ರಾಮನಗರ ಕ್ಷೇತ್ರಕ್ಕೆ ನೆರವಿನ ಹಸ್ತ; ಅಂಬ್ಯುಲೆನ್ಸ್​ ಬಳಿಕ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಿದ ನಿಖಿಲ್​

 ಕಳೆದ ಕೆಲ ದಿನಗಳ ಹಿಂದೆ ರಾಮನಗರಕ್ಕೆ ಎರಡು ಆಂಬುಲೆನ್ಸ್ ಗಳನ್ನ ಕೊಡುಗೆಯಾಗಿ ಕೊಟ್ಟಿದ್ದರು. ಈಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಆಶಾಕಾರ್ಯಕರ್ತೆಯರಿಗೆ ನೆರವಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ

 ನಿಖಿಲ್​ ಕುಮಾರಸ್ವಾಮಿ

ನಿಖಿಲ್​ ಕುಮಾರಸ್ವಾಮಿ

  • Share this:
ರಾಮನಗರ (ಜೂ. 4):  ಕೊರೋನಾ ಸಂಕಷ್ಟದಲ್ಲಿ ಪ್ರಾಣ ಪಣಕ್ಕಿಟ್ಟು ದುಡಿಯುತ್ತಿರೋ ಆಶಾ ಕಾರ್ಯಕರ್ತರಿಗೆ ಜೆಡಿಎಸ್​ ಯುವ ನಾಯಕ  ನಿಖಿಲ್ ಕುಮಾರಸ್ವಾಮಿ ನೆರವಾಗಿದ್ದಾರೆ.  ರಾಮನಗರ ವಿಧಾನಸಭಾ ಕ್ಷೇತ್ರದ 450 ಜನ ಆಶಾಕಾರ್ಯಕರ್ತೆಯರಿಗೆ ತಲಾ 2 ಸಾವಿರ ರೂ ನಗದಿನ ಜೊತೆಗೆ ಪ್ರತಿಯೊಬ್ಬರಿಗೂ ನೆಬ್ಲುಲೈಝರ್ ಮಷಿನ್ ವಿತರಣೆ ಮಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ವಿತರಣೆ ಕಾರ್ಯ ನಡೆಸಿದ ಬಳಿಕ ಮಾತನಾಡಿದ  ನಿಖಿಲ್ ಕುಮಾರಸ್ವಾಮಿ, ರಾಜ್ಯದಲ್ಲಿ ಎರಡನೇ ಅಲೆ ತೀವ್ರವಾಗಿದೆ. ಕಳೆದ ವರ್ಷ ಹಾಗೂ ಈ ಬಾರಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೊರೋನಾ ವಾರಿಯರ್ಸ್ ತಮ್ಮ ಪ್ರಾಣ ಪಣಕ್ಕಿಟ್ಟು ಲಕ್ಷಾಂತರ ಜನರ ಪ್ರಾಣ ಉಳಿಸುತ್ತಿದ್ದಾರೆ. ಇವತ್ತು ಎಲ್ಲಾ ಕೋವಿಡ್ ವಾರಿಯರ್ಸ್ ನಿಜವಾದ ಹಿರೋಗಳು. ಹಾಗಾಗಿ ನಿಮಗೆ ನಮ್ಮ ಕೈಲಾದ ಸಹಾಯ ಮಾಡಬೇಕು ಅಂತಾ ತಿಂಗಳಿಂದ ಕೊರೆಯುತ್ತಿತ್ತು, ಇವತ್ತು ಕಾಲ ಕೂಡಿ ಬಂದಿದೆ ಎಂದರು

ಕೊರೋನಾದಿಂದಾಗಿ ಈಗಾಗಲೇ ರಾಜ್ಯದಲ್ಲಿ 16 ಆಶಾ ಕಾರ್ಯಕರ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಪ್ರತೀ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡುತ್ತಿವಿ ಎಂದು  ಹೇಳಿದ್ದರು. ಆದರೆ, ಇಲ್ಲಿವರೆಗೆ ಒಂದು ಕುಟುಂಬಕ್ಕೆ ಮಾತ್ರ ಹಣ ಸಿಕ್ಕಿದೆ ಎಂಬುದು ಗೊತ್ತಾಯಿತು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುತ್ತೇವೆ ಎಂದಿದ್ದ ಸರ್ಕಾರ ಅದರಲ್ಲೂ  ವಿಫಲವಾಗಿದೆ. ತಮ್ಮ ಪ್ರಾಣ ಪಣಕ್ಕಿಟ್ಟು, ನಮ್ಮ ಪ್ರಾಣ ಉಳಿಸುವ ಕೆಲಸವನ್ನ ಕೊರೋನಾ ವಾರಿಯರ್ಸ್ ಮಾಡುತ್ತಿದ್ದಾರೆ. ಅವರನ್ನ, ಅವರ ಕುಟುಂಬವನ್ನ ಉಳಿಸುವ ಕೆಲಸವನ್ನ ನಾವು ಮಾಡಬೇಕು. ಹಾಗಾಗಿ ನಮ್ಮ ಪಕ್ಷದ ಕಡೆಯಿಂದ ನಾವು ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದೇವೆ ಎಂದರು

ಜಿಲ್ಲೆಯ ಕೊರೋನಾ ಸ್ಥಿತಿಗತಿಗಳ ಕುರಿತು  ಕುಮಾರಣ್ಣ, ಅನಿತಾ ಕುಮಾರಸ್ವಾಮಿ ನಿರಂತರವಾಗಿ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ರಾಮನಗರ, ಚನ್ನಪಟ್ಟಣ ಎರಡು ಕಣ್ಣುಗಳಿದ್ದಂತೆ. ಚನ್ನಪಟ್ಟಣದಲ್ಲೂ ಕೂಡ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುತ್ತೇವೆಂದು ಇದೇ ವೇಳೆ ತಿಳಿಸಿದರು.

ಕ್ಷೇತ್ರಕ್ಕೆ ನಿರಂತರ ನೆರವು

ಕಳೆದ ಕೆಲ ದಿನಗಳ ಹಿಂದೆ ರಾಮನಗರಕ್ಕೆ ಎರಡು ಆಂಬುಲೆನ್ಸ್ ಗಳನ್ನ ಕೊಡುಗೆಯಾಗಿ ಕೊಟ್ಟಿದ್ದರು. ಈಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಆಶಾಕಾರ್ಯಕರ್ತೆಯರಿಗೆ ನೆರವಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

ಈಗಾಗಲೇ ಶಾಸಕಿ ಅನಿತಾ ಕುಮಾರಸ್ವಾಮಿ ಕೊರೋನಾ ಎರಡನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆ  ಜೂಮ್ ಮೂಲಕ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ,   ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ಕುಮಾರಸ್ವಾಮಿ ಅವರು ಸಹ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ.  ರಾಮನಗರದ ಜೊತೆಗೆ ಚನ್ನಪಟ್ಟಣದಲ್ಲಿ ಕೊರೋನಾ ಸೋಂಕಿನಿಂದ ಜನರಿಗೆ  ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಜೂಮ್ ಮೂಲಕ ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗೆ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದಾರೆ.

ಈಗಾಗಲೇ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ಕೇಸ್ ಗಳು ಕೊಂಚ ಇಳಿಮುಖವಾಗಿದ್ದರೂ ಸಹ ಎಚ್ಚರಿಕೆ ತಪ್ಪುವಂತಿಲ್ಲ. ಹಾಗಾಗಿ ಜನರು ಸಹ ಎಚ್ಚರಿಕೆ ವಹಿಸುವುದು ಉತ್ತಮ ಎಂದು ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಜನರಿಗೆ ಮನವಿ ಮಾಡಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)ವರದಿ: ಎ.ಟಿ.ವೆಂಕಟೇಶ್
Published by:Seema R
First published: