NIA Raids: ಮಂಗಳೂರಿನ PFI, SDPI ಕಚೇರಿ ಮೇಲೆ ಎನ್​ಐಎ ದಾಳಿ; ಅರೆ ಮೀಸಲು ಪಡೆಯಿಂದ ಭದ್ರತೆ

ಬೆಳಗಿನ ಜಾವ 3.30ರ ವೇಳೆಗೆ ಒಟ್ಟು 8 ಕಡೆ NIA ಟೀಂ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂಜಾಗ್ರತ ಕ್ರಮವಾಗಿ ನೆಲ್ಲಿಕಾಯಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಅರೆ ಮೀಸಲು ಪಡೆಯಿಂದ ಭದ್ರತೆಯನ್ನು ಕಲ್ಪಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಂಗಳೂರಿನ(Mangaluru) ಪಿಎಫ್ಐ (Popular Front of India), ಎಸ್​ಡಿಪಿಐ (Social Democratic Party of India) ಕಛೇರಿ (PFI And SDPI Office) ಮೇಲೆ ಬೆಳಗಿನ ಜಾವ NIA ರೇಡ್ (NIA Raid) ನಡೆದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಛೇರಿ ಮೇಲೆ ದಾಳಿ ನಡೆದಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸದ್ಯ ಎನ್​ ಎ ದಾಳಿ ಖಂಡಿಸಿ ಪಿಎಫ್ಐ ಕಾರ್ಯಕರ್ತರಿಂದ (PFI Activist) ಪ್ರತಿಭಟನೆ ನಡೆಯುತ್ತಿದೆ. ಬೆಳಗಿನ ಜಾವ 3.30ರ ವೇಳೆಗೆ ಒಟ್ಟು 8 ಕಡೆ NIA ಟೀಂ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂಜಾಗ್ರತ ಕ್ರಮವಾಗಿ ನೆಲ್ಲಿಕಾಯಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಅರೆ ಮೀಸಲು ಪಡೆಯಿಂದ ಭದ್ರತೆಯನ್ನು ಕಲ್ಪಸಲಾಗಿದೆ.

    ನೆಲ್ಲಿಕಾಯಿ ರಸ್ತೆಯಲ್ಲಿ ಎಸ್​ಡಿಪಿಐ ಕಾರ್ಯಕರ್ತರ ಪ್ರತಿಭಟನೆ ಹಿನ್ನಲೆ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನಲ್ಲಿ ಎನ್ಐಎ ದಾಳಿ

    ರಾಜಧಾನಿ ಬೆಂಗಳೂರಿನ ಜೆಸಿ ನಗರ PFI ಕಚೇರಿಯ ಮೇಲೆಯೂ ದಾಳಿ ನಡೆದಿದೆ. PFI ರಾಷ್ಟ್ರೀಯ ಕಾರ್ಯದರ್ಶಿ ಶಾಕಿಬ್ ಮನೆಗೆ ಎನ್​ಐಎ ಟೀಂ ಎಂಟ್ರಿ ಕೊಟ್ಟಿದೆ. ಶಿವಾಜಿ ನಗರ, ಪುಲಿಕೇಶಿ ನಗರದ PFI ಕಚೇರಿ ಹಾಗೂ ನಾಯಕರ ನಿವಾಸಗಳ ಮೇಲೆ ಎನ್​​ಐಎ ಟೀಂ ದಾಳಿ ನಡೆಸಿದೆ.

    ಎರಡು ವರ್ಷದಿಂದ ಎನ್​ಐಎ ಹದ್ದಿನ ಕಣ್ಣು

    ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಕಣ್ಣೂರ್ ಮುಖ್ಯರಸ್ತೆಯಲ್ಲಿರುವ ರಾಗಾ ಅಪಾರ್ಟ್‌ಮೆಂಟ್​​ನಲ್ಲಿ ವಾಸವಾಗಿರುವ ಓರ್ವ ಪಿಎಫ್​ಐ ಕಾರ್ಯಕರ್ತನ ಮನೆಗೆ ಎನ್​ಐಎ ಟೀಂ ಎಂಟ್ರಿ ಬೆಳಗಿನ ಜಾವ 3.30ಕ್ಕೆ ಎಂಟ್ರಿ ಕೊಟ್ಟಿದೆ. ಕಳೆದ ಎರಡು ವರ್ಷದಿಂದ ಪಿಎಫ್ ಐ ಕಾರ್ಯಕರ್ತರ ಮೇಲೆ ಎನ್ ಐಎ ಟೀಮ್ ಹದ್ದಿನ ಕಣ್ಣು ಇಟ್ಟಿತ್ತು.

    ರಾಷ್ಟ್ರವ್ಯಾಪಿ ನಡೆದಿದೆ ದಾಳಿ 

    ಪಾಪ್ಯುಲರ್ ಫ್ರಂಟ್ ಸಂಸ್ಥೆಗಳು (Popular Front Of India) ನಾಯಕರ ಮನೆಗಳ ಮೇಲೆ ರಾಷ್ಟ್ರವ್ಯಾಪಿ ದಾಳಿ NIA ದಾಳಿ ನಡೆಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಮಧ್ಯರಾತ್ರಿ ಬಳಿಕ ಈ ದಾಳಿ ಆರಂಭಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ದಾಳಿ ನಡೆಯುತ್ತಿದ್ದು, ಅದರಲ್ಲೂ ವಿಶೇಷವಾಗಿ ಆಂಧ್ರ ಪ್ರದೇಶ ಮತ್ತು ಸ್ಥಳೀಯ ನಾಯಕರ ಮನೆಗಳ ಮೇಲೆ ಅಧಿಕಾರಿಗಳು ರೇಡ್ ನಡೆಸುತ್ತಿದ್ದಾರೆ.

    ಇದನ್ನೂ ಓದಿ:  Traffic Police Awareness: ವಾಹನಗಳನ್ನು ಮಾರೋ ಮುನ್ನ ಎಚ್ಚರ; ಈ ರೂಲ್ಸ್ ಫಾಲೋ ಮಾಡದಿದ್ರೆ ಕಾದಿದೆ ಗಂಡಾಂತರ!

    ಶಿವಮೊಗ್ಗ ಪ್ರಕರಣ

    ಶಿವಮೊಗ್ಗದಲ್ಲಿ ಇಬ್ಬರು ಶಂಕಿತರ ಬಂಧನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಮತ್ತೊಬ್ಬ ಶಂಕಿತನಿಗಾಗಿ ಬಲೆ ಬೀಸಿದ್ದಾರೆ.  ನಿನ್ನೆ ಇಬ್ಬರು ಶಂಕಿತರನ್ನ ಮೂರು ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದ ಶಿವಮೊಗ್ಗ ಪೊಲೀಸರು, ಮಹತ್ವದ ಸಾಕ್ಷ್ಯಧಾರ ಕಲೆ ಹಾಕಿದ್ದಾರೆ.

    ಮೋಸ್ಟ್ ವಾಂಟೆಡ್‌ ಉಗ್ರ ಮತೀನ್ ಜೊತೆ ಲಿಂಕ್ ಇತ್ತಾ?

    ಇನ್ನೂ ಮಹಜರು ವೇಳೆ ಐಇಡಿ ಸ್ಫೋಟಕ ದೊರೆತಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿದ್ದು,  ಇದನ್ನ ಎಲ್ಲಿಂದ ತಂದರೂ, ಕೊಟ್ಟವರು ಯಾರೂ ಎಂದು ತನಿಖೆ ತೀವ್ರಗೊಂಡಿದೆ. ಇನ್ನೂ ಅರೆಸ್ಟ್ ಆದ ಇಬ್ಬರು ಶಂಕಿತರಿಗಾಗಿ ಮೋಸ್ಟ್ ವಾಂಟೆಡ್‌ ಉಗ್ರ ಮತೀನ್ ಸಂಪರ್ಕವಿತ್ತು ಎನ್ನಲಾಗಿದೆ. ಇನ್ನೂ ನಿನ್ನೆ ಶಂಕಿತರಿಗೆ ಪೊಲೀಸರು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ರು.

    ಇದನ್ನೂ ಓದಿ :  Chikkamagaluru: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ; ಮಗಳ ಅಂಗಾಂಗ ದಾನಕ್ಕೆ ಮುಂದಾದ ಪೋಷಕರು

    ADGP  ಅಲೋಕ್ ಕುಮಾರ್ ಹೇಳಿಕೆ

    ಶಿವಮೊಗ್ಗ ಕೇಸ್ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ADGP  ಅಲೋಕ್ ಕುಮಾರ್ ಹೇಳಿದ್ದಾರೆ. ಈಗಾಗಲೇ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.  ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್​​ಗೆ  ಚಾಕು ಇರಿತ ಅಗಿತ್ತು. ಆ ಬಳಿಕ ಜಬಿಉಲ್ಲಾ ಎಂಬಾತನನ್ನು ಅರೆಸ್ಟ್ ಮಾಡಲಾಗಿ ಯಾಸೀನ್ ಸಂಪರ್ಕ ಇರುವುದು ಪತ್ತೆಯಾಯ್ತು. ವಿಚಾರಣೆ ವೇಳೆ ಉಗ್ರರ ಲಿಂಕ್ ಇರುವುದು ಗೊತ್ತಾಯ್ತು ಎಂದಿದ್ದಾರೆ.
    Published by:Mahmadrafik K
    First published: