ವೀಕೆಂಡ್​ ಬಂತು‌ ಅಂದ್ರೆ ಈ ಏರಿಯಾದಲ್ಲಿ ನೈಟ್ ಪಾರ್ಟಿ; ನೈಜೀರಿಯಾ ಪ್ರಜೆಗಳಿಂದ ಬೇಸತ್ತು ಹೋಗಿರುವ ಜನರು

ಇನ್ನೂ ಇದಲ್ಲದೆ ಅನೈತಿಕ ಚಟುವಟಿಕೆಗಳು ಮತ್ತು ಗಾಂಜಾ ಸೇವಿಸೋ ಕೃತ್ಯಗಳನ್ನೂ ಎಸಗುತ್ತಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.  ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪೊಲೀಸರ ಮೇಲೆಯೆ ಹಲ್ಲೆಗೆ ಯತ್ನಿಸಿದ್ದಲ್ಲದೇ ವಾಗ್ವಾದ ನಡೆಸಿದರು.

news18-kannada
Updated:August 3, 2020, 10:27 PM IST
ವೀಕೆಂಡ್​ ಬಂತು‌ ಅಂದ್ರೆ ಈ ಏರಿಯಾದಲ್ಲಿ ನೈಟ್ ಪಾರ್ಟಿ; ನೈಜೀರಿಯಾ ಪ್ರಜೆಗಳಿಂದ ಬೇಸತ್ತು ಹೋಗಿರುವ ಜನರು
ನೈಟ್ ಪಾರ್ಟಿ ಮಾಡುತ್ತಿರುವ ನೈಜೀರಿಯನ್ ಪ್ರಜೆಗಳು
  • Share this:
ಬೆಂಗಳೂರು(ಆ.03): ವಿದೇಶಗಳಿಂದ ಭಾರತಕ್ಕೆ ಯಾರೇ ಬಂದ್ರೂ ಅತಿಥಿ ದೇವೋ ಭವ ಅಂತ ನಮ್ಮವರು ನಡೆಸಿಕೊಳ್ತಾರೆ. ಅದರಲ್ಲೂ ಕರ್ನಾಟಕದ ಮಂದಿ ಬಂದವರ ಜೊತೆ ಬೆರೆತು ಹೋಗ್ತಾರೆ. ಅಂತಹ ಕನ್ನಡಿಗರ ಕಣ್ಣಿಗೆ ಒಂದಷ್ಟು ವಿದೇಶಿಯರು ಈಗ ವಿಲನ್​ಗಳಾಗಿದ್ದಾರೆ. ಅರೇ ಯಾರವರು ಅಂತೀರಾ ಸ್ಟೋರಿ ಓದಿ.

ಹೌದು,  ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನೈಜಿರಿಯನ್ ಪ್ರಜೆಗಳ ಕಿರಿಕ್ ಇದೇನು ಮೊದಲೇನಲ್ಲ.‌ ಸದಾ ಒಂದಿಲ್ಲೊಂದು ಕಿರಿಕ್ ಮಾಡ್ತಾನೆ ಇರ್ತಾರೆ. ಆದ್ರೆ ಇವ್ರ ಕಿರಿಕ್ ನ್ನು ಪದೇ ಪದೇ ಸಹಿಸಿಕೊಳ್ಳುತ್ತಿದ್ದ ರಾಜಧಾನಿ ಜನರು ಈಗ ತಿರುಗಿ ಬಿದ್ದಿದ್ದಾರೆ. ಹೌದು ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಣ್ಣ ಬಡಾವಣೆಯಲ್ಲಿ ವೀಕೆಂಡ್ ಆದ್ರೆ ಸಾಕು ನೈಜೀರಿಯಾ ಪ್ರಜೆಗಳ ಅವಾಂತರ ಹೇಳತೀರದು. ಮೊನ್ನೆ ರಸ್ತೆಯಲ್ಲಿಯೇ ಪಾರ್ಟಿ ಮಾಡಿರುವ ವ್ಯಕ್ತಿಗಳು ರಾತ್ರಿ ಇಡೀ ಅಲ್ಲಿದ್ದವರಿಗೆ ಹಾವಳಿ ಇಟ್ಟಿದ್ದಾರೆ.

ಇನ್ನೂ ಇದಲ್ಲದೆ ಅನೈತಿಕ ಚಟುವಟಿಕೆಗಳು ಮತ್ತು ಗಾಂಜಾ ಸೇವಿಸೋ ಕೃತ್ಯಗಳನ್ನೂ ಎಸಗುತ್ತಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.  ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಪೊಲೀಸರ ಮೇಲೆಯೆ ಹಲ್ಲೆಗೆ ಯತ್ನಿಸಿದ್ದಲ್ಲದೇ ವಾಗ್ವಾದ ನಡೆಸಿದರು.

Karnataka Health Bulletin: ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 4752 ಹೊಸ ಕೊರೋನಾ ಪ್ರಕರಣಗಳ ಪತ್ತೆ, 98 ಜನ ಸಾವು!

ಈ ಹಿನ್ನಲೆಯಲ್ಲಿ ಒಟ್ಟು ಒಬ್ಬ ಎಸಿಪಿ ನಾಲ್ವರು ಪೊಲೀಸ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಒಟ್ಟು 30 ಜನರನ್ನ ಬಂಧಿಸಿದ್ದಾರೆ. ಸದ್ಯ ಅವರನ್ನ ವಿಚಾರಣೆಗೊಳಪಡಿಸಿ ಅವರ ಬಳಿ ವೀಸಾದ ಅವಧಿ, ಅವರು ಮಾಡುತ್ತಿರುವ ಕೆಲಸಗಳೇನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

ಒಟ್ಟಿನಲ್ಲಿ ಲಾಕ್ ಡೌನ್ ಮುಗಿದ ಕೂಡಲೇ ಮೋಜು‌ ಮಸ್ತಿ ಅಂತ ರೋಡಿಗೆ ಬಂದ ನೈಜಿರಿಯಾ ಪ್ರಜೆಗಳಿಗೆ ಪೊಲೀಸ್ ಬಿಸಿ ಮುಟ್ಟಿಸಿದ್ದು ಇನ್ನಾದರೂ ಬುದ್ದಿ ಕಲಿತಾರಾ ಕಾದು ನೋಡಬೇಕಿದೆ.
Published by: Latha CG
First published: August 3, 2020, 10:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading