• Home
  • »
  • News
  • »
  • state
  • »
  • Nikhil Kumaraswamy: ವಿಧಾನಸಭೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ; ಹೆಚ್​ಡಿಕೆ ಸುಳಿವು

Nikhil Kumaraswamy: ವಿಧಾನಸಭೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ; ಹೆಚ್​ಡಿಕೆ ಸುಳಿವು

ನಿಖಿಲ್ ಕುಮಾರಸ್ವಾಮಿ ಸಂಗ್ರಹ ಚಿತ್ರ

ನಿಖಿಲ್ ಕುಮಾರಸ್ವಾಮಿ ಸಂಗ್ರಹ ಚಿತ್ರ

ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 126 ವಿಧಾನಸಭಾ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ನ.1ರಂದು ಪ್ರಕಟಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

  • Share this:

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ (Loksabha Election) ಸುಮಲತಾ ಅಂಬರೀಶ್ (Sumalatha Ambareesh) ವಿರುದ್ಧ ಸೋತಿದ್ದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಿಧಾನಸಭೆ ಚುನಾವಣೆಗೆ (Assembly Election 2023) ಸ್ಪರ್ಧಿಸೋ ಸಾಧ್ಯತೆ ಇದೆ. ಹೌದು ನಿಖಿಲ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸೋ ಬಗ್ಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (Former CM HD Kumaraswamy) ಸುಳಿವು ನೀಡಿದ್ದಾರೆ. ಮೈಸೂರಲ್ಲಿ ಮಾತಾಡಿದ ಅವರು 126 ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ. ನಿಖಿಲ್ ರಾಜ್ಯಾದ್ಯಂತ ಪ್ರವಾಸ ಮಾಡಲು ತೀರ್ಮಾನ ಮಾಡಿಕೊಂಡಿದ್ದಾರೆ. ಈಗ ಸಿದ್ಧವಾಗಿರುವ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರೂ ಇರಬಹುದು ಎಂದು ಹೆಚ್​​ಡಿ ಕುಮಾರಸ್ವಾಮಿ ಹೇಳಿದ್ದಾರೆ.


‘40 ಸ್ಥಾನ ಬಂದ್ರೆ ರಾಜಕೀಯ ಬಿಡ್ತೀನಿ’


ಇಷ್ಟಕ್ಕೆ ಸುಮ್ಮನಾಗದ ಕುಮಾರಸ್ವಾಮಿ, ಈ ಬಾರಿ ಜೆಡಿಎಸ್​ಗೆ 30ರಿಂದ 40 ಸ್ಥಾನ ಬಂದರೆ ಅಧಿಕಾರದಿಂದ ದೂರ ಇರುತ್ತೇನೆ. 30ರಿಂದ 40 ಸ್ಥಾನ ಬಂದರೂ ನಾನು ಸಿಎಂ ಆಗುತ್ತೇನೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.


ನ.1ಕ್ಕೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್​


ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 126 ವಿಧಾನಸಭಾ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ನ.1ರಂದು ಪ್ರಕಟಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಯಾರೊಂದಿಗೂ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಲಾಗುವುದು. 123 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.


ಸಿಎಂ ಬೊಮ್ಮಾಯಿಗೆ ಹೆಚ್​​ಡಿಕೆ ಸವಾಲು


ಸಿದ್ದರಾಮಯ್ಯ ಸಿಎಂ ಆಗಿದ್ದ  ಅವಧಿಯಲ್ಲಿ ನೇಮಕಾತಿಯಲ್ಲಿ (Recruitment) ನಡೆದಿರುವ ಅಕ್ರಮ ವ್ಯವಹಾರಗಳ ದಾಖಲೆಗಳನ್ನು ರಾಹುಲ್‌ ಗಾಂಧಿಗೆ (Rahul Gandhi) ಕಳುಹಿಸುತ್ತೀರೇಕೆ? ನಿಮಗೆ ಧಮ್ ಇದ್ದರೆ ಸಚಿವ ಸಂ‍ಪುಟದಲ್ಲಿಟ್ಟು ತನಿಖೆ ಮಾಡಿಸಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ.


nikhil kumaraswamy likely contest assembly election mrq
ನಿಖಿಲ್ ಕುಮಾರಸ್ವಾಮಿ


ನೀನು ಅತ್ತಂಗೆ ಮಾಡು, ನಾನು ಹೊಡೆದಂತೆ ಮಾಡುತ್ತೇನೆ


ಮುಖ್ಯಮಂತ್ರಿಯು ಬೀದರ್ ಜಿಲ್ಲೆಯ ಔರಾದ್‌ನಲ್ಲಿ ನಡೆದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ನೀಡಿದ್ದ ಹೇಳಿಕೆಗೆ ಇಲ್ಲಿ ತಿರುಗೇಟು ಕೊಟ್ಟ ಅವರು, ದಾಖಲೆಗಳನ್ನು ರಾಹುಲ್‌ಗೆ ಕಳುಹಿಸಿ ಏನು ಮಾಡುತ್ತೀರಿ? ನೀನು ಅತ್ತಂಗೆ ಮಾಡು, ನಾನು ಹೊಡೆದಂತೆ ಮಾಡುತ್ತೇನೆ ಎನ್ನುವ ಥರದ ಮಾತುಗಳನ್ನು ಬಿಡಿ ಎಂದು ಟೀಕಿಸಿದರು.


ಇದನ್ನೂ ಓದಿ:  SayCM Campaign: ಪೇಸಿಎಂ ಆಯ್ತು ಇದೀಗ ಸೇಸಿಎಂ ಅಭಿಯಾನ; ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ-ಪ್ರಿಯಾಂಕ್​ ಖರ್ಗೆ

 ದೇವೇಗೌಡರಿಂದ ಅಪರೂಪದ ಮನವಿ


ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ (HD Deve Gowda) ಅವರು ವಿಶೇಷ ಮನವಿಯನ್ನೊಂದು ಮಾಡಿದ್ದಾರೆ. ಅಂದಹಾಗೆ ಅವರ ಈ ಮನವಿ ರಾಜಕೀಯ ರಹಿತವಾಗಿದೆ. ದೇವೇಗೌಡರು ಶಾಸಕರಾಗಿದ್ದಾಗ ಮೈಸೂರು ರಾಜವಂಶಸ್ಥ ಶ್ರೀಜಯಚಾಮರಾಜೇಂದ್ರ ಒಡೆಯರ್ (Sri Jayachamarajendra Wodeyar) ಅವರ ಜೊತೆ ಹೊಳೆನರಸೀಪುರದ (Holenarasipura) ಪ್ರವಾಸಿ ಮಂದಿರದಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ್ದರು. ಆ ಸಂದರ್ಭದ ಫೋಟೋವನ್ನೂ ಸೆರೆಹಿಡಿಯಲಾಗಿತ್ತು. ಆದರೆ ಸದ್ಯ ಆ ಫೋಟೋ ದೇವೇಗೌಡ ಅವರ ಬಳಿ ಇಲ್ಲ.




nikhil kumaraswamy likely contest assembly election mrq
ದೇವೇಗೌಡರ ಜೊತೆ ನಿಖಿಲ್ ಕುಮಾರಸ್ವಾಮಿ




ಆ ಅವಿಸ್ಮರಣೀಯ ಚಿತ್ರ ಹೊಳೆನರಸೀಪುರದಲ್ಲಿ ದೇವೇಗೌಡರು ಉಳಿದಿದ್ದ ಮನೆಯಲ್ಲಿ ಇತ್ತಂತೆ. ಆದರೆ ದೇವೇಗೌಡ ಅವರು ಮನೆ ಬದಲಿಸುವ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥ ಶ್ರೀಜಯಚಾಮರಾಜೇಂದ್ರ ಒಡೆಯರ್ ಅವರ ಜೊತೆ ದೇವೇಗೌಡರು ತೆಗೆದುಕೊಂಡಿದ್ದ ಫೋಟೋ ಕಾಣೆಯಾಗಿಬಿಟ್ಟಿದೆ.


ಇದನ್ನೂ ಓದಿ:  Karnataka Politics: ನನ್ನಪ್ಪನಾಣೆ ಇನ್ನೂ ಐದು ವರ್ಷ ನಾನೇ ಎಂಎಲ್​ಎ ಎಂದ ಶಾಸಕ ಎಸ್​​ಆರ್​ ಶ್ರೀನಿವಾಸ್​​


ಅಮೂಲ್ಯ ಸಂದರ್ಭದ ಚಿತ್ರ ಎಲ್ಲೇ ಯಾರ ಬಳಿಯೇ ಇದ್ದರೂ ದಯವಿಟ್ಟು ಹಿಂದಿರುಗಿಸಿ. ಆ ಫೋಟೋದ ಪ್ರಿಂಟ್ ಹಾಕಿಸಿ ಮತ್ತೆ ನಿಮಗೇ ವಾಪಾಸ್ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಮನವಿ ಮಾಡಿದ್ದಾರೆ.

Published by:Mahmadrafik K
First published: