• Home
 • »
 • News
 • »
 • state
 • »
 • JDS Pancharatna Yatra: 'ಎಲ್ಲಾ ವಿರೋಧಿಗಳ ಷಡ್ಯಂತ್ರಕ್ಕೆ ನಾನು ಬಲಿಯಾದೆ'-ಲೋಕ ಸೋಲು ಸ್ಮರಿಸಿದ ನಿಖಿಲ್ ಕುಮಾರಸ್ವಾಮಿ

JDS Pancharatna Yatra: 'ಎಲ್ಲಾ ವಿರೋಧಿಗಳ ಷಡ್ಯಂತ್ರಕ್ಕೆ ನಾನು ಬಲಿಯಾದೆ'-ಲೋಕ ಸೋಲು ಸ್ಮರಿಸಿದ ನಿಖಿಲ್ ಕುಮಾರಸ್ವಾಮಿ

ಜೆಡಿಎಸ್ ಪಂಚರತ್ನ ಯಾತ್ರೆ, ಮಂಡ್ಯ

ಜೆಡಿಎಸ್ ಪಂಚರತ್ನ ಯಾತ್ರೆ, ಮಂಡ್ಯ

ನನ್ನ, ನಿಮ್ಮ ಸಂಬಂಧ ಕಿತ್ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನಾನು ಮಂಡ್ಯ ಜಿಲ್ಲೆಯನ್ನ ಮರೆತಿಲ್ಲ, ಮರೆಯೋದೂ ಇಲ್ಲ ಎಂದ ನಿಖಿಲ್ ಕುಮಾರಸ್ವಾಮಿ.

 • News18 Kannada
 • 3-MIN READ
 • Last Updated :
 • Mandya, India
 • Share this:

ಮಂಡ್ಯ: ಜಿಲ್ಲೆಯಲ್ಲಿ ಮೂರನೇ ದಿನದ ಪಂಚರತ್ನ ರಥಯಾತ್ರೆ (Pancharatna Yatra) ಅದ್ಧೂರಿಯಾಗಿ ಸಾಗಿದ್ದು, ಮದ್ದೂರಿನ ಗೆಜ್ಜಲಗೆರೆಯಿಂದ ಆರಂಭ ಯಾತ್ರೆ ಆರಂಭವಾಯ್ತು. ರಥಯಾತ್ರೆ ಆರಂಭವಾಗುತ್ತಿದ್ದಂತೆ ಮಾಜಿ ಸಿಎಂ ಕುಮಾರಸ್ವಾಮಿ (Ex CM HD Kumaraswamy) ವಾಹನ ತಡೆದ ಮಹಿಳೆಯರು, ತಮ್ಮ ಸಮಸ್ಯೆ ಆಲಿಸುವಂತೆ ಒತ್ತಾಯ ಮಾಡಿದರು. ಈ ವೇಳೆ ಮಹಿಳೆಯರು ರಾಷ್ಟ್ರೀಯ ಹೆದ್ದಾರಿಯಿಂದ ಆಗ್ತಿರುವ ಸಮಸ್ಯೆ ಬಗ್ಗೆ ಕುಮಾರಸ್ವಾಮಿ ಅವರಿಗೆ ತಿಳಿಸಿದರು. ಸಮಸ್ಯ ಆಲಿಸಿದ ಮಾಜಿ ಸಿಎಂ, ಈ ಬಗ್ಗೆ ಸೂಕ್ರ ಕ್ರಮವಹಿಸಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಇನ್ನು, ಯಾತ್ರೆಯಲ್ಲಿ ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಕೂಡ ಜೆಡಿಎಸ್​ ಅಭ್ಯರ್ಥಿಗಳಿಗೆ ಸಾಥ್ ನೀಡಿದರು.


'ನನ್ನ, ನಿಮ್ಮ ಸಂಬಂಧ ಕಿತ್ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ'


ಸಭೆಯನ್ನು ಉದ್ದೇಶಿ ಮಾತನಾಡಿದ ನಿಖಿಲ್​​, ಕಳೆದ ಲೋಕಸಭಾ ಚುನಾವಣೆಯ ಸೋಲು ಸ್ಮರಿಸಿದರು. ನನ್ನ, ನಿಮ್ಮ ಸಂಬಂಧ ಕಿತ್ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ನಾನು ಮಂಡ್ಯ ಜಿಲ್ಲೆಯನ್ನ ಮರೆತಿಲ್ಲ, ಮರೆಯೋದೂ ಇಲ್ಲ.


ನನಗೆ ಬಹಳ ಕಾರ್ಯಕರ್ತರು ಕರೆ ಮಾಡಿದ್ದರು. ಮಂಡ್ಯ ಜಿಲ್ಲೆ ಬಿಡಬೇಡಿ ಅಂತಾ ಹೇಳ್ತಿದ್ದಾರೆ. ಆದರೆ ಅನಿತಾ ಕುಮಾರಸ್ವಾಮಿ ಅವರು ನನ್ನ ಹೆಸರನ್ನ ಘೋಷಿಸಿದ್ದಾರೆ. ಅದು ಭಾವನಾತ್ಮಕವಾಗಿ ಹೇಳಿದ ಹೇಳಿಕೆ ಅಷ್ಟೇ. ನಾನು ನನ್ನ ಕಾರ್ಯಕರ್ತರ ಜೊತೆ ಸದಾ ಸ್ಪಂದಿಸುತ್ತಿದ್ದೇನೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹೇಳಿದ್ದಾರೆ.ಇದನ್ನೂ ಓದಿ: SS Mallikarjun: ಮಾಜಿ ಸಚಿವರ ಫಾರ್ಮ್​ಹೌಸ್​​ನಲ್ಲಿ ಜೀವಂತ ಜಿಂಕೆ, ನರಿ, ಮುಂಗುಸಿ, ನರಿಗಳು ಪತ್ತೆ


ಎಲ್ಲಾ ವಿರೋಧಿಗಳ ಷಡ್ಯಂತ್ರಕ್ಕೆ ನಾನು ಬಲಿಯಾದೆ


ನನ್ನ ನಿಮ್ಮ ಸಂಬಂಧ ಕೇವಲ ರಾಜಕೀಯಕ್ಕೆ ಸೀಮಿತವಾದದ್ದಲ್ಲ. 2024ರ ಬಗ್ಗೆ ಇವತ್ತು ಚರ್ಚೆ ಬೇಡ. ಅವತ್ತು ಮಂಡ್ಯ ಸ್ವಾಭಿಮಾನದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದ್ದರು. ರಾಜಕೀಯ ಷಡ್ಯಂತ್ರಕ್ಕೆ ನಾನು ಸೋತೆ. ಎಲ್ಲಾ ವಿರೋಧಿಗಳ ಷಡ್ಯಂತ್ರಕ್ಕೆ ನಾನು ಬಲಿಯಾದೆ ಅಷ್ಟೇ.


ಮೊದಲು 2023ಕ್ಕೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಶ್ರಮಿಸಿ. ಯಾರೂ ಉದ್ವೇಗಕ್ಕೆ ಒಳಗಾಗಬೇಡಿ. ಮಂಡ್ಯ ಜಿಲ್ಲೆ ನಮ್ಮ ಜಿಲ್ಲೆ. ದೇವೇಗೌಡ, ಕುಮಾರಣ್ಣನ ಬೆಳೆಸಿದ ಜಿಲ್ಲೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.


ಪಂಚರತ್ನ ರಥಯಾತ್ರೆ ನೋಡಿ ವಿರೋಧಿಗಳು ನಿದ್ದೆಗೆಟ್ಟಿದ್ದಾರೆ


ಮಂಡ್ಯ ತಾಲೂಕಿನ ಬೂದನೂರು ಗ್ರಾಮದ ಬಳಿ ನ್ಯೂಸ್​​18 ಕನ್ನಡದೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಅವರು, ಸದನ ನಡೆಯುವಂತದ್ದು ಒಂದು ಭಾಗ. ಕಲಾಪದಲ್ಲಿ ನಮ್ಮ ಪಕ್ಷದವರಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟಿದ್ದೇನೆ. ಈ ರಾಜ್ಯದಲ್ಲಿ ಆಗಿರುವಂತ ಅನಾಹುತವನ್ನ ಸರಿಪಡಿಸಲು ಯಾತ್ರೆಯನ್ನ ಮಾಡ್ತಿದ್ದೇನೆ.


ನಮ್ಮ ಪಕ್ಷದ ಪ್ರಮುಖ ಶಾಸಕರು ಕಲಾಪದಲ್ಲಿದ್ದಾರೆ. ನನ್ನ ಅನುಪಸ್ಥಿತಿಯಲ್ಲಿ ರಾಜ್ಯದ ಸಮಸ್ಯೆಯನ್ನು ನಮ್ಮ ಶಾಸಕರು ಮಾತನಾಡಲಿದ್ದಾರೆ. ಮೀಸಲಾತಿ ಬಗ್ಗೆ ಹುಡುಗಾಟದ ರೀತಿ ರಾಜಕೀಯ ನಾಯಕರು ಚರ್ಚೆಗಳನ್ನು ಮಾಡ್ತಿದ್ದಾರೆ. ವೈಯಕ್ತಿಕ ವಿಚಾರಕ್ಕೆ ರಾಜಕೀಯ ಪಕ್ಷಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.


ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ


ಇದನ್ನೂ ಓದಿ: Demolition of Hubballi Dargah: ಕಲಾಪದಲ್ಲಿ ‘ದರ್ಗಾ’ ಗುದ್ದಾಟ; ನನ್ನ ಭೂಮಿ ಕೂಡ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದ್ರು ಸಿಎಂ


ಜೆಡಿಎಸ್​ ಅಭ್ಯರ್ಥಿಗಳಿಗೆ ಹೆಚ್​​ಡಿಕೆ ಖಡಕ್ ವಾರ್ನಿಂಗ್


ಇದೇ ವೇಳೆ ಈಗಾಗಲೇ ಜೆಡಿಎಸ್​​​ ಪಕ್ಷ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಆಯ್ಕೆಯಾಗಿರುವ ಎಚ್ಚರಿಕೆ ನೀಡಿದ ಕುಮಾರಸ್ವಾಮಿ ಅವರು, ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವರ ಬದಲಾವಣೆ ಆಗಲಿದೆ‌. ಈ ಬಗ್ಗೆ ಅಂದೇ ನಾನು ತಿಳಿಸಿದ್ದೇನೆ. ಅಭ್ಯರ್ಥಿ ಆಗಿದ್ದೇನೆ ಎಂದು ಸಕ್ರಿಯವಾಗಿರದ ಅಭ್ಯರ್ಥಿಗಳ ಬದಲಾವಣೆ ಮಾಡಲಾಗುವುದು.


ಯಾರೋ ಉತ್ತರ ಭಾರತದ ಹೈಕಮಾಂಡ್ ನಾಯಕರ ಮುಂದೆ ಕೈಕಟ್ಟಿ ನಿಲ್ಲುವ ಪಕ್ಷ ನಮ್ಮದಲ್ಲ.‌ ಇಲ್ಲಿಯ ಜನರ ಸಮಸ್ಯೆ ಹೈಕಮಾಂಡ್ ನಾಯಕರಿಗೆ ಏನು ಗೊತ್ತು? ಹೈಕಮಾಂಡ್ ಸಂಸ್ಕೃತಿಯಿಂದ ಈ ರಾಜ್ಯಕ್ಕೆ ಅನ್ಯಾಯವಾಗಿದೆ. ನಮಗಾಗಿರುವ ಅನ್ಯಾಯದ ಹಿನ್ನೆಲೆ ಎರಡು ರಾಷ್ಟ್ರೀಯ ಪಕ್ಷಗಳನ್ನ ತಿರಸ್ಕರಿಸಬೇಕು ಎಂದು ಕರೆ ನೀಡಿದರು.

Published by:Sumanth SN
First published: