ಚುನಾವಣೆ ಯಾವಾಗ ಬೇಕಿದ್ದರೂ ಬರಬಹುದು, ನೀವು ಸಿದ್ಧರಾಗಿರಿ; ಕಾರ್ಯಕರ್ತರಿಗೆ ನಿಖಿಲ್​ ಕಿವಿಮಾತು, ವಿಡಿಯೋ ವೈರಲ್​

ಒಮ್ಮೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಆತ್ಮವಿಶ್ವಾಸದಿಂದ ಮಾತನಾಡುವ ನಿಖಿಲ್, ನಂತರ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ, ಜೆಡಿಎಸ್ ಕಾರ್ಯಕರ್ತರು ತಯಾರಾಗಿರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.

Latha CG | news18
Updated:June 6, 2019, 12:17 PM IST
ಚುನಾವಣೆ ಯಾವಾಗ ಬೇಕಿದ್ದರೂ ಬರಬಹುದು, ನೀವು ಸಿದ್ಧರಾಗಿರಿ; ಕಾರ್ಯಕರ್ತರಿಗೆ ನಿಖಿಲ್​ ಕಿವಿಮಾತು, ವಿಡಿಯೋ ವೈರಲ್​
ನಿಖಿಲ್ ಕುಮಾರಸ್ವಾಮಿ
Latha CG | news18
Updated: June 6, 2019, 12:17 PM IST
ಮಂಡ್ಯ (ಜೂ.06): ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಜೆಡಿಎಸ್​ ಮುಖಂಡ ನಿಖಿಲ್​ ಕುಮಾರಸ್ವಾಮಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಮಂಡ್ಯ ಜಿಲ್ಲೆಯಾದ್ಯಂತ ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಜೊತೆಗೆ ಹಿರಿಯ ರಾಜಕೀಯ ಮುಖಂಡರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಉಳಿಯುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ನಿಖಿಲ್ ಕುಮಾರಸ್ವಾಮಿ  ಕಾರ್ಯಕರ್ತರ ಜೊತೆ ಚರ್ಚಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

"ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ಚುನಾವಣೆ ಬರಬಹುದು ಅದಕ್ಕೆ ನೀವು ಸಿದ್ಧರಾಗಿರಿ. ರಾಜ್ಯ ವಿಧಾನಸಭೆ ಚುನಾವಣೆಗೆ ಸನ್ನದ್ಧರಾಗಿ. ರಾಜ್ಯ ಸರ್ಕಾರಕ್ಕೆ ತೊಂದರೆಯಿಲ್ಲ. ಆದರೂ ನಾವೆಲ್ಲರೂ ಚುನಾವಣೆ ಎದುರಿಸಲು ಸಿದ್ಧರಾಗಿರಬೇಕು. ಇಂದು, ನಾಳೆ ಅಥವಾ ವರ್ಷ ಕಳೆದು ಚುನಾವಣೆ ಬರಬಹುದು. ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ನಾವು ಅದಕ್ಕೆ ಸಿದ್ಧರಿರಬೇಕು. ಮುಂದಿನ ತಿಂಗಳಿನಿಂದಲೇ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು," ಎಂದು ಜೆಡಿಎಸ್ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಸೂಚಿಸಿದ್ದಾರೆ. ಈ ವಿಡಿಯೋ ಸುನೀಲ್​ಗೌಡ ದಂಡಿಗಾನಹಳ್ಳಿಯ ಫೇಸ್​ಬುಕ್​ ಪೇಜ್​ನಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಎಸ್​ಟಿಪಿ ಘಟಕ ಸ್ಥಾಪನೆಗೆ ಪರಿಹಾರ ನೀಡದೆ ರೈತರ ಭೂಮಿ ಸ್ವಾಧೀನ; ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​

ಒಮ್ಮೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಆತ್ಮವಿಶ್ವಾಸದಿಂದ ಮಾತನಾಡುವ ನಿಖಿಲ್, ನಂತರ ಚುನಾವಣೆ ಯಾವಾಗ ಬರುತ್ತೋ ಗೊತ್ತಿಲ್ಲ, ಜೆಡಿಎಸ್ ಕಾರ್ಯಕರ್ತರು ತಯಾರಾಗಿರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ.  ಆದರೆ ಇದು ಯಾವಾಗ, ಎಲ್ಲಿ ಮಾತನಾಡಿರುವುದು ಎಂಬುದು ತಿಳಿದು ಬಂದಿಲ್ಲ. "ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ 4 ವರ್ಷ ಪೂರ್ಣಗೊಳಿಸುತ್ತದೆ. ದಿನನಿತ್ಯ ಮಾಧ್ಯಮದಲ್ಲಿ ಬರುವುದನ್ನು ನೋಡಿ ನೀವು ಟೆನ್ಷನ್ ಆಗುತ್ತಿದ್ದೀರಿ. ಸರ್ಕಾರದ ಒಳಗಡೆ ಏನು ನಡೆಯುತ್ತಿದೆ ಎನ್ನುವುದು ನಮಗೆ ಗೊತ್ತಿದೆ. ಕುಮಾರಣ್ಣ ನಾಲ್ಕು ವರ್ಷ ನಡೆಸುತ್ತಾರೆ," ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ. 
Loading...

ಮತ್ತೊಂದು ಬಾರಿ, "ಜೆಡಿಎಸ್​ ಕಾರ್ಯಕರ್ತರು ಮುಂದಿನ ತಿಂಗಳಿದಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ, ಚುನಾವಣೆ ಒಂದು ವರ್ಷಕ್ಕೆ ಬರುತ್ತೋ, ಎರಡು ವರ್ಷಕ್ಕೆ ಬರುತ್ತೋ, ಮೂರು ವರ್ಷಕ್ಕೆ ಬರುತ್ತೋ ಗೊತ್ತಿಲ್ಲ. ಆದರೆ ಚುನಾವಣೆ ಯಾವಾಗ ಬಂದರೂ ನಾವು ಎದುರಿಸಲು ರೆಡಿಯಾಗಿರಬೇಕು," ಎಂದು ಹೇಳಿದ್ದಾರೆ.
First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...