HOME » NEWS » State » NIA OFFICERS RAID ACROSS INDIA INCLUDING BANGALORE AND ARREST THREE ACCUSED KMTV LG

NIA Raid: ಬೆಂಗಳೂರು ಸೇರಿ 11 ಕಡೆ ಎನ್ಐಎ ದಾಳಿ; ಕೇರಳ ಮೂಲದ ಡಾಕ್ಟರ್ ಸೇರಿ ಮೂವರ ಬಂಧನ

ಮೊಹಮ್ಮದ್ ಅಮೀನ್ ನೇತೃತ್ವದಲ್ಲಿ ಯುವಕರ ಸೆಳೆದು ತರಬೇತಿ ನೀಡಿ ಬಳಿಕ ಕೇರಳ ಮತ್ತು ಕರ್ನಾಟಕದಲ್ಲಿ ಹಲವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಎನ್ಐಎ ತನಿಖೆ ವೇಳೆ ತಿಳಿದು ಬಂದಿದೆ.

news18-kannada
Updated:March 16, 2021, 9:15 AM IST
NIA Raid: ಬೆಂಗಳೂರು ಸೇರಿ 11 ಕಡೆ ಎನ್ಐಎ ದಾಳಿ; ಕೇರಳ ಮೂಲದ ಡಾಕ್ಟರ್ ಸೇರಿ ಮೂವರ ಬಂಧನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.16): ಐಸಿಸ್ ಬಗ್ಗೆ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ವೈದ್ಯ ಸೇರಿ ಮೂವರನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಸೋಮವಾರ ಬೆಂಗಳೂರು ಸೇರಿದಂತೆ ದೇಶದ 11 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿ ಶೋಧ ನಡೆಸಿದ್ದರು. ಈ ವೇಳೆ ಬೆಂಗಳೂರಿನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ ಕೇರಳ ಮೂಲದ ವ್ಯಕ್ತಿಯನ್ನ ಎನ್ಐಎ ಬಂಧಿಸಿದ್ದು ಆತನ ಹೆಸರು ರಾಹೀಸ್ ರಷೀದ್‌ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಐಸಿಸ್ ಉಗ್ರವಾದ ಪ್ರಚಾರ ಮಾಡುತ್ತಿದ್ದ ಆರೋಪದಡಿ ಎನ್ಐಎ ಅಧಿಕಾರಿಗಳು ಕೇರಳದ ಎಂಟು ಕಡೆ, ಬೆಂಗಳೂರಿನ ಎರಡು ಕಡೆ ಮತ್ತು ದೆಹಲಿಯ ಒಂದು ಕಡೆ ದಾಳಿ ನಡೆಸಿ ಶೋಧ ಕೈಗೊಂಡಿದ್ದರು. ಕೇರಳ ಮೂಲದ ಶಂಕಿತ ಉಗ್ರ ಮೊಹಮ್ಮದ್ ಅಮೀನ್ ನೇತೃತ್ವದ ಶಂಕಿತರ ಗುಂಪು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಐಸಿಸ್ ತತ್ವ ಸಿದ್ದಾಂತಗಳನ್ನ ಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಎನ್ಐಎ ಅಧಿಕಾರಿಗಳು ದೆಹಲಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದರು.

ಮೊಹಮ್ಮದ್ ಅಮೀನ್ ಐಸಿಸ್ ಬಲಗೊಳಿಸುವ ಸಲುವಾಗಿ ಯುವಕರನ್ನ ಪ್ರೇರೇಪಿಸಿ ಸಂಘಟನೆಗೆ ಸೇರಿಸಿಕೊಳ್ಳಲು ನೇಮಕ ಮಾಡುತ್ತಿದ್ದ. ಧಾರ್ಮಿಕ ಸಭೆ ನೆಪದಲ್ಲಿ ಯುವಕರನ್ನ ಒಟ್ಟುಗೂಡಿಸಿ ಸಂಘಟನೆ ಮಾಡುತ್ತಿದ್ದ ಎಂದು ಎನ್ಐಎ ತನಿಖೆಯಿಂದ ಬೆಳಕಿಗೆ ಬಂದಿದೆ. ಮೊಹಮ್ಮದ್ ಅಮೀನ್ ಒಳಸಂಚು ಬಯಲಿಗೆಳೆಯುವ ಸಲುವಾಗಿ ಎನ್ಐಎ ಕೇರಳದ ಮಲ್ಲಪುರಂ, ಕೊಲ್ಲಂ, ಕಾಸರಗೋಡು, ಕಣ್ಣೂರು, ದೆಹಲಿ ಹಾಗೂ ಬೆಂಗಳೂರಿನ ಕೆಂಗೇರಿಯ ಕ್ಲಿನಿಕ್, ಬಿಟಿಎಂ ಲೇಔಟ್ ಒಂದನೇ ಹಂತದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

Belagavi Border Dispute: ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದದ ಪ್ರಸ್ತಾಪ: ಶಿವಸೇನೆಗೆ ತಕ್ಕ ಉತ್ತರ ನೀಡಿದ ರಾಜ್ಯದ ಸಂಸದರು

ಎನ್ಐಎ ದಾಳಿ ವೇಳೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದ ವೈದ್ಯ ರಾಹೀಸ್ ರಷೀದ್‌ ಅವರ ಕೆಂಗೇರಿ ಕ್ಲಿನಿಕ್ ಶೋಧ ನಡೆಸಲಾಗಿದೆ. ಶಂಕಿತ ಉಗ್ರ ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಯಾಹ್ಯಾ ಐಸಿಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದು, ಜಿಹಾದಿ ಬಗ್ಗೆ ಬೋಧನೆ ಮಾಡಿ ಐಸಿಸ್ ಗೆ ಯುವಕರನ್ನ ಸೆಳೆಯುವ ಯತ್ನ  ಮಾಡುತ್ತಿದ್ದ ಎನ್ನಲಾಗಿದೆ.

ಮೊಹಮ್ಮದ್ ಅಮೀನ್ ನೇತೃತ್ವದಲ್ಲಿ ಯುವಕರ ಸೆಳೆದು ತರಬೇತಿ ನೀಡಿ ಬಳಿಕ ಕೇರಳ ಮತ್ತು ಕರ್ನಾಟಕದಲ್ಲಿ ಹಲವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಎನ್ಐಎ ತನಿಖೆ ವೇಳೆ ತಿಳಿದು ಬಂದಿದೆ. 2020 ರಲ್ಲಿ ಬಹ್ರೇನ್ ನಿಂದ ಭಾರತಕ್ಕೆ ಬಂದಿದ್ದ ಮೊಹಮ್ಮದ್ ಅಮೀನ್ ಎರಡು ತಿಂಗಳು ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದ‌ ನಂತರ ಐಸಿಸ್ ನಂಟು ವಿಸ್ತರಿಸಲು ಜಮ್ಮು ಕಾಶ್ಮೀರದ ಕೆಲವರೊಂದಿಗೆ ಸೇರಿ ಕಾರ್ಯಾಚರಣೆ ಆರಂಭಿಸಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮೊಹಮ್ಮದ್ ಅಮೀನ್ ಗೆ ಸೇರಿದ ಸಹಚರರ ಮನೆ ಮೇಲೆ ದಾಳಿ ನಡೆಸಿದೆ.  ಹಾಗೂ ಬೇರೆಬೇರೆ ಗ್ರೂಪ್ ಗಳಲ್ಲಿ ಅಕ್ಟಿವ್ ಅಗಿದ್ದವರ ಮೇಲೆ ದಾಳಿ ನಡೆಸಿ ಶೋಧ ಮಾಡಲಾಗಿದೆ.
Youtube Video
ದಾಳಿ ವೇಳೆ ಲ್ಯಾಪ್ ಟಾಪ್, ಮೊಬೈಲ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್‌, ಸಿಮ್ ಕಾರ್ಡ್ ಗಳು, ಸರ್ವಿಸ್ ಪ್ರೊವೈಡರ್ ಗಳು, ಹಾಗೂ ದಾಖಲೆಗಳು ವಶಕ್ಕೆ ಪಡೆಯಲಾಗಿದ್ದು ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ. ಎನ್ಐಎ, ದೆಹಲಿ ಪೊಲೀಸರು, ಎಟಿಎಸ್, ಕೇರಳ ಪೊಲೀಸರು ಹಾಗೂ ಸ್ಪೆಷಲ್ ಸೆಲ್‌ ನಿಂದ  ದಾಳಿ ನಡೆಸಲಾಗಿದೆ ಎಂದು ಎನ್ಐಎ ಮಾಹಿತಿ ನೀಡಿದೆ.
Published by: Latha CG
First published: March 16, 2021, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories