ಕೊರೋನಾ ಭೀತಿ; ಸ್ಥಗಿತಗೊಂಡ ನಿಖಿಲ್ ಕುಮಾರಸ್ವಾಮಿ​ ಮದುವೆ ಕಾರ್ಯ?

ನಿಖಿಲ್​ ಕುಮಾರಸ್ವಾಮಿ ಮದುವೆ ನಡೆಯುವ ಸ್ಥಳದ ಚಿತ್ರ

ನಿಖಿಲ್​ ಕುಮಾರಸ್ವಾಮಿ ಮದುವೆ ನಡೆಯುವ ಸ್ಥಳದ ಚಿತ್ರ

Corona Effects: ಶಿವರಾತ್ರಿಯಂದು ಮದುವೆ ಕಾರ್ಯಗಳಿಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದ ಕುಟುಂಬ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಈಗ ಈ ಕಾರ್ಯಗಳು ಎಲ್ಲಿ ಶುರುವಾಯಿತೊ ಅಲ್ಲಿಯೇ ಇದೆ. ಈ ಹಿನ್ನೆಲೆ ಮದುವೆ ಇಲ್ಲಿ ನಡೆಯುತ್ತದಾ ಎಂಬ ಅನುಮಾನ ಕಾಡಿದೆ.

  • Share this:

ರಾಮನಗರ (ಮಾ.12): ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಕೊರೋನಾಗೆ ರಾಜ್ಯದ ನಾಲ್ವರು ಕೂಡ ತುತ್ತಾಗಿದ್ದು, ಎಲ್ಲಡೆ ಆಂತಕ ಹೆಚ್ಚಿಸಿದೆ. ಪ್ರತಿನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕ ಸಮಾರಂಭ, ಓಡಾಟಗಳ ಮೇಲೆ ಎಚ್ಚರವಹಿಸುವಂತೆ ಸರ್ಕಾರ ಸೂಚನೆ ನೀಡಿದೆ. ಕೊರೋನಾ ಭೀತಿ ಈಗ ನಿಖಿಲ್​ ಕುಮಾರಸ್ವಾಮಿ ಮದುವೆಗೂ ತಾಗಿದ್ದು, ಮದುವೆ ಮುಂದೂಡುವ ಅಥವಾ ಸ್ಥಳಾಂತರ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಜತೆಗೆ ಈ ಮಾತಿಗೆ ಪೂರಕ ಎನ್ನುವಂತೆ ಮದುವೆ ಸಿದ್ಧತೆ ಕಾರ್ಯಗಳು ಸ್ಥಗಿತಗೊಂಡಿವೆ.  


ಶ್ರೀರಾಮುಲು ಮಗಳ ಮದುವೆ ಬಳಿಕ ರಾಜ್ಯ ರಾಜಕೀಯ ವಲಯದಲ್ಲಿ ಮತ್ತೊಂದು ಅದ್ಧೂರಿ ಮದುವೆ ನಿಖಿಲ್​ ಕುಮಾರಸ್ವಾಮಿಯದ್ದಾಗಿರಲಿದೆ. ನಿಖಿಲ್​ ರಾಜಕೀಯ ಹಾದಿ ಜೊತೆ ಪಕ್ಷ ಸಂಘಟನೆ ದೃಷ್ಟಿಯಿಂದಲೂ ಚಿಂತನೆ ನಡೆಸಿ ಕುಮಾರಸ್ವಾಮಿ ತಮ್ಮ ರಾಜಕೀಯ ಕರ್ಮಭೂಮಿಯಲ್ಲಿ ಮದುವೆಗೆ ಸಿದ್ಧತೆ ಮಾಡಿದ್ದರು.


ಏಪ್ರಿಲ್​ 17ರಂದು ರಾಮನಗರ ಚನ್ನಪಟ್ಟಣದ ಮಧ್ಯೆ ಜಾನಪದ ಲೋಕದ ಬಳಿ ಸುಮಾರು 5 ಲಕ್ಷ ಜನರ ಸಮ್ಮುಖದಲ್ಲಿ ನಿಖಿಲ್​ - ರೇವತಿ ಹೊಸ ಜೀವನ ಆರಂಭಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ, ಈಗ ರಾಜ್ಯದಲ್ಲಿ ಮೂಡಿರುವ ಕೊರೋನಾ ಆತಂಕ ದಿನೇ ದಿನೇ ಹೆಚ್ಚುತ್ತಿದ್ದು, ಈ ಭಯ ಕುಮಾರಸ್ವಾಮಿ ಕುಟುಂಬವನ್ನು ಕಂಗೆಡಿಸಿದೆ. ಈ ಹಿನ್ನೆಲೆ ಏನು ಮಾಡುವುದು ತೋಚದೆ ಮದುವೆ ಸಿದ್ಧತೆ ಕಾರ್ಯಗಳಿಗೆ ಬ್ರೇಕ್​ ನೀಡಲಾಗಿದೆ.
ಶಿವರಾತ್ರಿಯಂದು ಮದುವೆ ಕಾರ್ಯಗಳಿಗೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದ ಕುಟುಂಬ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಈಗ ಈ ಕಾರ್ಯಗಳು ಎಲ್ಲಿ ಶುರುವಾಯಿತೊ ಅಲ್ಲಿಯೇ ಇದೆ. ಈ ಹಿನ್ನೆಲೆ ಮದುವೆ ಇಲ್ಲಿ ನಡೆಯುತ್ತದಾ ಎಂಬ ಅನುಮಾನ ಕಾಡಿದೆ.


ಇದನ್ನು ಓದಿ: Nikhil Kumaraswamy: ನಿಖಿಲ್​-ರೇವತಿ ಹೊಸ ಫೋಟೋ: ಸ್ಯಾಂಡಲ್​ವುಡ್​ ಜಾಗ್ವಾರ್​ನದ್ದು ಅದೇ ಪೋಸ್, ಅದೇ ಪ್ರೇಮತೀವ್ರತೆ..!


ರಾಮನಗರದಲ್ಲಿ ಮದುವೆ ಮಾಡಿದರೆ, 5 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.  ಇದರಿಂದ ತೊಂದರೆಯಾಗಲಿದೆ. ಬದಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಮಾಡಿದರೆಬೆಂಗಳೂರಿನಲ್ಲಿ ನಿರ್ದಿಷ್ಟ ಜನರಿಗೆ ಮಾತ್ರ ಅವಕಾಶವಿರಲಿದೆ. ಈ ಹಿನ್ನೆಲೆ ಮುಂಜಾಗೃತ ಕ್ರಮ ಕೈಗೊಳ್ಳಬಹುದು ಎಂಬುದು ಸದ್ಯದ ಲೆಕ್ಕಾಚಾರ ಎನ್ನಲಾಗಿದೆ.
ಈ ಕುರಿತು ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕುಮಾರಸ್ವಾಮಿಯವರು ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂಬ ಮಾತು ಕೂಡ ಕ್ಷೇತ್ರದ ಜೆಡಿಎಸ್​ ವಲಯದಿಂದ ಕೇಳಿಬಂದಿದೆ.

top videos


    (ವರದಿ: ಎಟಿ ವೆಂಕಟೇಶ್​​)

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು