• Home
  • »
  • News
  • »
  • state
  • »
  • ಆರ್​.ಅಶೋಕ್​ಗೂ ಮುಖ್ಯಮಂತ್ರಿಯಾಗುವ ಯೋಗವಿದೆ; ಭವಿಷ್ಯ ನುಡಿದ ನಿಡುಮಾಮಿಡಿ ಶ್ರೀ

ಆರ್​.ಅಶೋಕ್​ಗೂ ಮುಖ್ಯಮಂತ್ರಿಯಾಗುವ ಯೋಗವಿದೆ; ಭವಿಷ್ಯ ನುಡಿದ ನಿಡುಮಾಮಿಡಿ ಶ್ರೀ

 ಸಚಿವ ಆರ್​ ಅಶೋಕ್​​

ಸಚಿವ ಆರ್​ ಅಶೋಕ್​​

ಅಶೋಕ್​ ಜನರ ಜೊತೆ ಇರುವವರು. ಹೀಗಾಗಿ ಮುಂದೆ ಅವರಿಗೆ ಸಿಎಂ ಆಗುವ ಯೋಗ ಲಭಿಸಲಿದೆ-ನಿಡುಮಾಮಿಡಿ ಶ್ರೀಗಳು

  • Share this:

ಬೆಂಗಳೂರು (ಜ.28): ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಸಚಿವ ಆರ್​. ಅಶೋಕ್​ಗೆ ಮುಂದೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ನಿಡುಮಾಮಿಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. 


ನಿಡುಮಾಮಿಡಿ ಮಠದ ಜಚನಿ ಸಂಶೋಧನೆ ಮತ್ತು ಅಧ್ಯಯನ ಪೀಠ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳು, ಅಶೋಕ್​ ಜನರ ಜೊತೆ ಇರುವವರು. ಹೀಗಾಗಿ ಮುಂದೆ ಅವರಿಗೆ ಸಿಎಂ ಆಗುವ ಯೋಗ ಲಭಿಸಲಿದೆ. ಯಡಿಯೂರಪ್ಪ ಅವರಂತೆ ಇವರಿಗೂ ಪಕ್ಷ ನಿಷ್ಠೆ ಇದ್ದು, ಮುಂದೆ ಅವರು ಸಿಎಂ ಆಗುವ ಎಲ್ಲಾ ಲಕ್ಷಣ ಇದೆ ಎಂದರು.


ಸ್ವಾಮೀಜಿಗಳ ಈ ಮಾತನ್ನು ಕೇಳಿದ ಆರ್​. ಅಶೋಕ್​ ಖುಷಿಯಿಂದ ಕೆನ್ನೆ ಮೇಲೆ ಕೈ ಇಟ್ಟುಕೊಂಡು ಅಚ್ಚರಿ ಪಡಿಸುವುದರ ಜೊತೆ ಮುಸಿ ಮುಸಿ ನಕ್ಕರು.


ಯಡಿಯೂರಪ್ಪರನ್ನು ಹಾಡಿ ಹೊಗಳಿದ ಶ್ರೀಗಳು


ಲಿಂಗಾಯತ ಸಮುದಾಯದ ಅನೇಕ ಮುಖ್ಯಮಂತ್ರಿಗಳನ್ನು ನಾಡು ಕಂಡಿದೆ. ಆದರೆ, ವೀರಶೈವ ಸಮುದಾಯವರು ನಮ್ಮ ಸಮುದಾಯದ ನಾಯಕ ಎಂದು ಯಡಿಯೂರಪ್ಪ ಅವರನ್ನು ಮಾತ್ರ ಗುರುತಿಸುತ್ತಾರೆ. ಹೀಗಾಗಿ ಅವರನ್ನು ಪೂರ್ಣಾವಧಿ ಅಧಿಕಾರ ಪೂರೈಸಲು ಬಿಡಬೇಕು. ಇದಕ್ಕೆ ಪಕ್ಷದ ನಾಯಕರು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.


ಮುಖ್ಯಮಂತ್ರಿಯಾಗಿ ಹೆಚ್ಚು ಸವಾಲು, ಸಂಕಷ್ಟ, ಸಂಕಟಗಳನ್ನು ಹೆಚ್ಚು ಅನುಭವಿಸಿದವರಲ್ಲಿ ಎಸ್​.ಎಂ ಕೃಷ್ಣ ಬಳಿಕ ಯಡಿಯೂರಪ್ಪನವರು. ಆದರೆ, ಈಗ ಆ ಎಲ್ಲಾ ಸವಾಲುಗಳನ್ನು ಎದುರಿಸಿ ಯಡಿಯೂರಪ್ಪ ಸಮರ್ಥ ಆಡಳಿತ ನಡೆಸುತ್ತಿದ್ದಾರೆ. ಈ ಬಾರಿಯಾದರೂ ಅವರಿಗೆ ಪೂರ್ಣಾವಧಿ ಅಧಿಕಾರ ಪೂರೈಸಲು  ಪಕ್ಷದವರು ಅವಕಾಶ ಮಾಡಿಕೊಡಬೇಕು ಎಂದರು.


ಇದನ್ನು ಓದಿ: ನಾಳೆಯಲ್ಲ, ಜ. 31ರಂದು ಬಿಎಸ್​ವೈ ಸಂಪುಟ ವಿಸ್ತರಣೆ ಸಾಧ್ಯತೆ


ಶ್ರೀರಾಮ ತಂದೆಗೆ ಕೊಟ್ಟ ಮಾತನ್ನು ನಡೆಸಿಕೊಟ್ಟ ರಾಮನ ರೀತಿ ಯಡಿಯೂರಪ್ಪನವರು ವಚನ ನಡೆಸಿಕೊಡುತ್ತಾರೆ. ಅವರಿಗೆ ನೂತನ ಶಾಸಕರು ಸಹಕಾರ ನೀಡಿ, ಸಮಾಧಾನದಿಂದ ವರ್ತಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.


ಮಠಗಳಿಗೆ ಸಹಾಯ ಮಾಡುವ ಪರಂಪರೆ ತಂದವರು ಯಡಿಯೂರಪ್ಪ. ಈ ಬಾರಿಯ ಬಜೆಟ್ ನಲ್ಲೂ ಆ ಕಾರ್ಯ ಮಾಡುತ್ತಾರೆ ಎಂಬ ಭರವಸೆ ಇದೆ ಎಂದರು.

Published by:Seema R
First published: