news18-kannada Updated:December 16, 2020, 2:55 PM IST
ಹೆಚ್ಡಿ ಕುಮಾರಸ್ವಾಮಿ
ಬೆಂಗಳೂರು (ಡಿ. 16): ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ಗಣ್ಯರು, ಅಭಿಮಾನಿಗಳು ಅವರಿಗೆ ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಹುಟ್ಟುಹಬ್ಬದ ಸಂದೇಶಗಳ ಟ್ರೆಂಡ್ ಸೃಷ್ಟಿಸಿದೆ. ಅದರಲ್ಲಿಯೂ ಕುಮಾರಸ್ವಾಮಿ ಮಗ ನಿಖಿಲ್ ಗೌಡ ಹಾಗೂ ಪ್ರಜ್ವಲ್ ರೇವಣ್ಣ ಭಾವಾನ್ಮಾತಕವಾಗಿ ಹುಟ್ಟುಹಬ್ಬಕ್ಕೆ ಶುಭಕೋರಿರುವುದು ಎಲ್ಲರ ಗಮನಸೆಳೆದಿದೆ. ಇನ್ನು ಈ ಬಾರಿ ಕೊರೋನಾ ಹಿನ್ನಲೆ ಕುಮಾರಸ್ವಾಮಿ ಹುಟ್ಟು ಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ. ಅಲ್ಲದೇ, ಈ ಸಂದರ್ಭದಲ್ಲಿ ನಾನು ಬೆಂಗಳೂರಿನಲ್ಲಿರದ ಕಾರಣ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನೀವಿರುವಲ್ಲಿಂದಲೇ ನನ್ನನ್ನು ಹಾರೈಸಿ. ನಿಮ್ಮ ಪ್ರೀತಿ ಅಭಿಮಾನ ದೊಡ್ಡದು ಎಂದು ಎರಡು ದಿನದ ಹಿಂದೆಯೇ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ತಂದೆಗೆ ಈ ಬಾರಿ ವಿಶೇಷವಾಗಿ ಶುಭ ಕೋರಿದ್ದಾರೆ. ರಾಜ್ಯದ ಅಭಿವೃದ್ಧಿ, ರೈತರ ಕಲ್ಯಾಣ, ಜನ ಸಾಮಾನ್ಯರಿಗೆ ಮಿಡಿಯುವ ಸಹೃದಯಿ ರಾಜಕಾರಣಿ ಎಂದು ತಂದೆಯನ್ನು ಬಣ್ಣಿಸಿದ್ದಾರೆ.
ಪ್ರಜ್ವಲ್ ರೇವಣ್ಣ, ಕುಮಾರಸ್ವಾಮಿಯ ಜನಪ್ರಿಯ ಯೋಜನೆಗಳನ್ನು ಉಲ್ಲೇಖಿಸಿ ಶುಭಕೋರಿದ್ದಾರೆ. ಅಲ್ಲದೇ ನಿಮಗೆ ದೇವರು ಇನ್ನಷ್ಟು ಆರೋಗ್ಯ ನೀಡಿ ನಾಡಿನ ಜನರ ಸೇವೆ ಮಾಡುವಂತೆ ಆಗಲಿ ಎಂದು ಆಶಿಸಿದ್ದಾರೆ.
ಇನ್ನು ಕುಮಾರಸ್ವಾಮಿ ಅಣ್ಣ ರೇವಣ್ಣ, ತಮ್ಮನಿಗೆ ಹುಟ್ಟು ಹಬ್ಬದ ಶುಭಾಶಯ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜ್ಯದ ಬಹುತೇಕ ಬಿಜೆಪಿ, ಜೆಡಿಎಸ್ ನಾಯಕರು ಕುಮಾರಸ್ವಾಮಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.
Published by:
Seema R
First published:
December 16, 2020, 2:51 PM IST