ನಿಷೇಧಿತ ಪಿಎಫ್ಐ (PFI) ಸಂಘಟನೆ ಕಾರ್ಯಕರ್ತರಿಂದ ಭಯೋತ್ಪಾದನೆ ಚಟುವಟಿಕೆ ಹಿನ್ನೆಲೆ ಎನ್ಐಎ ಅಧಿಕಾರಿಗಳು (NIA Officers) ಕೇರಳ ಹಾಗೂ ಕಲಬುರಗಿಯಲ್ಲಿ (Kerala And Kalaburagi) ಶೋಧ ನಡೆಸಿದ್ದಾರೆ. ಕೇರಳದ ಕೋಝಿಕ್ಕೋಡ್ ಜಿಲ್ಲೆ ಮತ್ತು ಕರ್ನಾಟಕದ ಕಲಬುರಗಿ ಜಿಲ್ಲೆಯ ಮೂರು ಸ್ಥಳಗಳಲ್ಲಿ ಎನ್ಐಎ ಟೀಂ ಶೋಧ ಕಾರ್ಯ ನಡೆಸಿರುವ ಮಾಹಿತಿ ಲಭ್ಯವಾಗಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪದಾಧಿಕಾರಿಗಳಿಂದ ಶಾಂತಿಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೇರಳ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ ಮತ್ತು ದೆಹಲಿ ಇತ್ಯಾದಿ ರಾಜ್ಯಗಳಲ್ಲಿ ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆ ಕಾರ್ಯಕರ್ತರಿಗೆ ತರಬೇತಿ ನೀಡಲು ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿ ವೇಳೆ ಡಿಜಿಟಲ್ ಸಾಕ್ಷ್ಯ ಹಾಗೂ ಕೆಲ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹಣ ಸಂಗ್ರಹಣೆಗೆ ಮುಂದಾಗಿರುವ ಪಿಎಫ್ಐ
ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ನಿಷೇಧಿತ ಸಂಘಟನೆ ಮುಂದಾಗಿತ್ತು. ಪಿಎಫ್ಐನ ಪದಾಧಿಕಾರಿಗಳು, ಸದಸ್ಯರು ಮತ್ತು ಕಾರ್ಯಕರ್ತರು ಭಾರತ ಹಾಗೂ ವಿದೇಶಗಳಿಂದ ಹಣ ಸಂಗ್ರಹಿಸಲು ಸಂಚು ರೂಪಿಸಿದ್ದ ಹಿನ್ನೆಲೆ ಈ ದಾಳಿ ನಡೆದಿದೆ.
ತರಬೇತಿ ಶಿಬಿರ ಆಯೋಜನೆ
ಆರೋಪಿಗಳು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ತಮ್ಮ ಕಾರ್ಯಕರ್ತರಿಗೆ ತರಬೇತಿ ನೀಡಲು ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದು ಎನ್ಐಎ ಮಾಹಿತಿ ನೀಡಿದೆ.
ಶಿವಮೊಗ್ಗದಲ್ಲಿ ವಿವಾದಾತ್ಮಕ ಗೋಡೆ ಬರಹ
ಶಿವಮೊಗ್ಗದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (Popular front of india) ಅಂಗಸಂಸ್ಥೆಯಾಗಿರುವ ಸಿಎಫ್ಐ (CFI- Campus Front of India ) ಸೇರುವಂತೆ ವಿವಾದಾತ್ಮಕ ಬರಹ ಬರೆಯಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ (Shiralakoppa, Shivamogga) JOIN CFI ಎಂದು ಗೋಡೆ ಬರಹ ಬರೆಯಲಾಗಿದೆ. ಪಟ್ಟಣದ 9ಕ್ಕೂ ಹೆಚ್ಚು ಕಡೆ ನೀಲಿ, ಕೆಂಪು ಬಣ್ಣದ ಸ್ಪ್ರೇಯಿಂದ ಬರೆದು ಸ್ಟಾರ್ ಇಡಲಾಗಿತ್ತು.
ನವೆಂಬರ್ 28ರಂದು ಪೊಲೀಸರು ಗಸ್ತು ತಿರುಗುವಾಗ ಗೋಡೆ ಬರಹ ಬೆಳಕಿಗೆ ಬಂದಿತ್ತು. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪಿಎಫ್ಐನ ಅಂಗಸಂಸ್ಥೆ ಸಿಎಫ್ಐ ವಿದ್ಯಾರ್ಥಿ ಸಂಘಟನೆಯಾಗಿದೆ.ಪಿಎಫ್ಐ, ಸಿಎಫ್ಐ ನಿಷೇಧಿತ ಸಂಘಟನೆಗಳಾಗಿವೆ.
ಇದನ್ನೂ ಓದಿ: ಮಂಗಳೂರಿನಲ್ಲಿ ವಿವಾದಾತ್ಮಕ ಗೋಡೆಬರಹ; ಆರೋಪಿಗಳನ್ನು ಪತ್ತೆಹಚ್ಚಿ ಬೇರೆ ದೇಶಕ್ಕೆ ಬಿಡಿ ಎಂದ ಯುಟಿ ಖಾದರ್
ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ
ಕಡಲನಗರಿ ಮಂಗಳೂರಿನಲ್ಲಿ ಕಿಡಿಗೇಡಿಗಳು ಉಗ್ರ ಸಂಘಟನೆಯ ಪರ ಬರಹ ಬರೆಯಲಾಗಿತ್ತು. ಲಷ್ಕರ್ ಉಗ್ರರನ್ನು ಕರೆಸುವುದಾಗಿ ಬೆದರಿಕೆಯ ಬರೆಹದ ಜೊತೆಗೆ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿತ್ತು
PFIನ ಮಿತ್ರ ಸಂಘಟನೆಗಳ ಮೇಲೆ ನಿಷೇಧ
ಗೃಹ ಸಚಿವಾಲಯವು PFI ಅನ್ನು 5 ವರ್ಷಗಳ ಕಾಲ ನಿಷೇಧಿತ ಸಂಘಟನೆ ಎಂದು ಘೋಷಿಸಿದೆ. ಪಿಎಫ್ ಐ ಹೊರತಾಗಿ 8 ಅಂಗ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: PFI Training Centre: ಪಿಎಫ್ಐ ರಾಜ್ಯಮಟ್ಟದ ತರಬೇತಿ ಕೇಂದ್ರ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಕ್ಲೋಸ್?
PFI ಹೊರತಾಗಿ, ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ , ಕೇರಳದಂತಹ ಮಿತ್ರ ಸಂಘಟನೆಗಳನ್ನೂ ನಿಷೇಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ