Nikhil Kumaraswamy: ಜೆಡಿಎಸ್‌ಗೆ ಇದೇ ಕೊನೆ ಎಲೆಕ್ಷನ್ನಾ? ನಿಖಿಲ್ ಕುಮಾರಸ್ವಾಮಿ ಮಾತಿನ ಅರ್ಥವೇನು?

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತ್ರಿದುರ್ಗ ಹೋಬಳಿ ಅಂಚೆಪಾಳ್ಯ ಕ್ರಾಸ್​ನಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ್ರು. ಈ ವೇಳೆ ಮಾತಿನ ಭರದಲ್ಲಿ ಮುಂದಿನ ಚುನಾವಣೆ ಜೆಡಿಎಸ್ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ ಅಂತ ನಿಖಿಲ್ ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸಂಗ್ರಹ ಚಿತ್ರ

ನಿಖಿಲ್ ಕುಮಾರಸ್ವಾಮಿ ಸಂಗ್ರಹ ಚಿತ್ರ

  • Share this:
ಕುಣಿಗಲ್, ತುಮಕೂರು: ಕನ್ನಡ ಚಿತ್ರರಂಗದ ನಾಯಕನೂ (Kannada film industry hero) ಆಗಿರುವ ಜೆಡಿಎಸ್ ಯುವ ನಾಯಕ (JDS Youth Leader), ರಾಜಕಾರಣಿ (Politician) ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಶಾಂಕಿಂಗ್ ಹೇಳಿಕೆ ನೀಡಿದ್ದಾರೆ. ತುಮಕೂರು (Tumkur) ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯ ಕ್ರಾಸ್ನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು (JDS Workers) ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇದು ಜೆಡಿಎಸ್‌ ಪಾಲಿಗೆ ಕೊನೆಯ ಚುನಾವಣೆ (Last Election) ಆದರೂ ಆಗಬಹುದು ಎಂದಿದ್ದಾರೆ. ಜೆಡಿಎಸ್ ಯುವ ನಾಯಕನ ಮಾತು ಕೇಳಿ ಕಾರ್ಯಕರ್ತರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಕೊನೆಗೆ ಎಚ್ಚೆತ್ತ ನಿಖಿಲ್ ಕುಮಾರಸ್ವಾಮಿ, ಇಲ್ಲಿಂದ ಹೊಸ ಅಧ್ಯಾಯ ಆರಂಭ ಆಗಬೇಕು, ಮುಂದಿನ 25 ವರ್ಷಗಳ ಕಾಲ ನಮ್ಮದೇ ಪಾರುಪತ್ಯ ಅಂತ ಹೇಳಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು.

“ಇದು ಜೆಡಿಎಸ್‌ ಪಾಲಿಗೆ ಕೊನೆ ಚುನಾವಣೆ”

ನಿನ್ನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತ್ರಿದುರ್ಗ ಹೋಬಳಿ ಅಂಚೆಪಾಳ್ಯ ಕ್ರಾಸ್​ನಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ್ರು. ಈ ವೇಳೆ ಮಾತಿನ ಭರದಲ್ಲಿ ಮುಂದಿನ ಚುನಾವಣೆ ಜೆಡಿಎಸ್ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ ಅಂತ ನಿಖಿಲ್ ಹೇಳಿದ್ದಾರೆ. ಇದು ಕಷ್ಟಕಾರ್ಪಣ್ಯ ಗಳ ಕೊನೆ ಚುನಾವಣೆ ಆಗಬೇಕು ಅನ್ನೋದರ ಬದಲು ನಮ್ಮ ಪಾಲಿನ ಕೊನೆ ಚುನಾವಣೆ ಎಂದಿದ್ದಾರೆ.“ಮುಂದೆ ನಮ್ಮದೇ ಪಾರುಪತ್ಯ” ಎಂದ ನಿಖಿಲ್ ಕುಮಾರಸ್ವಾಮಿ

ಜೆಡಿಎಸ್ ಯುವ ನಾಯಕನ ಮಾತು ಕೇಳಿ ಕಾರ್ಯಕರ್ತರೆಲ್ಲ ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ. ಬಳಿಕ ಸಾವರಿಸಿಕೊಂಡ ನಿಖಿಲ್ ಕುಮಾರಸ್ವಾಮಿ, ಇಲ್ಲಿಂದ ಜೆಡಿಎಸ್‌ನ ಹೊಸ ಅಧ್ಯಾಯ ಆರಂಭ ಆಗಬೇಕು. ಮುಂದಿನ 25 ವರ್ಷಗಳ ಕಾಲ ನಮ್ಮದೇ ಪಾರುಪತ್ಯ ನಡೆಯಲಿದೆ ಅಂತ ಕಾರ್ಯಕರ್ತರಿಗೆ ಭರವಸೆ ನೀಡಿದ್ರು.

ಇದನ್ನೂ ಓದಿ: Big News: ಪ್ರಧಾನಿಯಾಗ್ತಾರಾ ಕೆಸಿಆರ್? ಹೆಚ್​ಡಿಕೆ ನೀಡುವರೇ ಬೆಂಬಲ?

“ದೇವೇಗೌಡರು ನೂರಾರು ಕಾಲ ನಮ್ಮ ಜೊತೆ ಇರುತ್ತಾರೆ”

ಇನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಆರೋಗ್ಯದ ಕುರಿತಂತೆಯುೂ ಮೊಮ್ಮಗ ನಿಖಿಲ್ ಮಾಹಿತಿ ನೀಡಿದ್ರು. ದೇವೇಗೌಡರ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ. ಹೀಗಾಗಿ ಕಳೆದ 2-3 ತಿಂಗಳುಗಳಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ತಾ ಇಲ್ಲ ಎಂದಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಆದರೆ ದೇವೇಗೌಡರ ಆರೋಗ್ಯ ಸ್ಥಿರವಾಗಿದೆ. ಹೀಗಾಗಿ ಯಾರೂ ಭಯ, ಆತಂಕಗೊಳ್ಳುವುದು ಬೇಡ. ಅವರು ಇನ್ನೂ ನೂರಾರು ವರ್ಷಗಳ ಕಾಲ ನಮ್ಮ ಜೊತೆ ಇರುತ್ತಾರೆ ಅಂತ ನಿಖಿಲ್ ಕುಮಾರಸ್ವಾಮಿ ಆಶಾ ಭಾವನೆ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: HD Kumaraswamy: ಮೈತ್ರಿ ಸರ್ಕಾರ ಇದ್ದಾಗಲೂ ಕಮೀಷನ್ ದಂಧೆ ಇತ್ತು! ಎಚ್‌ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

ಕೆಸಿಆರ್‌ಗೆ ಎಚ್‌ಡಿಕೆ ಬೆಂಬಲಿಸ್ತಾರಾ?

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ (PM Candidate) ಸ್ಪರ್ಧಿಸುವ ಬಲವಾದ ಇಚ್ಛೆ ಹೊಂದಿದ್ದಾರೆ ಎಂದು ಹೇಳಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಭಾನುವಾರ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಅಲ್ಲದೇ ಅಕ್ಟೋಬರ್ 5 ರಂದು ದಸರಾ ಸಂದರ್ಭದಲ್ಲಿರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ ಜೆಡಿಎಸ್ ಬೆಂಬಲಿಸುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Published by:Annappa Achari
First published: