Night Curfew: ಬೆಂಗಳೂರಿನಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜೊತೆಗೆ 144 ಸೆಕ್ಷನ್​ ಜಾರಿ; ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳು ಬಂದ್

ನಗರದ ಎಲ್ಲಾ ಫ್ಲೈ ಓವರ್ ಮತ್ತು ಪ್ರಮುಖ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ನಿಯಮ ಮೀರಿದರೆ ಎಂಡಿಎಂಎ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಭದ್ರತೆಗಿರುವ ಪೊಲೀಸರಿಗೆ ಫೇಸ್ ಶೀಲ್ಡ್ ಹಾಕಲು ಸೂಚನೆ ನೀಡಲಾಗಿದೆ. ಅನಾವಶ್ಯಕವಾಗಿ ಓಡಾಟ ಮಾಡಿದ್ರೆ ಕೇಸ್ ಜೊತೆಗೆ ವಾಹನಗಳು ಸೀಜ್ ಆಗಲಿವೆ.

ನೈಟ್ ಕರ್ಫ್ಯೂ

ನೈಟ್ ಕರ್ಫ್ಯೂ

 • Share this:
  ಬೆಂಗಳೂರು(ಏ.10): ರಾಜ್ಯದಲ್ಲಿ ಕೊರೋನಾ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ, ಇಂದಿನಿಂದ ನೈಟ್​ ಕರ್ಫ್ಯೂ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಹೀಗಾಗಿ ಪೊಲೀಸ್ ಇಲಾಖೆಯೂ ಸಹ ನೈಟ್​ ಕರ್ಫ್ಯೂಗೆ ಸಿದ್ಧತೆ ನಡೆಸಿದೆ.  ಇಂದು ಮತ್ತೆ ಎಲ್ಲಾ ಡಿಸಿಪಿಗಳ ಜೊತೆ ಭದ್ರತೆ ವಿಚಾರವಾಗಿ ಪೊಲೀಸ್ ಕಮಿಷನರ್ ಚರ್ಚೆ ನಡೆಸಿದ್ದಾರೆ.  ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೂ ನೈಟ್​ ಕರ್ಫ್ಯೂ ಜೊತೆಗೆ 144 ಸೆಕ್ಷನ್ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ವೈದ್ಯಕೀಯ ಹಾಗೂ ತುರ್ತು ಸೇವೆಗಳಿಗೆ  ಮಾತ್ರ ಅವಕಾಶ‌‌ ಇರಲಿದೆ.

  ರಾತ್ರಿ ಪಾಳಿ ಕೆಲಸಕ್ಕೆ ಹೋಗುವವರು 10 ಗಂಟೆ ಅಷ್ಟರಲ್ಲಿ ಕ್ಯಾಂಪಸ್ ತಲುಪಬೇಕು. ನೈಟ್ ವೇಳೆ ಅನಾವಶ್ಯಕವಾಗಿ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ನೈಟ್ ವೇಳೆ ಫುಡ್ ಹೋಂ ಡೆಲಿವರಿಗೆ ಅವಕಾಶವಿದೆ. ಟ್ರಾವೆಲ್ ಮಾಡೋರಿಗೆ ಟಿಕೆಟ್ ಇರಲೇಬೇಕು. ನಗರದ ಎಲ್ಲಾ ಫ್ಲೈ ಓವರ್ ಮತ್ತು ಪ್ರಮುಖ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ನಿಯಮ ಮೀರಿದರೆ ಎಂಡಿಎಂಎ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಭದ್ರತೆಗಿರುವ ಪೊಲೀಸರಿಗೆ ಫೇಸ್ ಶೀಲ್ಡ್ ಹಾಕಲು ಸೂಚನೆ ನೀಡಲಾಗಿದೆ. ಅನಾವಶ್ಯಕವಾಗಿ ಓಡಾಟ ಮಾಡಿದ್ರೆ ಕೇಸ್ ಜೊತೆಗೆ ವಾಹನಗಳು ಸೀಜ್ ಆಗಲಿವೆ.

  ಇನ್ನು, ನಗರದ ಪ್ರಮುಖ ರಸ್ತೆಗಳು  ಹಾಗೂ ಮೇಲ್ಸೇತುವೆಗಳು ರಾತ್ರಿ 9.30ಕ್ಕೆ ಬಂದ್ ಆಗಲಿವೆ.  ನಾಕಾಬಂದಿ ಹಾಕಿರೋ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನ ಹೆಚ್ಚು ಮಾಡಲಾಗಿದೆ. ಹಾಗಾದರೆ ಬೆಂಗಳೂರಿನ ಯಾವ ಯಾವ ವಿಭಾಗದಲ್ಲಿ ಎಲ್ಲೆಲ್ಲಿ ನಾಕಾಬಂದಿ ಇರುತ್ತೆ ಗೊತ್ತಾ?

  ಆಗ್ನೇಯ ವಿಭಾಗ
  * ವೀರಸಂದ್ರ ಚೆಕ್ ಪೋಸ್ಟ್
  * ಬೋಮ್ಮನಹಳ್ಳಿ ಚೆಕ್ ಪೋಸ್ಟ್
  * ಸಿಲ್ಕ್ ಬೋರ್ಡ್
  * ಮಡಿವಾಳ
  * ಸೆಂಟ್ಸ್ ಜಾನ್ಸ್
  * ಆಡುಗೋಡಿ ಜಂಕ್ಷನ್
  * ಕೋರಮಂಗಲ ಎನ್ ಜಿವಿ ಕಾಂಪ್ಲೆಕ್ಸ್

  ಪಶ್ಚಿಮ ವಿಭಾಗ
  *ಮಾರುಕಟ್ಟೆ ಮೇಲ್ಸೇತುವೆ
  * ಮಾರುಕಟ್ಟೆ ಸರ್ಕಲ್
  * ಮೈಸೂರು ರಸ್ತೆ‌
  * ಕೆಂಗೇರಿ ಮುಖ್ಯರಸ್ತೆ
  * ಕೆ.ಪಿ ಅಗ್ರಹಾರ
  * ಮಾಗಡಿ ರೋಡ್

  ಪ್ರವಾಸಿ ತಾಣಗಳಲ್ಲಿ ಕೊರೋನಾ ಜಾಗೃತಿ ಮೂಡಿಸಲು ಪ್ರವಾಸಿ ಮಿತ್ರರನ್ನು ನೇಮಿಸಿದ ಚಾಮರಾಜನಗರ ಜಿಲ್ಲಾಡಳಿತ

  ಈಶಾನ್ಯ ವಿಭಾಗ
  * ಏರ್ಪೋರ್ಟ್ ರೋಡ್
  * ಹೆಬ್ಬಾಳ ಮೇಲ್ಸೇತುವೆ
  * ಸಂಪಿಗೆ ಹಳ್ಳಿ
  * ವಿದ್ಯಾರಣ್ಯಪುರ ಸರ್ಕಲ್
  * ಬಿಇಎಲ್ ಸರ್ಕಲ್
  *ಯಲಹಂಕ ಮುಖ್ಯರಸ್ತೆ

  ಪೂರ್ವ ವಿಭಾಗ
  * ಟ್ರಿನಿಟಿ ಸರ್ಕಲ್
  *ಬಿಆರ್ವಿ ಜಂಕ್ಷನ್
  * ನಾಗವಾರ ಜಂಕ್ಷನ್
  * ಬಾಣಸವಾಡಿ
  * ಕಮ್ಮನಹಳ್ಳಿ ರೋಡ್
  * ಮಣಿಪಾಲ್ ಹಾಸ್ಪಿಟಲ್ ಜಂಕ್ಷನ್
  * ಒಲ್ಡ್ ಏರ್ಪೋರ್ಟ್ ರೋಡ್

  ಕೇಂದ್ರ ವಿಭಾಗ
  *ಕೆ. ಆರ್ ಸರ್ಕಲ್ ,
  * ಟೌನ್ ಹಾಲ್
  * ಚಿನ್ನಸ್ವಾಮಿ ಸ್ಟೇಡಿಯಂ ರೋಡ್
  * ಕಾರ್ಪೋರೇಷನ್ ಸರ್ಕಲ್

  ಉತ್ತರ ವಿಭಾಗದ
  *ಯಶವಂತಪುರ ಸರ್ಕಲ್
  * ತುಮಕೂರು ರಸ್ತೆ
  * ಗಂಗಮ್ಮಗುಡಿ ಸರ್ಕಲ್
  * ಗೋರಗುಂಟೆ ಪಾಳ್ಯ
  * ಪೀಣ್ಯ

  ನಗರದ ಎಲ್ಲಾ ಪ್ರಮುಖ ರಸ್ತೆಗಳು ಹಾಗೂ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುತ್ತೆ.
  Published by:Latha CG
  First published: