ಹೊಸಕೋಟೆಯಲ್ಲಿ ಶರತ್​​ ಬಚ್ಚೇಗೌಡ ಬಿಜೆಪಿ ಬಂಡಾಯ ಅಭ್ಯರ್ಥಿ; ಬದ್ದ ವೈರಿಗೆ ಹೆಗಲು ಕೊಟ್ಟ ನಿಖಿಲ್​​ ಕುಮಾರಸ್ವಾಮಿ

ಹೆಚ್. ಡಿ. ದೇವೇಗೌಡರ ರಾಜಕೀಯ ಬದ್ಧ ವೈರಿಯಾಗಿದ್ದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರಿಗೆ ಜೆಡಿಎಸ್​​ ಬೆಂಬಲ ಘೋಷಿಸಿದೆ. ದೇವೇಗೌಡರನ್ನು ಲೆಕ್ಕಿಸದೇ ಹೆಚ್.ಡಿ ಶರತ್​​ಗೆ ಬೆಂಬಲ ಘೋಷಿಸಿದ್ದಾರೆ. ಜತೆಗೆ ಶರತ್​​ಗೆ ಚುನಾವಣಾ ಪ್ರಚಾರದ ವೇಳೆ ಹೆಗಲು ಕೊಡುವಂತೆ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಆದೇಶಿಸಿದ್ದಾರೆ.

news18-kannada
Updated:November 13, 2019, 6:30 PM IST
ಹೊಸಕೋಟೆಯಲ್ಲಿ ಶರತ್​​ ಬಚ್ಚೇಗೌಡ ಬಿಜೆಪಿ ಬಂಡಾಯ ಅಭ್ಯರ್ಥಿ; ಬದ್ದ ವೈರಿಗೆ ಹೆಗಲು ಕೊಟ್ಟ ನಿಖಿಲ್​​ ಕುಮಾರಸ್ವಾಮಿ
ಶರತ್​​ ಬಚ್ಚೇಗೌಡ, ನಿಖಿಲ್​​ ಕುಮಾರಸ್ವಾಮಿ
  • Share this:
ಬೆಂಗಳೂರು(ನ.13): ಸುಪ್ರೀಂಕೋರ್ಟ್​ ತೀರ್ಪು ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಶರತ್​​ ಬಚ್ಚೇಗೌಡ ನಿರ್ಧರಿಸಿದ್ಧಾರೆ. ತನ್ನ ಬದಲಿಗೆ ಅನರ್ಹ ಶಾಸಕ ಎಂಟಿಬಿ ನಾಗರಾಜ್​​ ಟಿಕೆಟ್​​ ನೀಡಿದ ಕಾರಣ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಳೆ ಶರತ್​​ ಬಚ್ಚೇಗೌಡ ನಾಮಪತ್ರ ಸಲ್ಲಿಸಲಿದ್ದಾರೆ. ಈ ಮಧ್ಯೆ ಶರತ್​​ ಬಚ್ಚೇಗೌಡರಿಗೆ ಜೆಡಿಎಸ್​​ ಬೆಂಬಲ ಘೋಷಿಸಿದ್ದು, ನಿಖಿಲ್​​ ಕುಮಾರಸ್ವಾಮಿ ಹೊಸಕೋಟೆ ಚುನಾವಣಾ ಅಖಾಡಕ್ಕಿಳಿದಿದ್ದಾರೆನ್ನಲಾಗಿದೆ. ನಾಳೆ ಶರತ್​​ ಬಚ್ಚೇಗೌಡ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್​​ ಪ್ರತಿನಿಧಿಯಾಗಿ ನಿಖಿಲ್​​ ಕುಮಾರಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂಕೋರ್ಟ್​ ಇಂದು ತೀರ್ಪು ನೀಡಿದೆ. ಹೀಗಾಗಿ ಹೋಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅನರ್ಹ ಶಾಸಕ ಎಂಟಿಬಿ ನಾಗರಾಜ್​​ಗೆ ಟಿಕೆಟ್ ನೀಡಲಿದೆ. ಪಕ್ಷ ಬಿಟ್ಟು ಬಂದವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಈ ಹಿಂದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಶರತ್ ಬಚ್ಚೇಗೌಡ ಪಕ್ಷ ತೊರೆಯುವ ಸೂಚನೆಯೂ ನೀಡಿದ್ದರು. ಅದರಂತೆಯೀಗ ನಾಳೆ ಬಂಡಾಯ ಅಭ್ಯರ್ಥಿಯಾಗಿ ಶರತ್​​ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಶರತ್​ಗೆ ಈಗಾಗಲೇ ಜೆಡಿಎಸ್​ ಬೆಂಬಲ ಸೂಚಿಸಿದೆ.

ಸುಪ್ರೀಂಕೋರ್ಟ್ ಅಂತಿಮ ತೀರ್ಪು ಹೊರ ಬೀಳುತ್ತಿದ್ದಂತೆಯೇ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಹೋಸಕೋಟೆಯಲ್ಲಿ ಶರತ್​ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಹೆಚ್. ಡಿ. ದೇವೇಗೌಡರ ರಾಜಕೀಯ ಬದ್ಧ ವೈರಿಯಾಗಿದ್ದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರಿಗೆ ಜೆಡಿಎಸ್​​ ಬೆಂಬಲ ಘೋಷಿಸಿದೆ. ದೇವೇಗೌಡರನ್ನು ಲೆಕ್ಕಿಸದೇ ಹೆಚ್.ಡಿ ಶರತ್​​ಗೆ ಬೆಂಬಲ ಘೋಷಿಸಿದ್ದಾರೆ. ಜತೆಗೆ ಶರತ್​​ಗೆ ಚುನಾವಣಾ ಪ್ರಚಾರದ ವೇಳೆ ಹೆಗಲು ಕೊಡುವಂತೆ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮೊಂದಿಗೆ ಇದ್ದಾಗ ಜೆಡಿಎಸ್​​ಗೆ ಸೆಕ್ಯೂಲರಿಸಂ ಇತ್ತು, ಈಗಿಲ್ಲವೇ?: ಮಾಜಿ ಸಿಎಂಗೆ ದೇವೇಗೌಡರ ಪ್ರಶ್ನೆ

ಈ ಹಿಂದೆಯೇ ಹೊಸಕೋಟೆ ಉಪಚುನಾವಣಾ ಸಮರದ ಬಂಡಾಯದ ಬಿಸಿ ಬಿಜೆಪಿಗೆ ತಟ್ಟಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಬಿ.ಫಾರಂ? ನೀಡಬೇಕು ಎಂಬ ಕಗ್ಗಂಟು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಎದುರಾಗಿತ್ತು. ಬಿಜೆಪಿ ಆಕಾಂಕ್ಷಿ ಶರತ್ ಬಚ್ಚೇಗೌಡ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: ಹೊಸಕೋಟೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಳೆ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಅನರ್ಹ ಶಾಸಕ ಎಂಟಿಬಿ ನಾಗರಾಜ್ ರಾಜೀನಾಮೆಯಿಂದ ತೆರವಾಗಿರುವ ಹೊಸಕೋಟೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಸುಪ್ರೀಂಕೋರ್ಟ್​ನಲ್ಲಿ ತನ್ನ ಪರವಾಗಿ ತೀರ್ಪು ಬಂದಿದ್ದು, ಎಂಟಿಬಿ ನಾಗರಾಜ್​​ ಅವರೇ ಹೊಸಕೋಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಸರ್ಕಾರ ರಚನೆಗೆ ಸಹಕರಿಸಿದಕ್ಕಾಗಿ ಸಿಎಂ ಬಿ.ಎಸ್​ ಯಡಿಯೂರಪ್ಪ ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಯಲು ಎಂಟಿಬಿ ನಾಗರಾಜ್​​ಗೆ ಅವಕಾಶ ಮಾಡಿಕೊಟ್ಟಿದ್ಧಾರೆ.------------
First published: November 13, 2019, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading