ್ಕದ ಜಾಗದಲ್ಲಿ ಏಪ್ರಿಲ್ 17 ಕ್ಕೆ ನಿಖಿಲ್ ಮದುವೆ ಸಮಾರಂಭ ಫಿಕ್ಸ್ ಆಗಿದೆ. ಹೆಚ್ಡಿಕೆ ಅಭಿಮಾನಿಯ ಕೋರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

news18-kannada
Updated:March 13, 2020, 10:17 AM IST
ರಾಮನಗರದ ಜಾನಪದ ಲೋಕದ ಬಳಿ ನಿಖಿಲ್ ಮದುವೆ ಫಿಕ್ಸ್ - ಎಚ್​ಡಿಕೆ ಅಭಿಮಾನಿಯಿಂದ ವಿಶೇಷ ಕೋರಿಕೆ
ಕುಮಾರಸ್ವಾಮಿ ಅಭಿಮಾನಿ
  • Share this:
ರಾಮನಗರ(ಮಾ.13) : ರಾಮನಗರ - ಚನ್ನಪಟ್ಟಣ ಮಧ್ಯೆ ನಿಖಿಲ್ ಕುಮಾರಸ್ವಾಮಿ ಮದುವೆ ನಿಗದಿ ಆಗಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿಮಾನಿಯೊಬ್ಬ ವಿಶೇಷ ಕೋರಿಕೆಯೊಂದನ್ನು ಸಲ್ಲಿಸಿದ್ದಾನೆ.

ಹೆಚ್ಡಿಕೆ ಸ್ವಕ್ಷೇತ್ರ ಚನ್ನಪಟ್ಟಣ ತಾಲೂಕಿನಲ್ಲಿ ಬಿಗ್ ಫ್ಯಾನ್ ಆಗಿರುವ ಸುಳ್ಳೇರಿ ಗ್ರಾಮದ ಮಲ್ಲೇಶ್ ಎಂಬಾತನಿಂದ ಕುಮಾರಸ್ವಾಮಿಗೆ ವಿಶೇಷ ಕೊರಿಕೆಯೊಂದು ಬಂದಿದೆ. ವೃತ್ತಿಯಲ್ಲಿ ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಆಗಿರುವ ಮಲ್ಲೇಶ್ ಹೆಚ್ಡಿಕೆ ಕುರಿತು ‘ಅಣ್ಣಾ ಮದುವೆ ರಾಮನಗರ - ಚನ್ನಪಟ್ಟಣ ಮಧ್ಯೆ ನಡೆಯುತ್ತಿದೆ. ಬೀಗರ ಊಟ ಎಲ್ಲಿ ಅಂತಾ ಹೇಳಣ್ಣ' ಎಂದು ಪ್ರಶ್ನೆ ಮಾಡಿದ್ದಾನೆ.

ಮೊದಲೇ ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಯ ಜನ ಬಾಡೂಟ ಸವಿವುದರಲ್ಲಿ ಎತ್ತಿದಕೈ ಕಣಣ್ಣ. ಹಾಸನದಲ್ಲಿ ಫಿಕ್ಸ್ ಮಾಡಬೇಡ ಅಣ್ಣಾ, ದೂರ ಆಗುತ್ತದೆ. ಹೇಗಿದ್ದರೂ ಮುಂದೆ ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಚನ್ನಪಟ್ಟಣದಲ್ಲಿ 5 ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪಗಳಿಗೆ. ಪಕ್ಷದಿಂದ ಅಭ್ಯರ್ಥಿಗಳು ಆಗುವವರಿಗೆ ಒಂದು ಮಾತು ಹೇಳಣ್ಣ. ಒಂದು ಬಾಡೂಟ ಹಾಕಿಸುವುದಕ್ಕೆ, ನಿಮಗೂ ಅನುಕೂಲವಾಗುತ್ತದೆ. ನೀವು ಒಂದು ರೌಂಡ್ ಬಂದು ಹೋಗಬಹುದು.

ಇದನ್ನೂ ಓದಿ : ಕೊರೋನಾ ಭೀತಿ; ಸ್ಥಗಿತಗೊಂಡ ನಿಖಿಲ್ ಕುಮಾರಸ್ವಾಮಿ​ ಮದುವೆ ಕಾರ್ಯ?

ಇನ್ನುಈಗ ಚಿಕನ್ ದರ ಬೇರೆ ಪಾತಾಳಕ್ಕೆ ಬಿದ್ದಿದೆ. ನೀವು ಸಂಸದರಾಗಿದ್ದಾಗ ನನ್ನ ತಂಗಿ ಮದುವೆಗೆ ಬಂದಿದ್ರಿ ನನ್ನ ತಂಗಿಗೆ 100 ರೂ ಭಾವನಿಗೆ 100 ರೂಪಾಯಿ ಮುಯಿ ಹಾಕಿದ್ದೀರಿ. ನಾನು ನಿಖಿಲ್ ಅಣ್ಣನ ಮದುವೆಗೆ ಬಂದು 100 ರೂಪಾಯಿ ಮುಯಿ ಹಾಕಿ ನಿಮ್ಮ ಋಣ ತೀರಿಸಬಾರದ, ನೋಡಣ್ಣ ಯೋಚನೆ ಮಾಡಣ್ಣ, ಮರಿಬೇಡ ಕಣಣ್ಣ ಎಂದು ನಿಖಿಲ್ ಮದುವೆಯ ಬೀಗರ ಊಟದ ಬಗ್ಗೆ ವಿಶೇಷ ಕೋರಿಕೆಯನ್ನು ಹೆಚ್ಡಿಕೆ ಅಭಿಮಾನಿ ಸಲ್ಲಿಸಿದ್ದಾನೆ.

ರಾಮನಗರ - ಚನ್ನಪಟ್ಟಣ ಮಧ್ಯೆ ಜಾನಪದಲೋಕದ ಪಕ್ಕದ ಜಾಗದಲ್ಲಿ ಏಪ್ರಿಲ್ 17 ಕ್ಕೆ ನಿಖಿಲ್ ಮದುವೆ ಸಮಾರಂಭ ಫಿಕ್ಸ್ ಆಗಿದೆ. ಹೆಚ್ಡಿಕೆ ಅಭಿಮಾನಿಯ ಕೋರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

(ವರದಿ: ಎ.ಟಿ. ವೆಂಕಟೇಶ್​​)
First published: March 13, 2020, 7:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading