Karnataka Night Curfew: ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ: ಸುಖಾ ಸುಮ್ಮನೆ ಓಡಾಡಿದ್ರೆ ಪೊಲೀಸರ ಕೈಗೆ ತಗ್ಲಾಕೊಳ್ಳೋದು ಗ್ಯಾರೆಂಟಿ

Night Curfew: ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಜನರನ್ನು ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ನೈಟ್ ಕರ್ಫ್ಯೂ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು‌ 10 ಗಂಟೆಗೆ ಎಲ್ಲಾ ಡಿಸಿಪಿಗಳನ್ನು‌ ಆಹ್ವಾನಿಸಿದ್ದು, ಸಭೆ ನಡೆಸಲಿದ್ದಾರೆ.

ನೈಟ್ ಕರ್ಫ್ಯೂ

ನೈಟ್ ಕರ್ಫ್ಯೂ

  • Share this:
ಬೆಂಗಳೂರು: ಹೊಸ ವರ್ಷ ಆಚರಣೆ (New Year Celebration) ಮತ್ತು ಓಮೈಕ್ರಾನ್ (Omicron Variant) ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ (Night Curfew) ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದೆ. ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಜನರನ್ನು ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ನೈಟ್ ಕರ್ಫ್ಯೂ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು‌ 10 ಗಂಟೆಗೆ ಎಲ್ಲಾ ಡಿಸಿಪಿಗಳನ್ನು‌ ಆಹ್ವಾನಿಸಿದ್ದು, ಸಭೆ ನಡೆಸಲಿದ್ದಾರೆ.  ಯಾವೆಲ್ಲ ಬಂದೋಬಸ್ತ್ ಮಾಡಿಕೊಂಡಿದ್ದೀರಿ, ಎಲ್ಲೆಲ್ಲಿ ಬ್ಯಾರಿಗೇಟ್ ಹಾಕಬೇಕು  ಅನ್ನೋದರ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ರಾತ್ರಿ 10 ಗಂಟೆ ನಂತರ ಬಹುತೇಕ ಎಲ್ಲಾ ಪ್ಲೈ ಓವರ್ ಗಳನ್ನು ಬಂದ್ ಮಾಡುವ ಸಾಧ್ಯತೆಗಳಿವೆ.

ಬಾರ್, ಪಬ್ , ರೆಸ್ಟೋರೆಂಟ್ ಗಳ ಮೇಲೆ ತೀವ್ರ ನಿಗಾ ಇರಿಸಬೇಕು. ಯಾವುದೇ ಕಾರಣಕ್ಕೂ ರಾತ್ರಿ 10 ಗಂಟೆ ಬಳಿಕ ಪಬ್ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಇರದಂತೆ ನೋಡಬೇಕು. 9 ಗಂಟೆಯಿಂದಲೇ ಮೈಕ್ ಮೂಲಕ ಅನೌನ್ಸ್ ಮಾಡುತ್ತಿರಬೇಕು. ಜೊತೆಗೆ ಹೊಯ್ಸಳಗಳು ಸದಾ ಗಸ್ತಿನಲ್ಲಿ ಇರುವಂತೆ ಪೊಲೀಸ್ ಕಮೀಷನರ್ ಈಗಾಗಲೇ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:  Dharwad: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರು ಅಪ್ರಾಪ್ತ ಬಾಲಕರ ಬಂಧನ

ನೈಟ್ ಕರ್ಪ್ಯೂ ವೇಳೆಯಲ್ಲಿ ಎನಿರುತ್ತೆ ಎನಿರಲ್ಲ.?

ನೈಟ್ ಕರ್ಪ್ಯೂ ವೇಳೆಯಲ್ಲಿ ರೋಗಿಗಳು ಮತ್ತು ಅವರ ಸಹಾಯಕರು ಓಡಾಡಬಹುದು. ತುರ್ತು ಸೇವೆಗಳು ಓಪನ್ ಇರಲಿದೆ

ಕಂಪನಿ ನೌಕರರು,‌ ಕಾರ್ಖಾನೆಯ ಕಾರ್ಮಿಕರು ಐಡಿ ಕಾರ್ಡ್ ತೋರಿಸಿ ಓಡಾಡಬಹುದು.

ಗೂಡ್ಸ್ ಸೇವೆ ಇರಲಿದೆ ಬಸ್ , ರೈಲು, ವಿಮಾನ ಸೇವೆ ಇರಲಿದೆ

ಬಸ್ ಟಿಕೆಟ್ ತೋರಿಸಿ ಓಡಾಟ ನಡೆಸಬಹುದು

ಎಲ್ಲಾ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ

ಅಗತ್ಯ ಸೇವೆ ಒದಗಿಸುವ ವಾಹನಕ್ಕೆ ಅನುಮತಿ

ಫುಡ್​ ಹೋಂ ಡೆಲಿವರಿಗೆ ಅನುಮತಿ

ಇ-ಕಾಮರ್ಸ್, ಖಾಲಿ ವಾಹನ ಸಂಚಾರಕ್ಕೆ ಅವಕಾಶ

ದೂರ ಪ್ರಯಾಣದ ಬಸ್​ಗಳಿಗೆ ಅನುಮತಿ

ಆಟೋ, ಕ್ಯಾಬ್​ಗೆ ಅವಕಾಶ

ನೈಟ್​ಕರ್ಪ್ಯೂ ವೇಳೆ ಬಾರ್, ಪಬ್ ಬಂದ್

ಲೇಟ್​ನೈಟ್ ಪಾರ್ಟಿ, ಸಮಾರಂಭಗಳಿಗೆ ಬ್ರೇಕ್

ಎಲ್ಲಾ ಫುಡ್ ಸ್ಟ್ರೀಟ್​​ಗಳು ಬಂದ್

ಪಬ್,ಬಾರ್, ಕ್ಲಬ್​​, ಹೋಟೆಲ್​ಗಳ್ಲಿ ಡಿಸೆಂಬರ್ 28ರಿಂದ 10 ದಿನ ಶೇ.50ರಷ್ಟು ಮಾತ್ರ ಅವಕಾಶ

ಸಿನೆಮಾ ಥಿಯೇಟರ್ ಬಂದ್

ಮುಂಜಾಗ್ರತಾ ಕ್ರಮಗಳೇನು?

ಓಮೈಕ್ರಾನ್ ಕೇಸ್ ಹೆಚ್ಚು ಹರಡಿದರೆ ಏನು ಮಾಡಬೇಕು ಎಂಬ ಬಗ್ಗೆ ಮುನ್ನಚ್ಚರಿಕಾ ಕ್ರಮದ ಬಗ್ಗೆ ಚರ್ಚೆಯಾಗಿದೆ.  ಓಮೈಕ್ರಾನ್ ಹೇಗೆ ಹರಡುತ್ತಿದೆ? ಹೊರರಾಜ್ಯ, ಹೊರ ದೇಶದಲ್ಲಿ ಹೇಗೆ ಹರಡುತ್ತಿದೆ ಎಂಬ ಕುರಿತು ಚರ್ಚೆಯಾಗಿದೆ. 4000 ಐಸಿಯು ತಯಾರಿದೆ. 7051 ಬೆಡ್​​ಗಳನ್ನು ಐಸಿಯು ಬೆಡ್​​ಗಳಾಗಿ ಪರಿವರ್ತನೆ ಮಾಡಲಾಗಿದೆ. ಅಷ್ಟೇ ಅಲ್ಲದೇ, 3091 ಹಾಸಿಗೆಗಳು ಕೊರೋನಾಗೆ ಹೆಚ್ಚುವರಿಯಾಗಿ ಮೀಸಲು ಇಡಲಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

ಇದನ್ನೂ ಓದಿ:  Karnataka Politics: ಇಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ, ಸಿಎಂ ಸ್ಥಾನದಿಂದ ಬೊಮ್ಮಾಯಿಗೆ ಕೊಕ್​?

ರಾಜ್ಯದಲ್ಲಿ ಹೊಸವರ್ಷಕ್ಕೆ ಹೊಸ ನಿಯಮ ಜಾರಿಯಾಗಲಿದೆ. ರಾಜ್ಯಾದ್ಯಂತ ಡಿ.28ರಿಂದ 10 ದಿನ ನೈಟ್ ಕರ್ಫ್ಯೂ ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಹೊಸ ವರ್ಷಾಚರಣೆ ನಿಷೇಧ ಮಾಡಲಾಗಿದೆ. ಪಬ್, ಬಾರ್, ಕ್ಲಬ್​​, ಹೋಟೆಲ್​ಗಳಲ್ಲಿ ಡಿಸೆಂಬರ್ 28 ರಿಂದ 10 ದಿನ ಶೇ.50ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಸಿನಿಮಾಗೆ 50% ಅನ್ವಯ ಆಗಲ್ಲ. ನೈಟ್ ಕರ್ಪ್ಯೂ ವೇಳೆ ಸಿನಿಮಾ ಬಂದ್ ಇರಲಿದೆ.  ಆಮೇಲೆ ಪರಿಸ್ಥಿತಿ ‌ನೋಡಿಕೊಂಡು ಸಿಎಂ  ತೀರ್ಮಾನ ಮಾಡ್ತಾರೆ ಎಂದು ಆರೋಗ್ಯ ಸಚಿವರು ಸುಧಾಕರ್ ಹೇಳಿದ್ದಾರೆ.
Published by:Mahmadrafik K
First published: