• Home
  • »
  • News
  • »
  • state
  • »
  • NIA Raid: ಹುಬ್ಬಳ್ಳಿಯಲ್ಲಿ ಎನ್​ಐಎ ದಾಳಿ, ಎಸ್​ಡಿಪಿಐ ಮುಖಂಡ ಹೇಳಿದ್ದೇನು?

NIA Raid: ಹುಬ್ಬಳ್ಳಿಯಲ್ಲಿ ಎನ್​ಐಎ ದಾಳಿ, ಎಸ್​ಡಿಪಿಐ ಮುಖಂಡ ಹೇಳಿದ್ದೇನು?

NIA ದಾಳಿ

NIA ದಾಳಿ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎನ್.ಐ.ಎ. ತಂಡ ದಾಳಿ ಮಾಡಿದ್ದು, ಎಸ್.ಡಿ.ಪಿ.ಐ. ಮುಖಂಡ ಇಸ್ಮಾಯಿಲ್ ತೀವ್ರ ವಿಚಾರಣೆ ನಡೆಸಿದೆ. ಆತನ ಮಗನ ಬಗ್ಗೆ ಕೆಲ ಶಂಕೆ ವ್ಯಕ್ತಪಡಿಸಿರೋ ಎನ್.ಐ.ಎ ಪುತ್ರನೊಂದಿಗೆ ಬೆಂಗಳೂರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ನ.05): ಹುಬ್ಬಳ್ಳಿಯಲ್ಲಿ ಎನ್ಐಎ ದಾಳಿ (NIA Raid) ಮಾಡಿದೆ. ಹಳೇ‌ ಹುಬ್ಬಳ್ಳಿಯ ನೂರಾನಿ ಪ್ಲಾಟ್ ನಲ್ಲಿರುವ ಎಸ್.ಡಿ.ಪಿ.ಐ ಮುಖಂಡ (SDPI Leader) ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ‌ ದಾಳಿ ಮಾಡಲಾಗಿದೆ. ದಿಢೀರ್ ದಾಳಿ ಮಾಡಿ ಎನ್.ಐ.ಎ. ತಂಡ ಭರ್ಜರಿ ಶಾಕ್ (Shock) ನೀಡಿದೆ. ಬೆಳಗಿನ ಜಾವ ನಾಲ್ಕು ಗಂಟೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10 ಜನ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಮನೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿ ಅಧಿಕಾರಿಗಳು ಮರಳಿದ್ದಾರೆ. ಹಳೇ ಹುಬ್ಬಳ್ಳಿ (Hubballi) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮತ್ತೊಂದೆಡೆ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ದಾಳಿ, ಪರಿಶೀಲನೆ ಮಾಡಿದ್ದಾರೆ.


ಹುಬ್ಬಳ್ಳಿಯಲ್ಲಿ ಎಸ್.ಡಿ.ಪಿ.ಐ ಮುಖಂಡನ ನಿವಾಸದ ಮೇಲಿನ NIA ದಾಳಿ ಅಂತ್ಯಗೊಂಡ ನಂತರ ಇಸ್ಮಾಯಿಲ್ ನಾಲಬಂದ್ ಪ್ರತಿಕ್ರಿಯಿಸಿದ್ದು, ನಾನು ಕಳೆದ ಆರು ವರ್ಷದಿಂದ ಎಸ್.ಡಿ.ಪಿ.ಐ. ನಲ್ಲಿ ಕೆಲಸ‌ ಮಾಡುತ್ತಿದ್ದೇನೆ. ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಎನ್.ಐ.ಎ ಅಧಿಕಾರಿಗಳು ಬಂದು ಬಾಗಿಲು ತಟ್ಟಿದರು. ಒಳ ಬಂದ ನಂತರ ಇಡೀ ಮನೆ ಪರಿಶೀಲಿಸಿದ್ದಾರೆ. ನಾವು ಸಹಕಾರ ನೀಡಿದ್ದೇವೆ. ಅವರು ಸಹ ಸೌಜನ್ಯ ಪೂರ್ವಕವಾಗಿ ನಡೆಸಿಕೊಂಡರು ಎಂದಿದ್ದಾರೆ.




ಇಸ್ಮಾಯಿಲ್ ಕಿರಿಯ ಮಗನ ಮೇಲೆ ಅನುಮಾನ


ಎನ್.ಐ.ಎ. ತಂಡ ನಮ್ಮ ಕಿರಿಯ ಮಗನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂದು ಸಂಜೆ ಅಥವಾ ಈ ತಿಂಗಳ ಏಳನೇ ತಾರೀಖಿನಂದು ಬೆಂಗಳೂರು ನಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಈ ವಿಚಾರಣೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. SDPI ಗೂ PFI ಗೂ ಯಾವುದೇ ಸಂಬಂಧವಿಲ್ಲ. ಅವರ ತತ್ವ ಸಿದ್ದಾಂತಗಳೇ ಬೇರೆ. ನಮ್ಮ ಸಿದ್ದಾಂತಗಳೇ ಬೇರೆ. ಆದರೆ ಪಿಎಫ್ಐ ಪಕ್ಷದ ಕೆಲವರು ನಮ್ಮ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


ಇದನ್ನೂ ಓದಿ: Potholes in Bengaluru: ಅಪಘಾತ ತಪ್ಪಿಸಲು ಅಖಾಡಕ್ಕಿಳಿದ ಖಾಕಿ! ಟ್ರಾಫಿಕ್ ಪೊಲೀಸರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ


ಎನ್.ಐ.ಎಗೆ ಏನೂ ಸಿಕ್ಕಿಲ್ಲ ಎಂದ ಇಸ್ಮಾಯಿಲ್


ಮನೆಯವರೆಲ್ಲರನ್ನೂ ವಿಚಾರಣೆ ಮಾಡಿದ್ದಾರೆ ಅವರಿಗೇನೂ ಇಲ್ಲಿ ಸಿಕ್ಕಿಲ್ಲ. ನನ್ನ ಕಿರಿಯ ಮಗ ಕಂಪ್ಯೂಟರ್ ಕೋರ್ಸ್ ಮುಗಿಸಿದ್ದಾನೆ. ಬೆಳಗಾವಿಗೆ ಹೋಗಿದ್ದಾನೆ. ಹೀಗಾಗಿ ಅವರಿಗೆ ಅನುಮಾನ ಬಂದಿದೆ. ಅವನನ್ನೇ ಕರೆತಂದು ವಿಚಾರಣೆಗೊಳಪಡಿಸಲು ತಿಳಿಸಿದ್ದಾರೆ, ಅದನ್ನ ಮಾಡ್ತೇವೆ ಎಂದು ಇಸ್ಮಾಯಿಲ್ ಹೇಳಿದ್ದಾನೆ. ಹುಬ್ಬಳ್ಳಿಯ ಕೆಇಬಿ ಪ್ಲಾಟ್ ನಲ್ಲಿ ಇರುವ ಇಸ್ಮಾಯಿಲ್ ನಾಲಾಬಂದ್ ಮನೆ ಮೇಲೆ ಎನ್.ಐ.ಎ. ದಾಳಿ ಮಾಡಿತ್ತು.


ಮಹಿಳೆಯ ಚಿನ್ನಾಭರಣ, ನಗದು ಕದ್ದ ಭೂಪ ಅರೆಸ್ಟ್


ಪತಿಯ ಜೊತೆಗೆ ಇದ್ದವಳನ್ನು ಯಾಮಾರಿಸಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕರೆತಂದ ಭೂಪನೋರ್ವ ಆಕೆಗೇ ವಂಚಿಸಿ ಎಸ್ಕೇಪ್ ಆದ ಘಟನೆ ನಡೆದಿದೆ. ಮಹಿಳೆ ಬಳಿ ಇದ್ದ ಆಭರಣ ಮತ್ತಿತರ ವಸ್ತು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಹೀಗೆ ಮಹಿಳೆಯನ್ನು ವಂಚಿಸಿದ ಖದೀಮನನ್ನು ಅರವಿಂದ್ ಎಂದು ಗುರುತಿಸಲಾಗಿದೆ.


ಇದನ್ನೂ ಓದಿ: JDS Party: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ರಣತಂತ್ರ, ಅಭ್ಯರ್ಥಿಗಳಿಗೆ ರಹಸ್ಯ ಸ್ಥಳದಲ್ಲಿ ತರಬೇತಿ!


ಬೆಂಗಳೂರಿನಿಂದ ಮಹಿಳೆಯನ್ನು ಹುಬ್ಬಳ್ಳಿಗೆ ಕರೆತಂದಿದ್ದ ಅರವಿಂದ್, ಆಕೆಯ ಬಳಿ ಇದ್ದ 2.20 ಲಕ್ಷ ರೂಪಾಯಿ ಮೌಲ್ಯದ 55 ಗ್ರಾಮ್ ಚಿನ್ನಾಭರಣ, ಬೆಳ್ಳಿ ಆಭರಣ, ಒಂದು ಮೊಬೈಲ್, 15 ಸಾವಿರ ನಗದು ದೋಚಿ ಪರಾರಿಯಾಗಿದ್ದ. ಕೊನೆಗೂ ಎಚ್ಚೆತ್ತುಕೊಂಡ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ಮಹಿಳೆಯ ದೂರನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅರವಿಂದ ಹಲವು ಮಹಿಳೆಯರಿಗೆ ಇದೇ ರೀತಿ ವಂಚಿಸಿದ್ದಾನೆಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:ಪಾವನ ಎಚ್ ಎಸ್
First published: