ತಮಿಳುನಾಡು (Tamilnadu) ಸಂಪರ್ಕಿಸುವ ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ (Dindigul National Highway) 948ರ ಸತ್ಯಮಂಗಲ ರಕ್ಷಿತಾರಣ್ಯದ ದಿಂಬಂ ಘಾಟ್ನಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ (Madras High Court) ಆದೇಶಿಸಿದೆ. ಕರ್ನಾಟಕ ಹಾಗೂ ತಮಿಳುನಾಡನ್ನು ಸಂಪರ್ಕಿ ಸುವ ಹೆದ್ದಾರಿ ಇದಾಗಿದ್ದು, ತಮಿಳುನಾಡಿನ ಬಣ್ಣಾರಿ ಮತ್ತು ಕಾರಾಪಾಳ್ಯ ನಡುವೆ ರಾತ್ರಿ 9 ರಿಂದ ಬೆಳಗ್ಗೆ 6ರವರೆಗೆ ವಾಹನ ಸಂಚಾರ ನಿಷೇಧ ವಾಗಲಿದೆ. ಈ ಆದೇಶ ಫೆ.10ರಿಂದಲೇ ಜಾರಿಗೆ ಬರಬೇಕೆಂದು ನ್ಯಾಯಾಧೀಶರು ನಿರ್ದೇಶನ ನೀಡಿರುವುದಾಗಿ ಲೈವ್ ಲಾ ವೆಬ್ಸೈಟ್ ವರದಿ ಮಾಡಿದೆ. ಈ ಹಿಂದೆ 2019ರಲ್ಲಿ ತಮಿಳುನಾಡಿನ ಈರೋಡ್ ಜಿಲ್ಲಾಧಿಕಾರಿ ರಾತ್ರಿ ಸಂಚಾರ ನಿಷೇಧ ಜಾರಿಗೊಳಿಸಿ ಆದೇಶಿಸಿದ್ದರು. ಆ ಆದೇಶದ ಪರಿಣಾಮಕಾರಿ ಅನುಷ್ಠಾನ ಕೇಳಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣಾ ಸಮಯ ದಲ್ಲಿ ಮದ್ರಾಸ್ ಹೈಕೋರ್ಟ್ ಈ ತೀರ್ಪು ನೀಡಿದೆ.
ಸತ್ಯಮಂಗಲ ಹೆದ್ದಾರಿಯಲ್ಲೂ ರಾತ್ರಿ ಸಂಚಾರ ನಿರ್ಬಂಧ?
ಈರೋಡ್ ಜಿಲ್ಲಾಧಿಕಾರಿಯವರು 2019ರ ಜನವರಿಯಲ್ಲೇ ಹೊರಡಿಸಿರುವ ರಾತ್ರಿ ಸಂಚಾರ ನಿಷೇಧ ಆದೇಶವನ್ನು ಪಾಲಿಸದೇ ತಮಿಳುನಾಡಿನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಲೋಪ ಎಸಗಿದ್ದಾರೆ ಎಂಬ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.
ಇದನ್ನೂ ಓದಿ: Bandipur: ಹುಲಿಗಳ ತಾಣ ಬಂಡೀಪುರದಲ್ಲಿ ಹೇಳೋರಿಲ್ಲ, ಕೇಳೋರಿಲ್ಲ; ಕಾಡಿಗೆ ಬೆಂಕಿ ಬಿದ್ರೆ ಹೊಣೆ ಯಾರು?
ರಾಷ್ಟ್ರೀಯ ಹೆದ್ದಾರಿ 948 ರಲ್ಲಿ ತಮಿಳುನಾಡಿನ ಬಣ್ಣಾರಿ ಮತ್ತು ಕಾರಾಪಾಳ್ಯ ನಡುವೆ ಸಂಜೆ 6ರಿಂದ ಬೆಳಗ್ಗೆ 6 ರವರೆಗೆ ವಾಣಿಜ್ಯ ವಾಹನ ಸಂಚರಿಸುವುದನ್ನು ಮತ್ತು ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ನಾಲ್ಕು ಚಕ್ರದ ವಾಹನಗಳು, ಲಘು ವಾಣಿಜ್ಯ ವಾಹನಗಳು ಮತ್ತು ಖಾಸಗಿ ವಾಹನ ಸಂಚಾರ ನಿರ್ಬಂಧಿಸಿ ಈರೋಡ್ ಜಿಲ್ಲಾಧಿಕಾರಿ ಆದೇಶಿಸಿದ್ದನ್ನು ಸ್ಮರಿಸಬಹುದು.
ರೈತ ಸಂಘದ ಜಿಲ್ಲಾಧ್ಯಕ್ಷರು ಹೇಳಿದ್ದೇನು?
ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, "ವನ್ಯಜೀವಿಗಳ ರಕ್ಷಣೆಗಾಗಿ ತಮಿಳುನಾಡು ಹೈಕೋರ್ಟ್ ದಿಂಬಂ ಘಾಟಿಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಿರುವುದು ಸರಿಯಲ್ಲ. ಶೇ 90 ರಷ್ಟು ತರಕಾರಿಗಳು ಈ ರಸ್ತೆ ಮೂಲಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಹೋಗುತ್ತದೆ. ಬೆಳಗಿನ ಜಾವ ತರಕಾರಿ ಕಟಾವು ಮಾಡಿ ಲೋಡ್ ಮಾಡುವ ತನಕ ಸಂಜೆಯಾಗುತ್ತದೆ. ಆಗ ರಸ್ತೆ ಬಂದ್ ಆದರೆ ಮಾರನೆಯ ದಿನಕ್ಕೆ ತರಕಾರಿಗಳು ಕೆಟ್ಟು ಹೋಗುತ್ತವೆ, ಹಾಳಾದ ತರಕಾರಿಗಳನ್ನು ಯಾರು ಖರೀದಿ ಮಾಡುವುದಿಲ್ಲ. ಆದ್ದರಿಂದ ಮದ್ರಾಸ್ ಹೈಕೋರ್ಟ್ ಆದೇಶದ ಮೊದಲು ಸಾರ್ವಜನಿಕರ ಹಿತರಕ್ಷಣೆ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಬೇಕಿತ್ತು" ಎಂದರು.
ಸಾಲುಗಟ್ಟಿನಿಂತ ವಾಹನಗಳು
ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕಿ. ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಇದಕ್ಕೆ ಜಗ್ಗದಿದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ: Chamarajanagar: ಗಡಿಜಿಲ್ಲೆಯಲ್ಲಿ ಗೋ ಹತ್ಯೆ , ದನದ ಮಾಂಸ ಮಾರಾಟ ದಂಧೆ ಬೆಳಕಿಗೆ
ಚಾಮರಾಜನಗರ ಜಿಲ್ಲೆಯಲ್ಲೂ ಜಾರಿ?
ತಮಿಳುನಾಡು ಚೆಕ್ ಪೋಸ್ಟ್ ನಲ್ಲಿ ರಾತ್ರಿ ವಾಹನಗಳನ್ನು ತಡೆಯುವುದರಿಂದ ಅವುಗಳು ರಾಜ್ಯದ ಗಡಿ ಭಾಗದಲ್ಲಿ ನಿಲ್ಲಬೇಕಾಗುತ್ತದೆ. ಆದರಿಂದ ಪ್ರಾಣಿಗಳ ಓಡಾಡಕ್ಕೆ ತೊಂದರೆಯಾಗಲಿದೆ. ಹೀಗಾಗಿ ರಾಜ್ಯದ ಅರಣ್ಯ ಇಲಾಖೆ ಕೂಡ ಬಿಆರ್ಟಿ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಹೆಚ್ಚಳವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ